ವಿಜಯಪುರ: ಆಕಸ್ಮಿಕ ಅಗ್ನಿ ಅವಘಡದಿಂದ ಶೀಟ್ ಮನೆ ಹೊತ್ತಿ ಉರಿದ ಘಟನೆ ವಿಜಯಪುರ ತಾಲೂಕಿನ ಅಲಿಯಾಬಾದ್ ಸಮೀಪದ ಪಾಂಗ್ರೂನ್ ದೊಡ್ಡಿ ಗ್ರಾಮದಲ್ಲಿ ನಡೆದಿದೆ.
ತುಕಾರಾಮ್ ಚೌಹಾಣ್ ಎಂಬುವವರ ಮನೆ ಬೆಂಕಿಗಾಹುತಿಯಾಗಿದೆ. ಮನೆಯಲ್ಲಿದ್ದ 5 ಲಕ್ಷ ರೂ. ನಗದು, 50 ಗ್ರಾಂ ಚಿನ್ನಾಭರಣ ಸೇರಿ ಇತರೆ ವಸ್ತುಗಳು ಸುಟ್ಟು ಭಸ್ಮವಾಗಿದೆ. ವಿಜಯಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

