ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದ ಹೈಡ್ರಾಮಾ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಹೋಟೆಲ್ ರೂಮ್ವೊಂದರಲ್ಲಿ ಪತ್ನಿಯು ಪ್ರಿಯಕರನೊಂದಿಗೆ ಇರುವುದನ್ನು ಪತಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು, ಈ ವೇಳೆ ಪ್ರಿಯಕರ ಬೆಡ್ ಕೆಳಗೆ ಅಡಗಿಕೊಂಡಿರುವ ವಿಡಿಯೋ ಈಗ ವೈರಲ್ ಆಗಿದೆ.
ಘಟನೆಯ ವಿವರ: ಬೆಡ್ ಕೆಳಗೆ ಅವಿತಿದ್ದ ಪ್ರಿಯಕರ! ಜನೆವರಿ 11ರಂದು ಝಾನ್ಸಿಯ ನವಾಬಾದ್ ಪ್ರದೇಶದ ಬಸ್ ನಿಲ್ದಾಣದ ಸಮೀಪವಿರುವ ‘ಕರ್ಮ ಗೆಸ್ಟ್ ಹೌಸ್’ನಲ್ಲಿ ಈ ಘಟನೆ ನಡೆದಿದೆ. ತನ್ನ ಪತ್ನಿ ಬೇರೊಬ್ಬ ವ್ಯಕ್ತಿಯೊಂದಿಗೆ ನಗರದಲ್ಲಿ ಸುತ್ತಾಡುತ್ತಿದ್ದಾಳೆ ಎಂಬ ಸುಳಿವು ಸಿಕ್ಕಿದ ಕೂಡಲೇ ಪತಿ ಅವರನ್ನು ಹಿಂಬಾಲಿಸಿದ್ದಾನೆ. ಅವರಿಬ್ಬರೂ ಗೆಸ್ಟ್ ಹೌಸ್ನ ರೂಮ್ ನಂಬರ್ 103ಕ್ಕೆ ಪ್ರವೇಶಿಸುವುದನ್ನು ಗಮನಿಸಿದ ಪತಿ, ಕೂಡಲೇ ಪೊಲೀಸರ ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ.
ಪೊಲೀಸರು ಮತ್ತು ಪತಿ ಒಟ್ಟಾಗಿ ರೂಮ್ ಬಾಗಿಲು ತೆರೆಸಿದಾಗ ಅಲ್ಲಿ ಅವಾಂತರವೇ ನಡೆದಿದೆ. ಪತಿಯನ್ನು ಕಂಡಾಕ್ಷಣ ಗಾಬರಿಗೊಂಡ ಪ್ರಿಯಕರ ತಪ್ಪಿಸಿಕೊಳ್ಳಲು ಬೆಡ್ ಅಡಿಯಲ್ಲಿ ಅಡಗ ಕುಳಿತಿದ್ದನು. ಪೊಲೀಸರು ಆತನನ್ನು ಕಾಲಿನಿಂದ ಎಳೆದು ಹೊರತೆಗೆಯುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪತ್ನಿಯ ವಾದವೇನು? ಪತಿ ತರಾಟೆಗೆ ತೆಗೆದುಕೊಂಡಾಗ ಪತ್ನಿ ಅತಿ ವಿನಯದಿಂದ ವರ್ತಿಸುವ ಬದಲು ನೇರವಾಗಿಯೇ ಉತ್ತರಿಸಿದ್ದಾಳೆ. “ಕಳೆದ ಎರಡು ವರ್ಷಗಳಿಂದ ನಾನು ನಿನ್ನ ಜೊತೆ ವಾಸಿಸುತ್ತಿಲ್ಲ, ನಮ್ಮ ಸಂಬಂಧ ಈಗ ಮುಗಿದ ಅಧ್ಯಾಯ” ಎಂದು ಆಕೆ ಹೇಳಿದ್ದಾಳೆ. ಅಲ್ಲದೆ, ತಾನು ತನ್ನಿಷ್ಟದಂತೆ ಇಲ್ಲಿಗೆ ಬಂದಿರುವುದಾಗಿ ಮತ್ತು ತನ್ನಿಷ್ಟದ ವ್ಯಕ್ತಿಯ ಜೊತೆ ಬಾಳಲು ಸಿದ್ಧವಿರುವುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ.
ಪತಿಯ ಆರೋಪ: ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ನಮಗೆ ಆರಂಭದಿಂದಲೇ ಭಿನ್ನಾಭಿಪ್ರಾಯಗಳಿದ್ದವು. ಕಳೆದ ಒಂದೂವರೆ ವರ್ಷದಿಂದ ನಾವು ಬೇರೆಯಾಗಿಯೇ ವಾಸಿಸುತ್ತಿದ್ದೇವೆ. ಆದರೆ ಪತ್ನಿ ವಿಚ್ಛೇದನ ನೀಡಲು 10 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾಳೆ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾಳೆ ಎಂದು ಪತಿ ಆರೋಪಿಸಿದ್ದಾನೆ.
ಸದ್ಯ ನವಾಬಾದ್ ಪೊಲೀಸರು ಈ ಪ್ರಕರಣದ ಬಗ್ಗೆ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ನೋಡಿರುವ ಜನರು ಮದುವೆ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ನೈತಿಕತೆಯ ಬಗ್ಗೆ ಪರ-ವಿರೋಧದ ಚರ್ಚೆಗಳನ್ನು ನಡೆಸುತ್ತಿದ್ದಾರೆ.

