ಚಿತ್ರದುರ್ಗ : ಹಿರಿಯೂರು ತಾಲ್ಲೂಕಿನ ಉಡುವಳ್ಳಿಯಲ್ಲಿರುವ ಪಿಎಮ್ ಶ್ರೀ ಜವಾಹರ್ ನವೋದಯ ವಿದ್ಯಾಲಯ 2026-27ನೇ ಸಾಲಿನ 9 ಮತ್ತು 11ನೇ ತರಗತಿಗೆ ದಾಖಲಾತಿ ಬಯಸಿ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಪ್ರವೇಶ ಪರೀಕ್ಷೆಯು 2026ರ ಫೆಬ್ರವರಿ 07ರಂದು ಹಿರಿಯೂರು ತಾಲ್ಲೂಕಿನಲ್ಲಿ ಈಗಾಗಲೇ ನಿಗದಿಪಡಿಸಿರುವ ಕೇಂದ್ರಗಳಲ್ಲಿ ನಡೆಯಲಿದೆ.
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು https://www.navodaya.gov.in/nvs/en/Home1/ ವೆಬ್‍ಸೈಟ್‍ನಿಂದ ತಮ್ಮ ಮಕ್ಕಳ ಅರ್ಜಿಯ ರಿಜಿಸ್ಟರ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿ ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದು ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲರು ತಿಳಿಸಿದ್ದಾರೆ.
ಎನ್.ಸಿ.ಸಿ ಯಲ್ಲಿ ಮಾಜಿ ಸೈನಿಕರಿಗೆ ಒಪ್ಪಂದದ ಮೇರೆಗೆ ಬೋಧಕರ ಹುದ್ದೆಗೆ ನೇಮಕಾತಿ
ಕರ್ನಾಟಕ ಮತ್ತು ಗೋವಾ ಎನ್.ಸಿ.ಸಿ ನಿರ್ದೇಶನಾಲಯವು 2026-27 ನೇ ಸಾಲಿಗಾಗಿ ಮಾಜಿ ಸೈನಿಕರನ್ನು ಒಪ್ಪಂದದ ಮೇರೆಗೆ 30 ಎನ್.ಸಿ.ಸಿ ಬೋಧಕರ ಹುದ್ದೆಗೆ ಕೆಲವು ಷರತ್ತುಗಳೊಂದಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಜ.25 ಕೊನೆಯ ದಿನಾಂಕವಾಗಿದೆ.
ಆಸಕ್ತರು ಅರ್ಜಿಯನ್ನು ಇಮೇಲ್ [email protected] ಮೂಲಕ ಮತ್ತು ಅಂಚೆ ವಿಳಾಸ NCC Dte (Karnataka and Goa) KSCMF, Building, 4th Floor, No-8, Cunningham Road, Bengaluru-560001 ಮೂಲಕ ಸಲ್ಲಿಸಬೇಕಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ https://nccindia.gov.in ಜಾಲತಾಣವನ್ನು ಅಥವಾ ಮೊಬೈಲ್ 9481405092 ಗೆ ಸಂಪರ್ಕಿಸಬಹುದಾಗಿದೆ ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ಡಾ.ಸಿ.ಎ.ಹಿರೇಮಠ ತಿಳಿಸಿದ್ದಾರೆ.

