HomeLatest Newsಡಿ.ಕೆ.ಸಹೋದರರು-ಹೆಚ್.ಡಿ.ಕೆ ನಡುವೆ ಮುಂದುವರೆದ ಟಾಕ್ ವಾರ್: ಕಾಂಗ್ರೆಸ್-ಜೆಡಿಎಸ್ ನಾಯಕರ ವಾಕ್ಸಮರದ ನಡುವೆ ಮತ್ತೆ ಮುನ್ನೆಲೆಗೆ ಬಂದ...

ಡಿ.ಕೆ.ಸಹೋದರರು-ಹೆಚ್.ಡಿ.ಕೆ ನಡುವೆ ಮುಂದುವರೆದ ಟಾಕ್ ವಾರ್: ಕಾಂಗ್ರೆಸ್-ಜೆಡಿಎಸ್ ನಾಯಕರ ವಾಕ್ಸಮರದ ನಡುವೆ ಮತ್ತೆ ಮುನ್ನೆಲೆಗೆ ಬಂದ ‘ಸಿಡಿ ಫ್ಯಾಕ್ಟರಿ’

ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಸಹೋದರರ ನಡುವಿನ ಮಾತಿನ ಸಮರ, ಟ್ವೀಟ್ ವಾರ್ ಗಳು ಮುಂದುವರೆದಿವೆ. ಮೀಡಿಯಾ ಹುಲಿಕುಮಾರಸ್ವಾಅಮಿಯವರ ಅನುಭದ ಕಾಲುವೆಯಲ್ಲಿ ಹರಿಯುತ್ತಿರುವುದು ಬರಿ ಸುಳ್ಳು, ಹಿಟ್ ಆಂಡ್ ರನ್, ಅವಕಾಶವಾದ ಆತ್ಮರತಿ ಎಂಬ ಕೊಚ್ಚೆ ಎಂದು ಟೀಕಿಸಿದ್ದ ಕಾಂಗ್ರೆಸ್ ಗೆ ಜೆಡಿಎಸ್ ಸಾಮಾಜಿಕ ಜಾಲತಾಣಗಳ ಮೂಲಕವೇ ಕುಟುಕಿದೆ.

ಸಿಡಿ ಫ್ಯಾಕ್ಟರಿ ಮಾಲೀಕನ‌ “ಮನೆಹಾಳು ಆತ್ಮರತಿ” ಬಗ್ಗೆ ರಾಜ್ಯ ಕಾಂಗ್ರೆಸ್ ಮರೆತಿದೆ. ಟೆಂಟ್’ನಲ್ಲಿ ನೀಲಿ ಸಿನಿಮಾ ತೋರಿಸಿದ “ದಂಧೆಕೋರನ ಆತ್ಮರತಿ” ಎಂತಹದ್ದು? ಕಲೆಕ್ಷನ್ ಗಿರಾಕಿಯ ಆತ್ಮರತಿ” ಇರುವುದು ಮಸಾಜ್ ಪಾರ್ಲರ್’ಗಳಲ್ಲಿ ಅಲ್ಲವೇ ? “ಹನಿಟ್ರಾಪ್ ಅಧ್ಯಕ್ಷನ ಆತ್ಮರತಿ”ಗೆ ಸಂಪುಟದ ಮಂತ್ರಿಗಳು, ಶಾಸಕರೇ ಬಲಿಪಶುಗಳಲ್ಲವೇ ? ಎಂದು ಪ್ರಶ್ನಿಸಿದೆ.

ದೀನ ದಲಿತರು, ಬಡವರು, ಮಹಿಳೆಯರ ಜಮೀನು ಕಬಳಿಸುವ ರಿಯಲ್ ಎಸ್ಟೇಟ್ ಏಜೆಂಟ್’ನ ಆತ್ಮರತಿ ಬಗ್ಗೆ ಬೆಂಗಳೂರಿಗೇ ಚಿರಪರಿಚಿತ. “ಸ್ವಾರ್ಥ ಸಾಧನೆಗೆ ಬ್ಲ್ಯಾಕ್ ಮೇಲ್” ಮಾಡುವ ಆತ್ಮರತಿಯ ರಾಜಕಾರಣಿಯ ಅನಾಚಾರಗಳ ದೊಡ್ಡ ಪಟ್ಟಿಯೇ ಇದೆ. ರೌಡಿ ರಾಜಕಾರಣಿಯ ಅನುಭವದ ಕೊಚ್ಚೆಗೆ ಯಾರು ತಾನೆ ಸಮ. ನಿಮಗೆ ಯಾರೂ ಪ್ರತಿಸ್ಪರ್ಧಿಗಳೇ ಇಲ್ಲ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ರೋಲ್ ಕಾಲ್ ಅಧ್ಯಕ್ಷ? ಎಂದು ವಾಗ್ದಾಳಿ ನಡೆಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular