HomeEntertainmentBBK 12: ಈ ಇಬ್ಬರಲ್ಲಿ ಒಬ್ಬರು ಪಕ್ಕಾ ವಿನ್ನರ್, ಕಿಚ್ಚನ ವಿರುದ್ಧ ಟೀಕೆ: ಈ ಬಾರಿಯ...

BBK 12: ಈ ಇಬ್ಬರಲ್ಲಿ ಒಬ್ಬರು ಪಕ್ಕಾ ವಿನ್ನರ್, ಕಿಚ್ಚನ ವಿರುದ್ಧ ಟೀಕೆ: ಈ ಬಾರಿಯ ಬಿಗ್‌ಬಾಸ್‌ನ ಹೈಲೈಟ್ಸ್

ಬಿಗ್‌ಬಾಸ್ ಕನ್ನಡ ಹಲವು ಏಳುಬೀಳುಗಳನ್ನು ಕಾಣುತ್ತಾ ಬಂದಿರುವ ಈ ರಿಯಾಲಿಟಿ ಶೋಗೆ ಅದರದ್ದೇ ಆದ ಅಭಿಮಾನಿ ಬಳಗವಿದೆ. ಐಪಿಎಲ್ ಬಂದಾಗ ಹೇಗೆ ಕ್ರಿಕೆಟ್ ಪ್ರೇಮಿಗಳು ಸಂಭ್ರಮಿಸುತ್ತಾರೋ ಅದೇ ರೀತಿ ಇಲ್ಲಿಯೂ ಸಹ ಸಣ್ಣ ಹಿಂಬಾಲಕ ಬಳಗ ಶೋವನ್ನು ಸಂಭ್ರಮಿಸುತ್ತದೆ, ನೆಚ್ಚಿನ ಸ್ಪರ್ಧಿಗಳ ಪರ ನಿಂತು ಇಷ್ಟವಿಲ್ಲದ ಸ್ಪರ್ಧಿ ವಿರುದ್ಧ ಟೀಕೆ ಮಾಡುತ್ತದೆ.

ಹೀಗೆ ಜನರಲ್ಲಿ ಪರಸ್ಪರ ಚರ್ಚೆಯನ್ನುಟ್ಟುಹಾಕಿ ಅದು ಕೋಟಿ ಕೋಟಿ ವೋಟ್‌ಗಳಾಗಿ ಮಾರ್ಪಾಡಾಗುವ ಮಟ್ಟಕ್ಕೆ ತಲುಪಿರುವ ಬಿಗ್‌ಬಾಸ್ ನಾಳೆ ( ಜನವರಿ 18 ) ನಡೆಯಲಿರುವ ಗ್ರ್ಯಾಂಡ್ ಫಿನಾಲೆ ಮೂಲಕ ಯಶಸ್ವಿ 12 ಸೀಸನ್‌ಗಳನ್ನು ಪೂರೈಸಲಿದೆ. ಹೀಗೆ ಜನಪ್ರಿಯ ಕಾರ್ಯಕ್ರಮ ಎನಿಸಿಕೊಂಡಿರುವ ಬಿಗ್‌ಬಾಸ್ ಕಳೆದ ಆವೃತ್ತಿಯಲ್ಲಾದ ಕೆಲ ತಪ್ಪುಗಳನ್ನು ತಿದ್ದುಕೊಂಡು ಈ ಬಾರಿ ಜನರಿಗೆ ಇಷ್ಟವಾಗಲೆಂದೇ ಹೊಸ ನಿಯಮ ಹಾಗೂ ವಿನ್ಯಾಸದಿಂದ ಮುಂದೆಬಂದಿತ್ತು.

ಈ ಬದಲಾವಣೆಗಳಿಂದ ಸೈ ಎನಿಸಿಕೊಂಡ ಈ ಬಾರಿಯ ಆವೃತ್ತಿ ಕೆಲ ವಿಷಯಗಳಿಂದಾಗಿ ಭಾರೀ ಟೀಕೆಗಳನ್ನೂ ಸಹ ಪಡೆದುಕೊಂಡಿದೆ. ಇವು ಸೇರಿದಂತೆ ಈ ಬಾರಿಯ ಹೈಲೈಟ್‌ಗಳು ಮುಂದಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಓಪನ್ ನಾಮಿನೇಷನ್

ಈ ಬಾರಿ ಅನೇಕ ಬಾರಿ ನಡೆದ ಓಪನ್ ನಾಮಿನೇಷನ್ ಇಡೀ ಆವೃತ್ತಿಯ ಮೇಲೆ ಕ್ರೇಜ್ ಹೆಚ್ಚಾಗುವಂತೆ ಮಾಡಿತು ಎಂದಾದರೆ ತಪ್ಪಾಗಲಾರದು. ನಾಮಿನೇಟ್ ಮಾಡುವ ಸ್ಪರ್ಧಿ ನಾಮಿನೇಟ್‌ಗೆ ಗುರಿಯಾದ ಸ್ಪರ್ಧಿಗೆ ತನ್ನನ್ನು ಯಾವ ಕಾರಣಕ್ಕೆ ನಾಮಿನೇಟ್ ಮಾಡಿದರು ಎಂಬುದು ಮುಕ್ತವಾಗಿಯೇ ತಿಳಿದುಬಂದದ್ದು ಈ ಬಾರಿ ಜಿದ್ದಾಜಿದ್ದಿ ಹೆಚ್ಚಾಗುಂತೆ ಮಾಡುವಲ್ಲಿ ಯಶಸ್ವಿಯಾಯಿತು. ಈ ಹಿಂದಿನ ಹಾಗೆ ಗೌಪ್ಯವಾಗಿ ನಾಮಿನೇ‍ಷನ್ ನಡೆಸಿದ್ದರೆ ವೈಯಕ್ತಿಕ ದ್ವೇಷದ ಕಾರಣಕ್ಕೆ ನಾಮಿನೇಟ್ ಹೆಚ್ಚಾಗುತ್ತಿತ್ತು. ಆದರೆ ಈ ಬಾರಿ ವೈಯಕ್ತಿಕ ಕಾರಣಗಳನ್ನು ನೀಡದೇ ಮನೆ ನಿಯಮ ಹಾಗೂ ಆಟಗಳ ಕುರಿತಾದ ಕಾರಣಗಳನ್ನು ನೀಡಿ ನೀಡಿದ್ದೇ ಹೆಚ್ಚು.

ಮನೆಯ ವಿನ್ಯಾಸ

ಇನ್ನು ಕಳೆದ ಆವೃತ್ತಿಗಳಲ್ಲಿ ಬಿಗ್‌ಬಾಸ್ ಮನೆಯ ವಿನ್ಯಾಸದ ಕುರಿತು ಬೇಸರ ಹಾಗೂ ನಿರಾಸೆ ವ್ಯಕ್ತವಾಗುತ್ತಲೇ ಇದ್ದವು. ಕನ್ನಡ ಬಿಗ್‌ಬಾಸ್ ಮನೆ ವಿನ್ಯಾಸದಲ್ಲೆಲ್ಲೂ ಕನ್ನಡವಿಲ್ಲ, ಕನ್ನಡಪರ ಅಂಶಗಳಿಲ್ಲ ಎಂಬ ಕೂಗಿತ್ತು. ಆದರೆ ಈ ಬಾರಿ ಅಪ್ಪಟ ಕನ್ನಡ ಸಂಸ್ಕೃತಿ ಹಾಗೂ ಕಲೆಗಳನ್ನು ಪ್ರತಿಬಿಂಬಿಸುವ ಕಲಾಕೃತಿಗಳ ವಿನ್ಯಾಸವನ್ನು ಸಿದ್ಧಪಡಿಸಲಾಗಿತ್ತು. ಇದೂ ಸಹ ಈ ಬಾರಿಯ ಹೈಲೈಟ್‌ಗಳಲ್ಲೊಂದು. ಕನ್ನಡ ಪರಂಪರೆಯ ಬಗ್ಗೆ ಅರಿವಿರುವ ಮೈಸೂರು ಕಥೆಗಳ ಧರ್ಮೇಂದ್ರ ಅವರ ಸಲಹೆಯನ್ನು ಪಡೆದುಕೊಂಡು ಈ ಕಲಾಕೃತಿಗಳ ವಿನ್ಯಾಸವನ್ನು ತಯಾರಿಸಲಾಗಿತ್ತು. ಮೈಸೂರು ಅರಮನೆ, ಅಂಬಾರಿ ಆನೆ, ಹಂಪಿ ಕಲ್ಲಿನ ರಥ, ದರ್ಪಣ ಸುಂದರಿ, ಕಂಬಳದ ಕೋಣಗಳ ಸೇರಿದಂತೆ ಮುಂತಾದವುಗಳ ವಿನ್ಯಾಸವಿದೆ. ಹುಲಿ ಕೊಲ್ಲುವ ಟಿಪ್ಪು ವಿನ್ಯಾಸವನ್ನು ಇಲ್ಲಿ ವಿಭಿನ್ನವಾಗಿ ತಯಾರಿಸಲಾಗಿದ್ದು, ಕತ್ತಿ ಹಿಡಿದ ಬ್ರಾಹ್ಮಣನನ್ನು ಬಳಸಲಾಗಿದೆ.

ಈ ಇಬ್ಬರಲ್ಲಿ ಒಬ್ಬರು ವಿನ್ನರ್ ಪಕ್ಕಾ

ಅಂದಹಾಗೆ ಈ ಬಾರಿಯ ಬಿಗ್‌ಬಾಸ್‌ನಲ್ಲಿ ಫಿನಾಲೆಗೆ ಆರು ಮಂದಿ ಆಯ್ಕೆಯಾಗಿದ್ದಾರೆ. ಈ ಪೈಕಿ ಟಾಪ್ 2 ಯಾರೆಂಬುದು ಘೋಷಣೆಯಾಗುವ ಮುನ್ನವೇ ಸ್ಪಷ್ಟವಾಗಿ ಕಾಣುತ್ತಿದೆ ಎಂದೇ ಹೇಳಬಹುದು. ಹೌದು, ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ಈ ಇಬ್ಬರಲ್ಲಿ ಒಬ್ಬರು ವಿನ್ನರ್ ಹಾಗೂ ಮತ್ತೊಬ್ಬರು ರನ್ನರ್ ಆಗುವುದು ನಿಶ್ಚಿತ ಎಂದು ವೀಕ್ಷಕರೇ ನಿರ್ಧರಿಸಿಬಿಟ್ಟಿದ್ದಾರೆ. ಗಿಲ್ಲಿ ಮನರಂಜನೆ ವಿಷಯದಲ್ಲಿ ಜನಪ್ರಿಯತೆ ಪಡೆದುಕೊಂಡರೆ, ಅಶ್ವಿನಿ ಗೌಡ ಆಟದ ವಿಚಾರವಾಗಿ ಸೈ ಎನಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಟಾಪ್ 2 ಸ್ಪರ್ಧಿಗಳ ಚಿತ್ರಣ ಮುಂದಿದ್ದು, ಈ ಇಬ್ಬರಲ್ಲಿ ಯಾರು ಟ್ರೋಫಿ ಸ್ವೀಕರಿಸಲಿದ್ದಾರೆ ಎಂಬುದು ಸದ್ಯಕ್ಕಿರುವ ಪ್ರಶ್ನೆ.

ಕಿಚ್ಚನ ವಿರುದ್ಧ ಟೀಕೆ

ಇಷ್ಟು ವರ್ಷಗಳ ಕಾಲ ಪ್ರತಿ ಬಾರಿ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿರುವ ಸುದೀಪ್ ಯಾವ ಬಾರಿಯೂ ಸಹ ಸ್ಪರ್ಧಿಗಳ ಅಭಿಮಾನಿಗಳಿಂದ ಟೀಕೆಯನ್ನು ಪಡೆದುಕೊಂಡಿರಲಿಲ್ಲ. ಆದರೆ ಈ ಬಾರಿ ಸ್ಪರ್ಧಿಗಳ ವಿಚಾರವಾಗಿ ಬಿಗ್‌ಬಾಸ್ ತೆಗೆದುಕೊಂಡ ನಿರ್ಧಾರ ಸುದೀಪ್ ಅವರನ್ನು ಟ್ರೋಲ್ ಮಾಡುವ ಮಟ್ಟಕ್ಕೂ ಸಹ ತಲುಪಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

Most Popular