HomeLatest Newsಬಳೆಯ ಡಿಸೈನ್ ಮೆಚ್ಚಿ ಫೋಟೋ ಕೇಳಿದ್ದಕ್ಕೆ ಕೈ ಬಳೆಯನ್ನೇ ಕೊಟ್ಟ ಯುವತಿ: ದೃಶ್ಯ ವೈರಲ್

ಬಳೆಯ ಡಿಸೈನ್ ಮೆಚ್ಚಿ ಫೋಟೋ ಕೇಳಿದ್ದಕ್ಕೆ ಕೈ ಬಳೆಯನ್ನೇ ಕೊಟ್ಟ ಯುವತಿ: ದೃಶ್ಯ ವೈರಲ್

ನಮ್ಮ ಮೆಟ್ರೋ ಅಂದಾಕ್ಷಣ ಕಿಕ್ಕಿರಿದ ಜನಜಂಗುಳಿ ಮೊಬೈಲ್ ಕಳ್ಳತನ ಅಥವಾ ಪ್ರಯಾಣಿಕರ ಕಿರಿಕಿರಿ ಕಥೆಗಳೇ ಸಾಮಾನ್ಯವಾಗಿ ಮುನ್ನೆಲೆಗೆ ಬರುತ್ತವೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗುತ್ತಿರುವ ಈ ಘಟನೆ ಮಾತ್ರ ಮೆಟ್ರೋ ಪ್ರಯಾಣದ ಮತ್ತೊಂದು ಅಪರೂಪದ ಮತ್ತು ಮನಕಲಕುವ ಮುಖವನ್ನು ಪರಿಚಯಿಸಿದೆ. ರಿತು ಜೂನ್ ಎಂಬುವವರು ತಮ್ಮ ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡಿರುವ ಈ ಸುಂದರ ಕಥೆ, ಈಗ ಇಂಟರ್ನೆಟ್ ಲೋಕದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದು, ಓದುಗರ ಮುಖದಲ್ಲಿ ಮಂದಹಾಸ ಮೂಡಿಸುತ್ತಿದೆ.

ಅಸಲಿಗೆ ಅಲ್ಲಿ ನಡೆದಿದ್ದೇನು? ಅಪರಿಚಿತ ಹುಡುಗಿಯ ಅಚ್ಚರಿಯ ಉಡುಗೊರೆ

ರಿತು ಜೂನ್ ಅವರು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾಗ, ಅವರ ಪಕ್ಕದಲ್ಲೇ ಕುಳಿತಿದ್ದ ಹುಡುಗಿಯ ಕೈಯಲ್ಲಿದ್ದ ಒಂದು ಗೋಲ್ಡನ್ ಬಳೆ ಅವರ ಕಣ್ಣಿಗೆ ಬಿತ್ತು. ಅದರ ವಿನ್ಯಾಸ (Design) ಎಷ್ಟು ಅದ್ಭುತ ಮತ್ತು ಆಕರ್ಷಕವಾಗಿತ್ತೆಂದರೆ, ರಿತು ಅವರಿಗೆ ಅದನ್ನು ನೋಡಿದ ತಕ್ಷಣ ಫುಲ್ ಇಷ್ಟವಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಮಗೂ ಅಂತಹದ್ದೇ ಬಳೆಯನ್ನು ಮಾಡಿಸಿಕೊಳ್ಳಬೇಕು ಎಂಬ ಆಸೆಯಿಂದ ರಿತು ಅವರು, ಆ ಹುಡುಗಿಯನ್ನು ಬಹಳ ವಿನಯದಿಂದ ಮಾತನಾಡಿಸಿದರು. ನಿಮ್ಮ ಈ ಬಳೆಯ ಡಿಸೈನ್ ತುಂಬಾ ಚೆನ್ನಾಗಿದೆ ನನಗೂ ಇದೇ ರೀತಿ ಮಾಡಿಸಿಕೊಳ್ಳಲು ಅನುಕೂಲವಾಗುತ್ತದೆ ನಾನು ಇದರ ಒಂದು ಫೋಟೋ ತೆಗೆದುಕೊಳ್ಳಬಹುದೇ? ಎಂದು ಮನವಿ ಮಾಡಿದರು.

ಫೋಟೋ ಬದಲು ಬಳೆಯನ್ನೇ ಉಡುಗೊರೆಯಾಗಿ ನೀಡಿದಳು

ರಿತು ಅವರ ವಿನಂತಿಯನ್ನು ಕೇಳಿದ ಆ ಅಪರಿಚಿತ ಹುಡುಗಿ ತೋರಿದ ಪ್ರತಿಕ್ರಿಯೆ ಮಾತ್ರ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಫೋಟೋ ತೆಗೆದುಕೊಳ್ಳಲು ಅನುಮತಿ ನೀಡುವ ಬದಲಿಗೆ, ಆಕೆ ತಕ್ಷಣವೇ ತನ್ನ ಕೈಯಲ್ಲಿದ್ದ ಬಳೆಯನ್ನು ಬಿಚ್ಚಿ ರಿತು ಅವರ ಕೈಗಿಟ್ಟಳು. ಕೇವಲ ಫೋಟೋಕ್ಕಿಂತ ಈ ಬಳೆಯೇ ನಿಮ್ಮ ಬಳಿ ಇರಲಿ, ಆಗ ಅಕ್ಕಸಾಲಿಗರಿಗೆ (Goldsmith) ಇದರ ಡಿಸೈನ್ ಅನ್ನು ಸ್ಪಷ್ಟವಾಗಿ ತೋರಿಸಲು ನಿಮಗೆ ಸುಲಭವಾಗುತ್ತದೆ ಎಂದು ಆಕೆ ನಗುನಗುತ್ತಲೇ ಹೇಳಿದಳು.

ಅಪರಿಚಿತ ಹುಡುಗಿಯ ಈ ಔದಾರ್ಯ ಕಂಡು ರಿತು ಒಂದು ಕ್ಷಣ ಅವಕ್ಕಾದರು. ಆಗ ಆ ಯುವತಿ ಮೆಲ್ಲಗೆ ನಗುತ್ತಾ, ಹೆದರಬೇಡಿ, ಇದು ಅಸಲಿ ಚಿನ್ನವಲ್ಲ ಕೇವಲ ಆರ್ಟಿಫಿಶಿಯಲ್ ಬಳೆ ಎಂದು ಅಸಲಿ ವಿಷಯ ಬಿಚ್ಚಿಟ್ಟಳು.

ನೆನಪಿಗಾಗಿ ಉಳಿದ ಬಳೆ:

ಆ ಅಪರಿಚಿತ ಯುವತಿಯ ನಿಷ್ಕಲ್ಮಶ ಪ್ರೀತಿ ಮತ್ತು ದೊಡ್ಡ ಗುಣಕ್ಕೆ ಮನಸೋತ ರಿತು, ಆ ಬಳೆಯನ್ನು ಒಂದು ಸುಂದರ ನೆನಪಿನ ಕಾಣಿಕೆಯಾಗಿ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಮೆಟ್ರೋದ ಎಲ್ಲಾ ಕಥೆಗಳೂ ಕೆಟ್ಟದ್ದಾಗಿರುವುದಿಲ್ಲ ಕೆಲವು ಕಥೆಗಳು ಹೀಗೆ ಮೌನವಾಗಿದ್ದರೂ ತುಂಬಾ ಸುಂದರವಾಗಿರುತ್ತವೆ ಎಂದು ಅವರು ತಮ್ಮ ಭಾವನೆಯನ್ನು ಹಂಚಿಕೊಂಡಿದ್ದಾರೆ.

ಇಂಟರ್ನೆಟ್‌ನಲ್ಲಿ ಮೆಚ್ಚುಗೆಯ ಸುರಿಮಳೆ

ಈ ಹೃದಯಸ್ಪರ್ಶಿ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಫುಲ್ ಖುಷ್ ಆಗಿದ್ದಾರೆ. ಅಪರಿಚಿತ ಹುಡುಗಿಯ ಈ ಸರಳ ಹಾಗೂ ಸುಂದರ ನಡೆಗೆ ಜನರು ಮೆಚ್ಚುಗೆಯ ಸುರಿಮಳೆಗರೆಯುತ್ತಿದ್ದಾರೆ.

ಒಬ್ಬ ಬಳಕೆದಾರರು ಕಾಮೆಂಟ್ ಮಾಡಿ ಈ ಪೋಸ್ಟ್ ನನ್ನ ಮುಖದಲ್ಲಿ ನಗು ತರಿಸಿತು ಆಕೆ ನಿಜಕ್ಕೂ ದೊಡ್ಡ ಗುಣದ ಹುಡುಗಿ ಎಂದಿದ್ದಾರೆ. ಮತ್ತೊಬ್ಬರು, ಇಂದಿನ ಇಂಟರ್ನೆಟ್ ಲೋಕದಲ್ಲಿ ನಾನು ನೋಡಿದ ಅತ್ಯುತ್ತಮ ವಿಷಯವಿದು ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಇಂತಹ ಮುಕ್ತ ಮನಸ್ಸಿನ ದಯಾಳುಗಳನ್ನು ನೋಡುವುದೇ ಅಪರೂಪ. ಆಕೆ ನಿಜಕ್ಕೂ ಅಪರಂಜಿ ಎಂದು ಶ್ಲಾಘಿಸಿದ್ದಾರೆ. ಇಂತಹ ಸಣ್ಣ ಸಣ್ಣ ಮಾನವೀಯ ನಡೆಗಳು ಇಂದಿಗೂ ಜಗತ್ತಿನಲ್ಲಿ ಪ್ರೀತಿ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿ ಎಂದು ಹಲವರು ಶ್ಲಾಘಿಸಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular