ಮೈಸೂರು: ಶಾಸಕ ಜನಾರ್ದನ ರೆಡ್ಡಿಯದು ಗೂಂಡಾ ಸಂಸ್ಕೃತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿಎಂ, ಶಾಸಕ ಜನಾರ್ದನ ರೆಡ್ಡಿಗೆ ಯಾವುದೇ ಸಂಸ್ಕಾರ ಇಲ್ಲ. ಅವರದು ಗೂಂಡಾ ಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದ್ದಾರೆ.
ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದ್ದು ಜನಾರ್ದನ ರೆಡ್ಡಿ. ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ಬರದಂತೆ ತಡೆ ಹಿಡಿದಿದ್ದು ಯಾಕೆ? ಸಂತೋಷ್ ಹೆಗಡೆ ಲೋಕಾಯುಕ್ತರಾಗಿದ್ದಾಗ ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ವರದಿ ನೀಡಿದ್ದರು. ಜನಾರ್ದನ ರೆಡ್ಡಿಗೆ ಯಾವುದೇ ಸಂಸ್ಕಾರ ಇಲ್ಲ, ಅವರದು ಗೂಂಡಾ ಸಂಸ್ಕೃತಿ ಎಂದರು.
ಹನುಮಂತಪ್ಪ ಪರವಾಗಿ ಬಳ್ಳಾರಿಗೆ ಚುನಾವಣಾ ಪ್ರಚಾರಕ್ಕೆ ಹೋದಾಗ ನನಗೆ ಮತ್ತು ಸಿಎಂ ಇಬ್ರಾಹಿಂಗೆ ಉಳಿದುಕೊಳ್ಳಲು ಕ್ಯಾಂಪೇನ್ ಮಾಡಲು ಎಲ್ಲಿಯೂ ಜಾಗ ನೀಡಿರಲಿಲ್ಲ. ಪ್ರಜಾಪ್ರಭುತ್ವದಲ್ಲಿ ಜನಾರ್ದನ ರೆಡ್ಡಿಗೆ ಅವರಿಗೆ ನಂಬಿಕೆ ಇಲ್ಲ. ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ಗೂಂಡಾಗಿರಿ ಮಾಡುತ್ತಾರೆ. ಅವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಸಿಎಂ ಹೇಳಿದ್ದಾರೆ.

