ಇಂದು ( ಜನವರಿ 18 ) ಬಿಗ್ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. 112 ದಿನಗಳ ಸುದೀರ್ಘ ದಿನಗಳನ್ನು ಕಳೆದು ಫಿನಾಲೆಗೆ ಅಶ್ವಿನಿ ಗೌಡ, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಮ್ಯೂಟೆಂಟ್ ರಘು, ಕಾವ್ಯ ಶೈವ ಹಾಗೂ ಧನುಷ್ ಪ್ರವೇಶ ಪಡೆದುಕೊಂಡರು.
ಈ ಪೈಕಿ ಧನುಷ್ ಆರನೇ ಸ್ಥಾನ ಪಡೆದುಕೊಂಡರೆ, ಮ್ಯೂಟೆಂಟ್ ರಘು ಐದನೇ ಸ್ಥಾನ ಪಡೆದರು. ಕಾವ್ಯ ಶೈವ ನಾಲ್ಕನೇ ಸ್ಥಾನ ಪಡೆದು ಮೂರನೇ ರನ್ನರ್ ಅಪ್ ಆದರು. ಟಾಪ್ 3ಗೆ ರಕ್ಷಿತಾ ಶೆಟ್ಟಿ, ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಲಗ್ಗೆ ಇಟ್ಟರು.
ಹೀಗೆ ಒಂದೆಡೆ ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆ ಜರುಗುತ್ತಿದ್ದರೆ ಮತ್ತೊಂದೆಡೆ ಮನೆಯ ಹೊರಗೆ ಗಿಲ್ಲಿ ನಟನ ಅಭಿಮಾನಿಗಳು ಹಾವಳಿ ಎಬ್ಬಿಸಿದ್ದಾರೆ. ಬಿಗ್ಬಾಸ್ ನಡೆಯುತ್ತಿರುವ ಬಿಡದಿಯ ಜಾಲಿವುಡ್ ಮುಂದೆ ಗಿಲ್ಲಿ ನಟನ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ನೆರೆದು ಗಿಲ್ಲಿ ಆಗಮನಕ್ಕಾಗಿ ಕಾಯುತ್ತಿದ್ದಾರೆ.
ಇನ್ನು ಶಬರಿಮಲೆ ಯಾತ್ರಿಕರು ಸಹ ಗಿಲ್ಲಿ ನಟನ ಕ್ರೇಜ್ ತೋರಿಸಿದ್ದು, ಅವರು ಪ್ರಯಾಣಿಸುತ್ತಿದ್ದ ಬಸ್ನಲ್ಲಿ ಬಿಗ್ಬಾಸ್ ವೀಕ್ಷಿಸುವ ಮೂಲಕ ಗಿಲ್ಲಿ ನಟ ಗೆದ್ದು ಬರಲೇಬೇಕು ಎಂದು ಆಶಿಸಿದ್ದಾರೆ.

