ಕೋಲಾರ: ಹಿಂದೂ ಮತ್ತು ಮುಸ್ಲಿಂ ಧರ್ಮದ ಕುರಿತಾಗಿ ಅವಹೇಳನ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ವೇಮಗಲ್ ಗ್ರಾಮದ ವ್ಯಕ್ತಿಯನ್ನು ವೇಮಗಲ್ ಠಾಣೆ ಪೋಲೀಸರು ಬಂಧಿಸಿದ್ದಾರೆ. ರಮೇಶ್ ಬಂಧಿತ ಆರೋಪಿ. ರಾಜಸ್ಥಾನದಿಂದ ಬಂದು ಅನೇಕ ವರ್ಷಗಳಿಂದ ವೇಮಗಲ್ ನಲ್ಲಿ ಜುವೆಲರಿ ಅಂಗಡಿ ಇಟ್ಟುಕೊಂಡಿದ್ದ ರಮೇಶ್ ನನ್ನು ಬಂಧಿಸಲಾಗಿದೆ.
ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಿಂದಿಸಿ ಅವಾಚ್ಯವಾಗಿ ರಮೇಶ್ ಮಾತನಾಡಿದ್ದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮುಸ್ಲಿಂ ಸಮುದಾಯದವರು ವೇಮಗಲ್ ಪೊಲೀಸ್ ಅವರಿಗೆ ದೂರು ನೀಡಿ ಆರೋಪಿ ಬಂಧನಕ್ಕೆ ಒತ್ತಾಯಿಸಿದ್ದರು. ಪರಿಶೀಲನೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

