ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಜರುಗಿದ ಜಾಗತಿಕ ಹೂಡಿಕೆದಾರರ ಸಮಾವೇಶ(GIM2025)ದ ಬಳಿಕ 11 ತಿಂಗಳ ಅವಧಿಯಲ್ಲಿ ಸುಮಾರು 1.53 ಲಕ್ಷ ಕೋಟಿ ಹೊಸ ಕೈಗಾರಿಕಾ ಹೂಡಿಕೆಗಳನ್ನು ನಮ್ಮಸರ್ಕಾರ ಆಕರ್ಷಿಸಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಉತ್ಪಾದನೆ, ನವೀಕರಿಸಬಹುದಾದ ಇಂಧನ, ಡೇಟಾ ಸೆಂಟರ್ ಗಳು ಹಾಗೂ ಜಾಗತಿಕ ಸಾಮರ್ಥ್ಯ ಕೇಂದ್ರಗಳ ವಲಯಗಳಲ್ಲಿ (GCC) ದೇಶ-ವಿದೇಶದ ಅಗ್ರಗಣ್ಯ ಕಂಪನಿಗಳು ಕರ್ನಾಟಕದ ಮೇಲೆ ವಿಶ್ವಾಸ ವ್ಯಕ್ತಪಡಿಸಿರುವುದು ಐತಿಹಾಸಿಕ ಸಾಧನೆ ಎಂದು ಹೇಳಿದ್ದಾರೆ.
ಟೊಯೋಟಾ, ಗೂಗಲ್, ಎನ್ಟಿಟಿ, ಎಸ್ಎಪಿ, ಎಟಿ&ಎಸ್, ಕ್ಯೂಪೈಎಐ ಸೇರಿದಂತೆ ಅನೇಕ ಸಂಸ್ಥೆಗಳ ಹೂಡಿಕೆಗಳು ಉದ್ಯೋಗ ಸೃಷ್ಟಿ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಗೆ ಹೊಸ ವೇಗ ನೀಡಲಿವೆ.
ರಾಜ್ಯಕ್ಕೆ ಹೂಡಿಕೆಯನ್ನು ಆಕರ್ಷಿಸುವ ಪ್ರಯತ್ನಗಳು ನಿರಂತರವಾಗಿ ಸಾಗಿದ್ದು, ಅದು ಕೇವಲ ಹೂಡಿಕೆದಾರರ ಸಮಾವೇಶಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಈ ಅಂಶಗಳು ಸ್ಪಷ್ಟಪಡಿಸುತ್ತವೆ. ಕರ್ನಾಟಕ ಇಂದು ಹೂಡಿಕೆದಾರರ ಮೊದಲ ಆಯ್ಕೆ – ಪ್ರಗತಿಯ ಪವರ್ ಹೌಸ್ ಆಗಿದೆ ಎಂದು ತಿಳಿಸಿದ್ದಾರೆ.

