HomeLatest Newsದಕ್ಷಿಣ ದಿಕ್ಕಿನ ಮನೆ ಎಂದರೆ ಭಯವೇ? ವಾಸ್ತು ಪ್ರಕಾರ ಇದು ಸಮೃದ್ಧಿಯ ದಿಕ್ಕೂ ಹೌದು: ಹೇಗೆ...

ದಕ್ಷಿಣ ದಿಕ್ಕಿನ ಮನೆ ಎಂದರೆ ಭಯವೇ? ವಾಸ್ತು ಪ್ರಕಾರ ಇದು ಸಮೃದ್ಧಿಯ ದಿಕ್ಕೂ ಹೌದು: ಹೇಗೆ ಗೊತ್ತಾ?

ಸಾಮಾನ್ಯವಾಗಿ ಮನೆ ಖರೀದಿಸುವಾಗ ಅಥವಾ ಕಟ್ಟುವಾಗ ದಕ್ಷಿಣ ದಿಕ್ಕು ಎಂದರೆ ಸಾಕು, ಅನೇಕರು ಬೆಚ್ಚಿಬೀಳುತ್ತಾರೆ ಅಯ್ಯೋ ಅದು ಯಮನ ದಿಕ್ಕು, ಮೃತ್ಯು ಭಯ ಇರುತ್ತದೆ ಎಂಬುದು ಸಾಮಾನ್ಯ ನಂಬಿಕೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕು ಕೇವಲ ಅಶುಭವಲ್ಲ; ಇದು ಧೈರ್ಯ, ಸ್ಥಿರತೆ ಮತ್ತು ಸಮೃದ್ಧಿಯ ಸಂಕೇತವೂ ಹೌದು. ದಕ್ಷಿಣ ಭಾರತದ ಹೆಮ್ಮೆಯ ತಿರುಪತಿ ವೆಂಕಟೇಶ್ವರ ದೇವಸ್ಥಾನವೇ ಇದಕ್ಕೆ ದೊಡ್ಡ ಸಾಕ್ಷಿ.

ದಕ್ಷಿಣ ದಿಕ್ಕಿನ ವಾಸ್ತು ರಹಸ್ಯಗಳು: ವಾಸ್ತು ಪ್ರಕಾರ ದಕ್ಷಿಣ ದಿಕ್ಕು ಭೂ ತತ್ವಕ್ಕೆ ಸಂಬಂಧಿಸಿದ್ದು. ಈ ದಿಕ್ಕಿನ ಮನೆಯ ಯಜಮಾನ ಧೈರ್ಯವಂತನಾಗಿರುತ್ತಾನೆ. ಆದರೆ, ಇಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದು ಅತಿ ಮುಖ್ಯ:

ತೂಕದ ಗೋಡೆ ಇರಲಿ: ಮನೆ ಕಟ್ಟುವಾಗ ದಕ್ಷಿಣ ಭಾಗವನ್ನು ಮೊದಲು ಮುಚ್ಚಬೇಕು. ಇಲ್ಲಿ ದಪ್ಪನೆಯ ಗೋಡೆ ಅಥವಾ ಭಾರವಾದ ವಸ್ತುಗಳನ್ನು ಇರಿಸುವುದು ಶುಭ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಖಾಲಿ ಜಾಗ ಬಿಡಬೇಡಿ: ದಕ್ಷಿಣದಲ್ಲಿ ಹೆಚ್ಚು ಖಾಲಿ ಜಾಗವಿದ್ದರೆ ಧನಹಾನಿ ಮತ್ತು ಸ್ತ್ರೀಯರಲ್ಲಿ ಅಶಾಂತಿ ಉಂಟಾಗಬಹುದು.

ಪುಸ್ತಕಗಳನ್ನಿಡಬೇಡಿ: ದಕ್ಷಿಣ ಭಾಗದಲ್ಲಿ ಪುಸ್ತಕಗಳನ್ನು ಇರಿಸಿದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗುವ ಸಾಧ್ಯತೆ ಇರುತ್ತದೆ.

ದೋಷಗಳು ಮತ್ತು ಎಚ್ಚರಿಕೆಗಳು:

ದಕ್ಷಿಣದ ಬಾಗಿಲು ಆಗ್ನೇಯ ಕೋನದಲ್ಲಿದ್ದರೆ ಕಳ್ಳತನ ಅಥವಾ ಕೋರ್ಟ್ ವ್ಯಾಜ್ಯಗಳ ಭಯವಿರುತ್ತದೆ.

ಬಾಗಿಲಿನ ಎದುರು ತಗ್ಗು ಅಥವಾ ಕತ್ತಲೆ ಇರಬಾರದು; ಇದು ಸಹೋದರರ ಅಭಿವೃದ್ಧಿಗೆ ಮಾರಕ.

ದಕ್ಷಿಣದಲ್ಲಿ ಬಾವಿ ಅಥವಾ ಹಳ್ಳ ಇದ್ದರೆ ಅದು ದುರ್ಘಟನೆಯ ಸಂಕೇತ. ಆದರೆ, ಈ ಭಾಗ ಸ್ನಾನದ ಕೋಣೆಗೆ (Bathroom) ಹೆಚ್ಚು ಸೂಕ್ತವಾಗಿದೆ.

ಉತ್ತಮ ನಿದ್ರೆಗಾಗಿ ಈ ಟಿಪ್ಸ್ ಬಳಸಿ: ವಿದ್ಯಾರ್ಥಿಗಳು ಮತ್ತು ಮನೆಯ ಯಜಮಾನರು ಯಾವಾಗಲೂ ದಕ್ಷಿಣ ಅಥವಾ ಪಶ್ಚಿಮಕ್ಕೆ ತಲೆಮಾಡಿ ಮಲಗಬೇಕು. ಇದರಿಂದ ಮನಸ್ಸಿಗೆ ಶಾಂತಿ ಮತ್ತು ಸುಖ ನಿದ್ರೆ ಲಭಿಸುತ್ತದೆ. ಗಿಡಮರಗಳನ್ನು ಬೆಳೆಸಲು ಕೂಡ ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳೇ ಬೆಸ್ಟ್.

ದೋಷವಿದ್ದರೆ ಸರಳ ಪರಿಹಾರಗಳು: ಒಂದು ವೇಳೆ ನಿಮ್ಮ ಮನೆ ದಕ್ಷಿಣಾಭಿಮುಖವಾಗಿದ್ದು ದೋಷದ ಭಯವಿದ್ದರೆ ಚಿಂತಿಸಬೇಡಿ, ಈ ಸರಳ ದಾರಿಗಳಿವೆ:

  1. ಮನೆಯ ಮುಖ್ಯ ದ್ವಾರಕ್ಕೆ ಗಣಪತಿಯ ಫೋಟೋ ಅಥವಾ ಮಂಗಳ ಯಂತ್ರವನ್ನು ಅಂಟಿಸಿ.
  2. ನಿತ್ಯವೂ ಹನುಮಾನ್ ಚಾಲೀಸಾ ಪಠಿಸಿ ಅಥವಾ ಕಾಲಭೈರವನ ಆರಾಧನೆ ಮಾಡಿ.
  3. ಮನೆಯ ಯಜಮಾನರು ಮಂಗಳವಾರ ವ್ರತ ಮಾಡುವುದು ವಿಶೇಷ ಫಲ ನೀಡುತ್ತದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular