ಮುಂಬೈ: ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಮತಗಟ್ಟೆ ಸಮೀಕ್ಷೆ ಪ್ರಕಟವಾಗಿದೆ. ಬಿಜೆಪಿ ಮೈತ್ರಿಕೂಟ ಅತ್ಯಧಿಕ ಸ್ಥಾನಗಳೊಂದಿಗೆ ಅಧಿಕಾರಕ್ಕೇರಲಿದೆ ಎಂದು ಸಮೀಕ್ಷೆಗಳು ಹೇಳಿವೆ.
ಒಟ್ಟು 227 ಸ್ಥಾನಗಳ ಬೃಹನ್ ಮುಂಬೈ ಮಹಾನಗರ ಪಾಲಿಕೆಯ ಚುನಾವಣೆಗೆ ಸಂಬಂಧಿಸಿದಂತೆ ಆಕ್ಸಿಸ್ ಮೈ ಇಂಡಿಯಾ ಮತಗಟ್ಟೆ ಸಮೀಕ್ಷೆ ಪ್ರಕಟವಾಗಿದೆ. ಬಿಜೆಪಿ ಮೈತ್ರಿಕೂಟ 131 ರಿಂದ 151 ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಉದ್ದವ್ ಬಣದ ಶಿವಸೇನೆ 58 ರಿಂದ 68 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಕಾಂಗ್ರೆಸ್ 12 ರಿಂದ 16 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. . ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯಂತೆ ಬಿಜೆಪಿ ಮೈತ್ರಿಕೂಟಕ್ಕೆ ಶೇಕಡ 42ರಷ್ಟು ಮತ, ಉದ್ಧವ್ ಬಣದ ಶಿವಸೇನೆಗೆ ಶೇ. 32, ಕಾಂಗ್ರೆಸ್ ಗೆ ಶೇ. 13, ಇತರರಿಗೆ ಶೇ. 13ರಷ್ಟು ಮತ ಬರಲಿದೆ.
ಜೆವಿಸಿ ಸಮೀಕ್ಷೆಯ ಪ್ರಕಾರ, ಮಹಾಯುತಿ ಸುಮಾರು 138 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದ್ದರೆ, ಉದ್ಧವ್ ಮತ್ತು ರಾಜ್ ಠಾಕ್ರೆ ಮೈತ್ರಿಕೂಟ 59 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಕಾಂಗ್ರೆಸ್-ವಿಬಿಎ ಮೈತ್ರಿಕೂಟಕ್ಕೆ 23 ಸ್ಥಾನಗಳು ಮತ್ತು ಇತರರಿಗೆ 7 ಸ್ಥಾನಗಳು ಸಿಗಲಿವೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ
ಡಿವಿ ರಿಸರ್ಚ್ ಸಮೀಕ್ಷೆ ಪ್ರಕಾರ ಬಿಜೆಪಿ ಮೈತ್ರಿಕೂಟಕ್ಕೆ 107 -122, ಉದ್ಧವ್ ಶಿವಸೇನೆ ಬಣಕ್ಕೆ 83, ಕಾಂಗ್ರೆಸ್ 18 -25, ಎನ್‌ಸಿಪಿ 2- 4 ಇತರರು 8 -15 ಸ್ಥಾನ ಗಳಿಸುವ ಸಾಧ್ಯತೆ ಇದೆ.
ಜೆವಿಸಿ ಸಮೀಕ್ಷೆಯ ಪ್ರಕಾರ ಬಿಜೆಪಿ ಮೈತ್ರಿಕೂಟ 138 ಸ್ಥಾನ, ಉದ್ದವ್ ಬಣದ ಶಿವಸೇನೆ 59, ಕಾಂಗ್ರೆಸ್ 23, ಇತರರು 7 ಸೀಟು ಗೆಲ್ಲಲಿದ್ದಾರೆ,
ಜನ ಮತ ಪೋಲ್ಸ್ ಸಮಿಕ್ಷೆ ಪ್ರಕಾರ ಬಿಜೆಪಿ 138, ಉದ್ಧವ್ ಬಣದ ಶಿವಸೇನೆ 62, ಕಾಂಗ್ರೆಸ್ 20, ಇತರರು 7 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ.

