HomeLatest News'ಮೊರಾರ್ಜಿ ದೇಸಾಯಿ' ವಸತಿ ಶಾಲೆಯಲ್ಲಿ 6 ನೇ ತರಗತಿ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ, ಪೋಷಕರಿಗೆ ಇಲ್ಲಿದೆ...

‘ಮೊರಾರ್ಜಿ ದೇಸಾಯಿ’ ವಸತಿ ಶಾಲೆಯಲ್ಲಿ 6 ನೇ ತರಗತಿ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ, ಪೋಷಕರಿಗೆ ಇಲ್ಲಿದೆ ಮಾಹಿತಿ

ಧಾರವಾಡ ಜಿಲ್ಲೆಯಲ್ಲಿನ 06 ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ 6 ನೇ ತರಗತಿ (ಆಂಗ್ಲ ಮಾಧ್ಯಮ) ಪ್ರವೇಶಕ್ಕಾಗಿ ಅಲ್ಪಸಂಖ್ಯಾತರ ಸಮುದಾಯದ ಮತ್ತು ಇತರೇ ವಿದ್ಯಾರ್ಥಿಗಳಿಂದ 2026-27 ನೇ ಸಾಲಿಗೆ ಅರ್ಜಿ ಆಹ್ವಾನಿಸಲಾಗಿದೆ.

5 ನೇ ತರಗತಿ ಪಾಸಾದ ಹಾಗೂ ಆದಾಯ ರೂ.2.50 ಲಕ್ಷಗಳಿಂತ ಕಡಿಮೆ ಇರುವ ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಮತ್ತು ಪಾರ್ಸಿ ವಿದ್ಯಾರ್ಥಿಗಳಿಗೆ ಶೇ.75 ಹಾಗೂ ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗ ಹಾಗೂ ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ (ಒಬಿಸಿ) ಶೇ.25 ಸೀಟು ಲಭ್ಯವಿದೆ.

ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕು ಅಂಚಟಗೇರಿ ಗ್ರಾಮದಲ್ಲಿರುವ ಡಾ|| ಎಪಿಜೆಅಬ್ದುಲ್ ಕಲಾಂ ವಸತಿ ಶಾಲೆ, ಧಾರವಾಡ ಗ್ರಾಮೀಣ ಶಿಂಗನಹಳ್ಳಿಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಂ.02, ಹುಬ್ಬಳ್ಳಿ ಅದರಗುಂಚಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಹೆಣ್ಣುಮಕ್ಕಳ ವಸತಿ ಶಾಲೆ, ನವಲಗುಂದದ ಅಲ್ಪಸಂಖ್ಯಾತರ ಮೊರಾರ್ಜಿದೇಸಾಯಿ ವಸತಿ ಶಾಲೆ, ಧಾರವಾಡ ಗ್ರಾಮೀಣ ಅಲ್ಪಸಂಖ್ಯಾತರ ಮೊರಾರ್ಜಿದೇಸಾಯಿ ವಸತಿ ಶಾಲೆಗಳ ಪ್ರವೇಶಕ್ಕಾಗಿ ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಸತಿ ಶಾಲೆಗಳಲ್ಲಿ ಉಚಿತ ಊಟ, ವಸತಿ, ಪಠ್ಯಪುಸ್ತಕ, ಲೇಖನ ಸಾಮಗ್ರಿ, ಸಮವಸ್ತ್ರಗಳೊಂದಿಗೆ ಇನ್ನಿತರೇ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು. ಪ್ರವೇಶ ಬಯಸುವ ಅಲ್ಪಸಂಖ್ಯಾತರ ಮತ್ತು ಇತರೇ ಪ್ರವರ್ಗಗಳ ಆಸಕ್ತ ವಿದ್ಯಾರ್ಥಿಗಳು ಫೆಬ್ರವರಿ 10, 2026 ರೊಳಗಾಗಿ ವೈಬ್ಸೈಟ್
https://sevasindhuservices.karnataka.gov.in ಮೂಲಕ ಆನ್ಲೈನ್ ಅರ್ಜಿಗಳನ್ನು ಸಲ್ಲಿಸಿಬಹುದು.
ಉಚಿತ ಸೇವೆ ಪಡೆಯಲು ಸಮೀಪದ ಜಿಲ್ಲಾ ಅಲ್ಪಸಂಖ್ಯಾತರ ಕಚೇರಿ ಅಥವಾ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಅಥವಾ ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಿಗೆ ಭೇಟಿ ನೀಡಬಹುದು.

ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ತಾಲ್ಲೂಕಾ ಮಾಹಿತಿ ಕೇಂದ್ರಗಳಾದ ಧಾರವಾಡ 9738287549, ಹುಬ್ಬಳ್ಳಿ:8867718261, ನವಲಗುಂದ:8746894524, ಕಲಘಟಗಿ:8951674107, ಕುಂದಗೋಳ:8904661872 ಗೆ ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular