ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದ ಜನಪ್ರಿಯ ನಟಿ ಸಂಯುಕ್ತಾ (Samyuktha) ಅವರು ಇತ್ತೀಚೆಗೆ ಸೀರೆಯಲ್ಲಿ ಮಿಂಚುತ್ತಿರುವ ತಮ್ಮ ಸುಂದರ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸುತ್ತಿರುವ ಅವರ ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳ ಮನಗೆದ್ದಿವೆ.
ಸಂಯುಕ್ತಾ ಅವರ ಸಿನಿ ಪಯಣ:
2016ರಲ್ಲಿ ಬಿಡುಗಡೆಯಾದ ‘ಪಾಪ್ಕಾರ್ನ್’ ಎಂಬ ಮಲಯಾಳಂ ಚಿತ್ರದ ಮೂಲಕ ಸಂಯುಕ್ತಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
2018ರಲ್ಲಿ ಬಂದ ‘ಲಿಲ್ಲಿ’ ಎಂಬ ರಿವೇಂಜ್ ಥ್ರಿಲ್ಲರ್ ಸಿನಿಮಾ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತು. ನಂತರ ಟೊವಿನೋ ಥಾಮಸ್ ಜೊತೆ ‘ಉಯರೆ’ ಚಿತ್ರದಲ್ಲಿ ನಟಿಸಿ ಗಮನ ಸೆಳೆದರು.
ಕನ್ನಡದಲ್ಲಿ ಸೂಪರ್ ಹಿಟ್ ಚಿತ್ರ ‘ಗಾಳಿಪಟ 2‘ ಮೂಲಕ ಪಾದಾರ್ಪಣೆ ಮಾಡಿದ ಸಂಯುಕ್ತಾ, ತಮಿಳಿನಲ್ಲಿ ಧನುಷ್ ನಟನೆಯ ‘ವಾತಿ’ (Vaathi) ಚಿತ್ರದ ಮೂಲಕ ಕಾಲಿವುಡ್ ಪ್ರೇಕ್ಷಕರ ಮನ ಗೆದ್ದರು.
https://www.instagram.com/p/DTnDR4BlaLV/?utm_source=ig_web_copy_link

