HomeEntertainmentಶಬರಿಮಲೆ ಯಾತ್ರೆ ಬಸ್‌ನಲ್ಲೂ ಗಿಲ್ಲಿ ಹವಾ: ಗಿಲ್ಲಿ ಗೆಲ್ಲಲೇಬೇಕು ಎಂದ ಮಾಲಾಧಾರಿಗಳು; ವಿಡಿಯೊ

ಶಬರಿಮಲೆ ಯಾತ್ರೆ ಬಸ್‌ನಲ್ಲೂ ಗಿಲ್ಲಿ ಹವಾ: ಗಿಲ್ಲಿ ಗೆಲ್ಲಲೇಬೇಕು ಎಂದ ಮಾಲಾಧಾರಿಗಳು; ವಿಡಿಯೊ

ಇಂದು ( ಜನವರಿ 18 ) ಬಿಗ್‌ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. 112 ದಿನಗಳ ಸುದೀರ್ಘ ದಿನಗಳನ್ನು ಕಳೆದು ಫಿನಾಲೆಗೆ ಅಶ್ವಿನಿ ಗೌಡ, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಮ್ಯೂಟೆಂಟ್ ರಘು, ಕಾವ್ಯ ಶೈವ ಹಾಗೂ ಧನುಷ್ ಪ್ರವೇಶ ಪಡೆದುಕೊಂಡರು.

ಈ ಪೈಕಿ ಧನುಷ್ ಆರನೇ ಸ್ಥಾನ ಪಡೆದುಕೊಂಡರೆ, ಮ್ಯೂಟೆಂಟ್ ರಘು ಐದನೇ ಸ್ಥಾನ ಪಡೆದರು. ಕಾವ್ಯ ಶೈವ ನಾಲ್ಕನೇ ಸ್ಥಾನ ಪಡೆದು ಮೂರನೇ ರನ್ನರ್ ಅಪ್ ಆದರು. ಟಾಪ್ 3ಗೆ ರಕ್ಷಿತಾ ಶೆಟ್ಟಿ, ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಲಗ್ಗೆ ಇಟ್ಟರು.

ಹೀಗೆ ಒಂದೆಡೆ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ಜರುಗುತ್ತಿದ್ದರೆ ಮತ್ತೊಂದೆಡೆ ಮನೆಯ ಹೊರಗೆ ಗಿಲ್ಲಿ ನಟನ ಅಭಿಮಾನಿಗಳು ಹಾವಳಿ ಎಬ್ಬಿಸಿದ್ದಾರೆ. ಬಿಗ್‌ಬಾಸ್ ನಡೆಯುತ್ತಿರುವ ಬಿಡದಿಯ ಜಾಲಿವುಡ್ ಮುಂದೆ ಗಿಲ್ಲಿ ನಟನ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ನೆರೆದು ಗಿಲ್ಲಿ ಆಗಮನಕ್ಕಾಗಿ ಕಾಯುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಶಬರಿಮಲೆ ಯಾತ್ರಿಕರು ಸಹ ಗಿಲ್ಲಿ ನಟನ ಕ್ರೇಜ್ ತೋರಿಸಿದ್ದು, ಅವರು ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ಬಿಗ್‌ಬಾಸ್ ವೀಕ್ಷಿಸುವ ಮೂಲಕ ಗಿಲ್ಲಿ ನಟ ಗೆದ್ದು ಬರಲೇಬೇಕು ಎಂದು ಆಶಿಸಿದ್ದಾರೆ.

video: https://www.instagram.com/reels/DTqNHk9gS4W

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

Most Popular