ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಪ್ರಯುಕ್ತ ನಿನ್ನೆ ‘ಟಾಕ್ಸಿ’ಕ್ ಚಿತ್ರದ ಟೀಸರ್ ರಿಲೀಸ್ ಆಗಿದೆ. ರಿಲೀಸ್ ಆದ 21 ಗಂಟೆಯಲ್ಲಿ ಟಾಕ್ಸಿಕ್ ಚಿತ್ರದ ಟೀಸರ್ ಬರೋಬ್ಬರಿ 47 ಮಿಲಿಯನ್ ವೀವ್ಸ್ ಕಂಡಿದೆ.
ನಿನ್ನೆ ಬೆಳಗ್ಗೆ 10 ಗಂಟೆ 10 ನಿಮಿಷಕ್ಕೆ ಟೀಸರ್ ರಿಲೀಸ್ ಆಯಿತು. ಟೀಸರ್ ನೋಡಿದ ಅಭಿಮಾನಿಗಳು ಇದು ಕನ್ನಡ ಸಿನಿಮಾನೋ..? ಹಾಲಿವುಡ್ ಸಿನಿಮಾನೋ ಎಂದು ತಲೆ ಕೆಡಿಸಿಕೊಂಡಿದ್ದಾರೆ. ಯಶ್ ಖದರ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಯಶ್ ಅವರು ರಾಯ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ಇಲ್ಲಿ ಬೋಲ್ಡ್ ಆ್ಯಂಡ್ ಮಾಸ್ ಲುಕ್ನಲ್ಲಿ ಎಂಟ್ರಿಕೊಟ್ಟಿದ್ದಾರೆ. 2 ನಿಮಿಷ 51 ಸೆಕೆಂಡುಗಳ ಟೀಸರ್ನಲ್ಲಿ ಯಶ್ ಒಂದೇ ಒಂದು ಡೈಲಾಗ್ ಹೊಡೆದಿದ್ದು. ಅದು “ಡ್ಯಾಡ್ ಈಸ್ ಹೋಮ್” ಎಂಬ ಡೈಲಾಗ್ ಆಗಿದೆ.ಟಾಕ್ಸಿಕ್ ಟೀಸರ್ ವೀಕ್ಷಿಸಿದ ನಟ ಕಿಚ್ಚ ಸುದೀಪ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿ ನಟ ಯಶ್ ಗೆ ಶುಭ ಹಾರೈಸಿದ್ದಾರೆ.
ಟೀಸರ್ ನಲ್ಲಿ ನಟ ಯಶ್ ಜೊತೆ ಯುವತಿಯೊಬ್ಬರು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಆ ದೃಶ್ಯ ಈಗ ಸಂಚಲನ ಸೃಷ್ಟಿಸಿದೆ. ಇಂತಹ ದೃಶ್ಯವಿರುವ ಟೀಸರ್ ನ್ನು ಫ್ಯಾಮಿಲಿ ಜೊತೆ ನೋಡುವುದು ಹೇಗೆ ಹಲವರು ಪ್ರಶ್ನೆ ಮಾಡಿದ್ದಾರೆ.
ಗೀತು ಮೋಹನ್ ದಾಸ್ ನಿರ್ದೇಶನ ಮಾಡಿರುವ ಈ ಸಿನಿಮಾ ಮಾರ್ಚ್ 19 ರಂದು ವಿಶ್ವದಾದ್ಯಂತ ರಿಲೀಸ್ ಆಗಲಿದೆ ಚಿತ್ರದಲ್ಲಿ ರುಕ್ಮಿಣಿ ವಸಂತ್, ನಯನತಾರಾ, ಕಿಯಾರಾ ಅಡ್ವಾಣಿ ಸೇರಿದಂತೆ ಹಲವರು ನಟಿಸಿದ್ದಾರೆ, ಸಿನಿಮಾ ಸಿನಿಪ್ರಿಯರಲ್ಲಿ ಸಿಕ್ಕಾಪಟ್ಟೆ ಕ್ಯುರಿಯಾಸಿಟಿ ಹುಟ್ಟಿಸಿದೆ.

