ಬೆಂಗಳೂರು : ಮಾ.31 ರೊಳಗೆ ಖಜಾನೆಗೆ ಬಿಲ್ಲುಗಳ ಸಲ್ಲಿಕೆ ಮಾಡುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
2024-25 ನೇ ಸಾಲಿನ ವರ್ಷಾಂತ್ಯದ ಬಿಲ್ಲುಗಳನ್ನು ಖಜಾನೆಗಳಲ್ಲಿ ಸ್ವೀಕರಿಸಿ, ತೀರ್ಣಗೊಳಿಸಿ ದಿನಾಂಕ:31.03.2025 ರಂದೇ 2024-25 ನೇ ಸಾಲಿನ ಲೆಕ್ಕಗಳನ್ನು ಮುಕ್ತಾಯಗೊಳಿಸಲು ಉಲ್ಲೇಖ (1)ರ ಸರ್ಕಾರಿ ಆದೇಶ ಮತ್ತು ತದನಂತರದ ಆದೇಶಗಳಲ್ಲಿ ಕಾಲಮಿತಿ ಸೂಚಿಸಿ ವೇಳಾಪಟ್ಟಿಯನ್ನು ನಿಗಧಿಪಡಿಸಲಾಗಿತ್ತು.
2025-26 ನೇ ಸಾಲಿನ ವರ್ಷಾಂತ್ಯದ ಬಿಲ್ಲುಗಳನ್ನೂ ಸಹ ಖಜಾನೆಗಳಲ್ಲಿ ಸ್ವೀಕರಿಸಿ ತೀರ್ಣಗೊಳಿಸಿ. ದಿನಾಂಕ:31.03.2026 ರಂದೇ 2025-26 ನೇ ಸಾಲಿನ ಲೆಕ್ಕಗಳನ್ನು ಮುಕ್ತಾಯಗೊಳಿಸಲು ಸೂಕ್ತ ವೇಳಾಪಟ್ಟಿಯನ್ನು ನೀಡಿ ಸಾಕಷ್ಟು ಮುಂಚಿತವಾಗಿ ಆದೇಶವನ್ನು ಹೊರಡಿಸುವುದು ಅವಶ್ಯವಿದೆಯೆಂದು ಖಜಾನೆ ಆಯುಕ್ತರು ಮೇಲೆ ಉಲ್ಲೇಖ(2)ರಲ್ಲಿ ಓದಲಾದ ಕಡತದಲ್ಲಿ ಸರ್ಕಾರವನ್ನು ಕೋರಿದ್ದಾರೆ. ಆದ್ದರಿಂದ ಈ ಆದೇಶ ಹೊರಡಿಸಲಾಗಿದೆ.
ಆಡಳಿತ ಇಲಾಖೆಗಳಿಗೆ ಸೂಚನೆಗಳು
1. ಇಲಾಖಾ ಮುಖ್ಯಸ್ಥರು ಮತ್ತು ಅವರುಗಳ ಹಣ ಪಡೆಯುವ ಮತ್ತು ಬಟವಾಡೆ ಅಧಿಕಾರಿಗಳು ಈ ಆದೇಶದಲ್ಲಿ ತಿಳಿಸಿರುವ ವೇಳಾ ಪಟ್ಟಿಯಂತೆ ಕ್ರಮ ಕೈಗೊಳ್ಳತಕ್ಕದ್ದು ಮತ್ತು ಆರ್ಥಿಕ ಮಿತವ್ಯಯ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.
2. ಕಾಲಮಿತಿಯೊಳಗೆ ಪರಿಪೂರ್ಣವಾಗಿರುವ ಬಿಲ್ಲುಗಳನ್ನು ಸಲ್ಲಿಸಲು ಇಲಾಖೆಗಳು ಎಲ್ಲಾ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುವುದು. ಡಿ.ಎಸ್.ಸಿ ಸಂಗ್ರಹಣೆ / ನವೀಕರಣ ಅನುದಾನ ಕೋರಿಕೆ, ಮ್ಯಾಪಿಂಗ್ ಮುಂತಾದ ಚಟುವಟಿಕೆಗಳನ್ನು ಮುಂಚಿತವಾಗಿ ಪರಿಶೀಲಿಸಿ ಯಾವುದೇ ತೊಂದರೆ / ವಿಳಂಬವಾಗದಂತೆ ಎಚ್ಚರಿಕೆ ವಹಿಸುವುದು.
3. ಬಿಲ್ಲುಗಳನ್ನು ಸೆಳೆದು ಬ್ಯಾಂಕ್ ಅಥವಾ ವೈಯಕ್ತಿಕ ಠೇವಣಿ ಖಾತೆಗಳಲ್ಲಿ ಮೊತ್ತವನ್ನು ಜಮೆ ಮಾಡಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದೆ.





