ಕೇಂದ್ರೀಯ ಸೈನಿಕ ಬೋರ್ಡನಿಂದ ಅಂತರರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಸೇವೆಯಲ್ಲಿರುವ ಮತ್ತು ಮಾಜಿ ಸೈನಿಕರ ಮಕ್ಕಳಿಗೆ, ಅವಲಂಬಿತರಿಗೆ ಕ್ರೀಡಾ ವಿದ್ಯಾರ್ಥಿವೇತನ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಥಿವೇತನ ನೀಡುವ ಪ್ರಕ್ರಿಯೆಯು ಪ್ರತಿ ವರ್ಷ ಎಪ್ರಿಲ್ ತಿಂಗಳಲ್ಲಿ ಪ್ರಾರಂಭವಾಗುವುದು. ಅರ್ಹ ಮಾಜಿ ಸೈನಿಕರು ತಮ್ಮ ಮಕ್ಕಳು, ಅವಲಂಬಿತರು ಅಂತರರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದರೆ, ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ, ವಿದ್ಯಾರ್ಥಿವೇತನದ ಸದುಪಯೋಗ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಧಾರವಾಡ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಾರ್ಯಾಲಯವನ್ನು ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೈಜ್ಞಾನಿಕ ಪದ್ದತಿಯಿಂದ ಗೋಡಂಬಿ ಬೆಳೆಯ ಕುರಿತು ಉಚಿತ ತರಬೇತಿಗೆ ನೋಂದಣಿ ಪ್ರಾರಂಭ
ಧಾರವಾಡ ” ಧಾರವಾಡ ಪ್ರಾದೇಶಿಕ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ (ಕುಂಬಾಪುರ ಫಾರ್ಮ)ವು ವೈಜ್ಞಾನಿಕ ಪದ್ದತಿಯಿಂದ ಗೋಡಂಬಿ ಬೆಳೆಯ ಕುರಿತು ಉಚಿತ ತರಬೇತಿ ಬಗ್ಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಜನವರಿ 19, 2026 ರಂದು ಹಮ್ಮಿಕೊಳ್ಳಲಾಗಿದೆ.
ತರಬೇತಿಯಲ್ಲಿ ಗೋಡಂಬಿ ಬೆಳೆಗೆ ಸಂಬಂಧಿಸಿದ ಸುಧಾರಿತ ತಂತ್ರಜ್ಞಾನಗಳು, ತಳಿಗಳ ಆಯ್ಕೆ, ತೋಟ ನಿರ್ವಹಣೆ, ಪೋಷಕಾಂಶ ನಿರ್ವಹಣೆ, ಕೀಟ-ರೋಗ ನಿಯಂತ್ರಣ ಹಾಗೂ ಕೋಯ್ಲುತ್ತರ ತಂತ್ರಜ್ಞಾನದ ಕುರಿತು ನುರಿತ ಹಾಗೂ ಅನುಭವವುಳ್ಳ ತಜ್ಞರಿಂದ ತಾಂತ್ರಿಕ ಮಾಹಿತಿಯನ್ನು ನೀಡಲಾಗುತ್ತದೆ.
ಆಸಕ್ತ ರೈತರು ಧಾರವಾಡ ತೋ.ವಿ.ಶಿ.ಕೇಂದ್ರ, ಪ್ರಾ.ತೋ.ಸಂ.ವಿ.ಕೇಂದ್ರದ ಮುಖ್ಯಸ್ಥೆ ಡಾ. ಪಲ್ಲವಿ ಜಿ. ಮೊಬೈಲ್ ನಂ: 7892770955 ಗೆ ಜನವರಿ 17, 2026 ರೊಳಗಾಗಿ ನೊಂದಾಯಿಸಕೊಳ್ಳಬೇಕೇಂದು ಪ್ರಾದೇಶಿಕ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರವು ಪ್ರಕಟಣೆ ತಿಳಿಸಿದೆ.

