HomeKarnatakaಕರ್ನಾಟಕಕ್ಕೂ ಬಂತು SIR, ಮತದಾರರಿಗೆ ಮಾಹಿತಿಗಳು

ಕರ್ನಾಟಕಕ್ಕೂ ಬಂತು SIR, ಮತದಾರರಿಗೆ ಮಾಹಿತಿಗಳು

ವಿವಿಧ ಕಾರಣಕ್ಕೆ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಸುದ್ದಿಯಲ್ಲಿದೆ. ಭಾರತ ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಫೆಬ್ರವರಿಯಲ್ಲಿ ಕರ್ನಾಟಕದಲ್ಲಿಯೂ ಆರಂಭವಾಗಲಿದೆ.

ಚುನಾವಣಾ ಆಯೋಗದ ನಿರ್ದೇಶನದಂತೆ 2002ರ ಮತದಾರರ ಪಟ್ಟಿಯನ್ನು 2025ರ ಪರಿಷ್ಕೃತ ಮತದಾರರ ಪಟ್ಟಿಗೆ ಮ್ಯಾಪಿಂಗ್ ಮಾಡುವ ಕಾರ್ಯ ಈಗಾಗಲೇ ರಾಜ್ಯದಲ್ಲಿ ಪ್ರಗತಿಯಲ್ಲಿದೆ. ಈ ಪ್ರಕ್ರಿಯೆಯು ಪ್ರತಿಯೊಬ್ಬ ಮತದಾರರಿಗೂ ಅತಿ ಮಹತ್ವದ್ದಾಗಿದೆ.

ಆಯೋಗ ದಿನಾಂಕ 06-01-2025ರ ಆದೇಶವನ್ನು ಹೊರಡಿಸಿದ ದಿನಾಂಕದಲ್ಲಿ ಇದ್ದಂತೆ ಪ್ರಸ್ತುತ ಇರುವ ಪ್ರತಿಯೊಬ್ಬ ಮತದಾರನಿಗೆ ಮುಂಚಿತವಾಗಿ ಭರ್ತಿ ಮಾಡಲಾದ ಗಣತಿ ನಮೂನೆಯು ಲಭ್ಯವಿರತಕ್ಕದ್ದು ಮತ್ತ ಕರಡು ಮತದಾರನಿಗೆ ಪಟ್ಟಿಯು 2025ರ ಜುಲೈ 25ನೇ ದಿನಾಂಕಕ್ಕಿಂತ ಮುಂಚೆ ಭರ್ತಿ ಮಾಡಿ ಸಲ್ಲಿಸಲಾಗಿರುವಂತಹ ಎಲ್ಲಾ ಮತದಾರರ ಹೆಸರುಗಳನ್ನು ಒಳಗೊಂಡಿರಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತ ಸಂವಿಧಾನದ ಅನುಚ್ಛೇದ 32 ಜನತಾ ಪ್ರಾತಿನಿಧ್ಯ ಅಧಿನಿಯಮ, 1950 (ಆರ್‌ಪಿಎ 1950) ರ ಅನುಸಾರ ಮತದಾರದ ಸಿದ್ಧಪಡಿಸುವಿಕೆಯು, ಮತದಾರರ ಪಟ್ಟಿಯಲ್ಲಿ ಎಲ್ಲಾ ಅರ್ಹ ನಾಗರೀಕರು ಸೇಪರ್ಡೆಗೊಂಡಿರುವುದನ್ನು ಮತ್ತು ಅಂತಹ ಯಾರೇ ನಾಗರೀಕರರನ್ನು ಮತದಾರರ ಪಟ್ಟಿಯಿಂದ ಹೊರಗಿಡದಿರುವುದನ್ನು ಖಾತ್ರಿಪಡಿಸಬೇಕಾಗಿರುವುದರಿಂದ, ಭಾರತದ ನಾಗರೀಕರಾಗಿರುವ ಮತ್ತು ಅರ್ಹತಾ ದಿನಾಂಕದಂದು 18 ವರ್ಷಗಳ ವಯಸ್ಸಿಗಿಂತ ಕಡಿಮೆ ಇಲ್ಲದಿರುವ ಮತ್ತು ಯಾವುದೇ ಕಾನೂನಿನ ಮೇರೆಗೆ ಅನರ್ಹನಾಗಿಲ್ಲದ ಪ್ರತಿಯೊಬ್ಬ ವ್ಯಕ್ತಿಯು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಲು ಹಕ್ಕುಳ್ಳವನಾಗಿರತಕ್ಕದೆಂದು ಸಂವಿಧಾನದ 326ನೇ ಅನುಚ್ಛೇದವು ಗೊತ್ತುಪಡಿಸಿದೆ.

ಕಳೆದ 20 ವರ್ಷಗಳ ಸುಧೀರ್ಘ ಅವಧಿಯಲ್ಲಿ ಅತೀ ದೊಡ್ಡ ಪ್ರಮಾಣದಲ್ಲಿ ಸೇರ್ಪಡೆಗಳು ಮತ್ತು ಬಿಟ್ಟುಬಿಡುವಿಕೆಗಳ ಕಾರಣದಿಂದಾಗಿ ಮತದಾರರ ಪಟ್ಟಿಯಲ್ಲಿ ಗಮನಾರ್ಹ ಬದಲಾವಣೆಯಾಗಿರುವುದು ಆಯೋಗದ ಗಮನಕ್ಕೆ ಬಂದಿರುವುದರಿಂದ, ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಗಳನ್ನು ವಿಶೇಷ ಸಮಗ್ರ ಪರಿಷ್ಕರಣೆಯ ಅಡಿಯಲ್ಲಿ ಚುನಾವಣಾ ಆಯೋಗ ಕೈಗೊಂಡಿದೆ.

ಮತದಾರರಿಗೆ ಸ್ಪಷ್ಟನೆಗಳು

  • ಈ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಮತದಾರರ ಪಟ್ಟಿಯಿಂದ ಯಾವುದೇ ಮತದಾರರ ಹೆಸರುಗಳನ್ನು ತೆಗೆದು ಹಾಕುವ ಅಥವಾ ಸೇರ್ಪಡೆ ಮಾಡುವ ಕಾರ್ಯವನ್ನು ಮಾಡುತ್ತಿಲ್ಲ.
  • ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶದನಂತೆ ವಿಶೇಷ ಸಮಗ್ರ ಪರಿಷ್ಕರಣೆ. 2025ರ ಮತದಾರರ ಯಾದಿಯಲ್ಲಿ ನೋಂದಣಿಯಾದ ಮತದಾರರನ್ನು 2002ರ ಪಟ್ಟಿಗೆ ತಾಳೆ ಮಾಡುವ ಕಾರ್ಯ ಕೈಗೊಳ್ಳಲಾಗಿರುತ್ತದೆ. ಮ್ಯಾಪಿಂಗ್ ಅಂದರೆ 2002ರ ಮತದಾರರ ಪಟ್ಟಿಯನ್ನು 2025ರ ಮತದಾರರ ಪಟ್ಟಿಗೆ ಜೋಡಣೆ ಮಾಡುವುದು.
  • ಪ್ರೊಜೆನಿ ಮ್ಯಾಪಿಂಗ್ ಅಂದರೆ 2002ರ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರುಗಳು ನೋಂದಣಿಯಾಗದಿದ್ದಲ್ಲಿ ಅವರ ತಂದೆ, ತಾಯಿಯವರ ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆ ಅಥವಾ ಅಜ್ಜ ಅಜ್ಜಿಯರ ಭಾಗಸಂಖ್ಯೆ ಹಾಗೂ ಕ್ರಮ ಸಂಖ್ಯೆಯೊಂದಿಗೆ (ಯಾವುದಾದರೂ ಸಂಬಂಧಿಸಿದ) ಜೋಡಣೆ ಮಾಡಿಕೊಳ್ಳುವುದು.
  • ಮತದಾರರು ಕೂಡಲೇ ತಮ್ಮ ತಮ್ಮ ಮತಗಟ್ಟೆಗಳ ಅಧಿಕಾರಿ (ಬಿಎಲ್‌ಓ)ಗಳನ್ನು ಭೇಟಿ ಮಾಡಿ 2002ರ ಮತದಾರರ ಪಟ್ಟಿಗೆ 2025ರ ಮತಾರರ ಪಟ್ಟಿಯನ್ನು ಮ್ಯಾಪಿಂಗ್ ಮಾಡಿಕೊಳ್ಳುವುದು. ಹಾಗೂ 2002ರಲ್ಲಿ ಹೊರ ರಾಜ್ಯದಲ್ಲಿ ವಾಸವಿದ್ದ ಮತದಾರರು ಪ್ರಸ್ತುತ 2025ರಲ್ಲಿ ಕರ್ನಾಟಕದ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಣಿಯಾಗಿದ್ದಲ್ಲಿ ಅಂತಹ ಮತದಾರರಿಗೂ ಸಹ ಮ್ಯಾಪಿಂಗ್ ಮಾಡಿಕೊಳ್ಳಲು ಮಾನ್ಯ ಭಾರತ ಚುನಾವಣಾ ಆಯೋಗದಿಂದ ಅವಕಾಶ ನೀಡಲಾಗಿರುತ್ತದೆ.
  • 2002ರ ನಂತರ ಮದುವೆಯಾಗಿ ಬಂದಿರುವವರು ಅಥವಾ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಲಸೆ (ಸ್ಥಳಾಂತರ) ಗೊಂಡಿರುವವರು ಅಥವಾ ಹೊಸದಾಗಿ ಅರ್ಹತೆ ಪಡೆದಿರುವವರು ನಿಮ್ಮ ಮ್ಯಾಪಿಂಗ್ ಕಾರ್ಯವನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಹಾಗೂ ನೀವು ಈ ಹಿಂದೆ ವಾಸವಿದ್ದಂತಹ ತಮ್ಮ ಹಿಂದಿನ ವಿಧಾನಸಭಾ ಕ್ಷೇತ್ರದ ಸಂಖ್ಯೆ ಭಾಗ ಸಂಖ್ಯೆ ಹಾಗೂ ತಮ್ಮ ಕ್ರಮ ಸಂಖ್ಯೆ ತಿಳಿದುಕೊಂಡು ಕೂಡಲೇ ಬಿಎಲ್‌ಓ ಗೆ ವರದಿ ನೀಡುವುದು.
  • ಒಂದು ವೇಳೆ 2002ರ ಪಟ್ಟಿಯಲ್ಲಿ ನಿಮ್ಮಗಳ ಹೆಸರುಗಳು ಇಲ್ಲದಿದ್ದಲ್ಲಿ ನಿಮ್ಮಗಳ ತಂದೆ ತಾಯಿಯವರ ಭಾಗ ಸಂಖ್ಯೆ( ಪಾರ್ಟ್ ನಂ.)ಹಾಗೂ ಕ್ರಮ ಸಂಖ್ಯೆ(ಸೀರಿಯಲ್ ನಂ.)ಅಥವಾ ಅಜ್ಜ ಅಜ್ಜಿಯರ ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆಯೊಂದಿಗೆ (ಯಾವುದಾದರು ಸಂಬಂಧಿಸಿದ) ಮಾಹಿತಿಯನ್ನು ಬಿಎಲ್‌ಓ ರವರಿಗೆ ಒದಗಿಸಿ ಮ್ಯಾಪಿಂಗ್ ಮಾಡಿಸಿಕೊಳ್ಳುವುದು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular