HomeSpecialViral news:ಜಾಬ್ ಮಾಡೋಕೆ ನೆದರ್‌ಲ್ಯಾಂಡ್ ನಂಬರ್ 1: ಭಾರತೀಯ ಟೆಕ್ಕಿ ಕೊಟ್ಟ 7 ಪವರ್‌ಫುಲ್ ಕಾರಣಗಳು

Viral news:ಜಾಬ್ ಮಾಡೋಕೆ ನೆದರ್‌ಲ್ಯಾಂಡ್ ನಂಬರ್ 1: ಭಾರತೀಯ ಟೆಕ್ಕಿ ಕೊಟ್ಟ 7 ಪವರ್‌ಫುಲ್ ಕಾರಣಗಳು

ಬೆಂಗಳೂರು: ಇಂದಿನ ದಿನಗಳಲ್ಲಿ ವಿದೇಶಕ್ಕೆ ಹೋಗಿ ನೆಲೆಸಬೇಕು, ಅಲ್ಲಿನ ಡಾಲರ್ ಅಥವಾ ಯುರೋಗಳಲ್ಲಿ ಸಂಪಾದಿಸಬೇಕು ಎಂಬುದು ಪ್ರತಿಯೊಬ್ಬ ಭಾರತೀಯ ಯುವಕನ ದೊಡ್ಡ ಕನಸು. ಆದರೆ, ವಿದೇಶಿ ಕೆಲಸ ಅಂದ ತಕ್ಷಣ ನಮಗೆ ಮೊದಲು ನೆನಪಾಗುವುದು ಅಮೆರಿಕದ ನ್ಯೂಯಾರ್ಕ್ ಅಥವಾ ಬ್ರಿಟನ್‌ನ ಲಂಡನ್ ನಗರಗಳು ಮಾತ್ರ. ಆದರೆ ಈಗ ಟ್ರೆಂಡ್ ಬದಲಾಗಿದೆ. ಭಾರತೀಯ ವೃತ್ತಿಪರರು ಈಗ ಯುರೋಪ್‌ನ ಸುಂದರ ದೇಶ ನೆದರ್ಲ್ಯಾಂಡ್ಸ್ ಕಡೆಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ.

ಅಷ್ಟಕ್ಕೂ ಎಲ್ಲರೂ ನೆದರ್ಲ್ಯಾಂಡ್ಸ್ ಬಗ್ಗೆಯೇ ಯಾಕೆ ಮಾತಾಡ್ತಿದ್ದಾರೆ? ಅಲ್ಲಿ ಅಂತಹ ವಿಶೇಷತೆ ಏನಿದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ ಭಾರತೀಯ ಮೂಲದ ಫೈನಾನ್ಸ್ ವೃತ್ತಿಪರ ಅನುಜ್ ಶರ್ಮಾ. ನೆದರ್ಲ್ಯಾಂಡ್ಸ್‌ನಲ್ಲಿ ನೆಲೆಸಿರುವ ಅನುಜ್ ತಾವು ಈ ದೇಶವನ್ನೇ ಯಾಕೆ ಆರಿಸಿಕೊಂಡೆ ಎಂಬ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.ಅನುಜ್ ಶರ್ಮಾ ಅವರ ಪ್ರಕಾರ, ನೆದರ್ಲ್ಯಾಂಡ್ಸ್ ಅನ್ನು ವೃತ್ತಿಜೀವನಕ್ಕೆ ಬೆಸ್ಟ್ ಎನ್ನಲು ಈ 7 ಪ್ರಮುಖ ಕಾರಣಗಳೇ ಮೂಲ:

ಟ್ಯಾಕ್ಸ್ ಉಳಿತಾಯದ ‘ಮಾಸ್ಟರ್ ಪ್ಲಾನ್’ (30% Ruling):

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೆದರ್ಲ್ಯಾಂಡ್ಸ್‌ನಲ್ಲಿ ಉದ್ಯೋಗಕ್ಕೆ ಸೇರಿದರೆ ನಿಮ್ಮ ಸಂಬಳದ ಪೂರ್ಣ ಮೊತ್ತಕ್ಕೆ ತೆರಿಗೆ ಕಟ್ಟಬೇಕಿಲ್ಲ ಅಲ್ಲಿನ ಸರ್ಕಾರದ 30% ರೂಲಿಂಗ್ (30% Ruling) ಎಂಬ ವಿಶೇಷ ನಿಯಮದಡಿ ವಿದೇಶಿ ಉದ್ಯೋಗಿಗಳಿಗೆ ಮೊದಲ ಐದು ವರ್ಷಗಳ ಕಾಲ ಅವರ ಒಟ್ಟು ಸಂಬಳದ ಶೇ. 30ರಷ್ಟು ಭಾಗಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ಸಿಗುತ್ತದೆ. ಅಂದರೆ ನಿಮ್ಮ ಆದಾಯದ ಬಹುಪಾಲು ನೇರವಾಗಿ ನಿಮ್ಮ ಜೇಬಿಗೆ ಸೇರುತ್ತದೆ. ಇದರಿಂದಾಗಿ ಇತರ ದೇಶಗಳಿಗೆ ಹೋಲಿಸಿದರೆ ನೆದರ್ಲ್ಯಾಂಡ್ಸ್‌ನಲ್ಲಿ ಕೈಗೆ ಸಿಗುವ ನಿವ್ವಳ ಸಂಬಳ (In-hand salary) ಗಣನೀಯವಾಗಿ ಹೆಚ್ಚಿರುತ್ತದೆ. ಇದು ಕೇವಲ ಉಳಿತಾಯ ಮಾತ್ರವಲ್ಲ, ಹೊಸ ದೇಶದಲ್ಲಿ ಆರ್ಥಿಕವಾಗಿ ಭದ್ರವಾಗಿ ನೆಲೆಸಲು ಸಿಗುವ ಬಹುದೊಡ್ಡ ಬೋನಸ್ ಎನ್ನಬಹುದು

ಉದ್ಯೋಗ ಭದ್ರತೆ (Job Security): ಇಲ್ಲಿನ ಕಾರ್ಮಿಕ ಕಾನೂನುಗಳು ಅತ್ಯಂತ ಕಟ್ಟುನಿಟ್ಟಾಗಿವೆ. ಉದ್ಯೋಗಿಗಳ ಹಕ್ಕುಗಳಿಗೆ ಹೆಚ್ಚಿನ ಮಾನ್ಯತೆ ಇರುವುದರಿಂದ ಕೆಲಸದ ಭದ್ರತೆಯ ಭಾವನೆ ಇರುತ್ತದೆ.

ಭಾಷೆಯ ತೊಂದರೆ ಇಲ್ಲ: ಅಲ್ಲಿನ ಶೇ. 98ರಷ್ಟು ಜನರಿಗೆ ಇಂಗ್ಲಿಷ್ ತಿಳಿದಿದೆ. ಹಾಗಾಗಿ ಡಚ್ ಭಾಷೆ ಬಾರದಿದ್ದರೂ ನೀವು ಆರಾಮವಾಗಿ ಅಲ್ಲಿ ಬದುಕಬಹುದು.

ವರ್ಕ್-ಲೈಫ್ ಬ್ಯಾಲೆನ್ಸ್: ಕೆಲಸವೇ ಜೀವನವಲ್ಲ ಎಂಬ ತತ್ವ ಇಲ್ಲಿ ಅಕ್ಷರಶಃ ಪಾಲನೆಯಾಗುತ್ತದೆ. ನಿಗದಿತ ಸಮಯಕ್ಕೆ ಕೆಲಸ ಮುಗಿಸಿ, ಕುಟುಂಬದೊಂದಿಗೆ ಸಮಯ ಕಳೆಯಲು ಇಲ್ಲಿ ಪೂರ್ಣ ಸ್ವಾತಂತ್ರ್ಯವಿದೆ.

ಉನ್ನತ ಜೀವನ ಮಟ್ಟ: ಸುರಕ್ಷಿತ ರಸ್ತೆಗಳು, ಮಾಲಿನ್ಯ ಮುಕ್ತ ನಗರಗಳು ಮತ್ತು ಪ್ರಶಾಂತ ಜೀವನ ಇಲ್ಲಿನ ಪ್ಲಸ್ ಪಾಯಿಂಟ್ಸ್.

ಸೈಕ್ಲಿಂಗ್ ಸಂಸ್ಕೃತಿ: ಇಲ್ಲಿ ಐಷಾರಾಮಿ ಕಾರುಗಳಿಗಿಂತ ಸೈಕಲ್ ಮತ್ತು ಸಾರ್ವಜನಿಕ ಸಾರಿಗೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಇದು ಆರೋಗ್ಯಕ್ಕೂ ಒಳ್ಳೆಯದು, ಜೇಬಿಗೂ ಸುಲಭ.

ವ್ಯವಸ್ಥಿತ ಆಡಳಿತ (Structured System): ಸರಕಾರಿ ಕೆಲಸಗಳಿಂದ ಹಿಡಿದು ವೈಯಕ್ತಿಕ ಸೇವೆಗಳವರೆಗೆ ಎಲ್ಲವೂ ಅಚ್ಚುಕಟ್ಟಾಗಿ ನಡೆಯುವುದರಿಂದ ಅನಗತ್ಯ ಗೊಂದಲಗಳಿರುವುದಿಲ್ಲ.

https://www.instagram.com/reel/DTgM9zEiMcw/?utm_source=ig_web_copy_link

ಉದ್ಯೋಗ ಪಡೆಯುವುದು ಹೇಗೆ? (ಅನುಜ್ ಅವರ ಸಲಹೆ)

ನೆದರ್ಲ್ಯಾಂಡ್ಸ್‌ನಲ್ಲಿ ಉದ್ಯೋಗ ಹುಡುಕುತ್ತಿರುವ ಭಾರತೀಯರಿಗೆ ಅನುಜ್ ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ:

ವಿದೇಶಿ ಉದ್ಯೋಗಿಗಳಿಗೆ ವೀಸಾ ಪ್ರಾಯೋಜಕತ್ವ (Visa Sponsoring) ನೀಡುವ ಕಂಪನಿಗಳ ಪಟ್ಟಿಯನ್ನು ಮೊದಲು ಪರಿಶೀಲಿಸಿ.

ಅಂತಹ ಕಂಪನಿಗಳ ಅಧಿಕೃತ ಕರಿಯರ್ ಪೇಜ್ (Career Page) ಗೆ ಭೇಟಿ ನೀಡಿ.

ನೆದರ್ಲ್ಯಾಂಡ್ಸ್‌ನಲ್ಲಿ ವಾರಕ್ಕೆ ಸರಾಸರಿ 29 ರಿಂದ 36 ಗಂಟೆಗಳ ಕಾಲ ಮಾತ್ರ ಕೆಲಸ ಮಾಡಲಾಗುತ್ತದೆ. ಇತ್ತೀಚೆಗೆ ಒಬ್ಬ ಉದ್ಯೋಗಿ ಬೆಳಿಗ್ಗೆ 6 ಗಂಟೆಗೆ ಇಮೇಲ್ ಕಳಿಸಿದ್ದಕ್ಕೆ ಮ್ಯಾನೇಜ್‌ಮೆಂಟ್‌ನವರು ಆತನ ಮೇಲೆ ಅತಿಯಾದ ಕೆಲಸದ ಒತ್ತಡ ಇದೆಯೇ ಎಂದು ವಿಚಾರಿಸಲು ಮೀಟಿಂಗ್ ಕರೆದಿದ್ದರಂತೆ ಅಷ್ಟರ ಮಟ್ಟಿಗೆ ಅಲ್ಲಿನ ಕಂಪನಿಗಳು ಉದ್ಯೋಗಿಗಳ ನೆಮ್ಮದಿಗೆ ಪ್ರಾಮುಖ್ಯತೆ ನೀಡುತ್ತವೆ.

ನಿಮ್ಮ ಅರ್ಹತೆಗೆ ತಕ್ಕ ಉದ್ಯೋಗವಿದ್ದರೆ ನೇರವಾಗಿ ಅಲ್ಲಿಯೇ ಅರ್ಜಿ ಸಲ್ಲಿಸಿ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular