HomeLatest NewsBIG NEWS : ರಾಜ್ಯದ ನಿವೃತ್ತ ಶಾಲಾ ಶಿಕ್ಷಕರಿಗೆ 'ಗಳಿಕೆ ರಜೆ' ನಗಧೀಕರಣ ಸೌಲಭ್ಯ :...

BIG NEWS : ರಾಜ್ಯದ ನಿವೃತ್ತ ಶಾಲಾ ಶಿಕ್ಷಕರಿಗೆ ‘ಗಳಿಕೆ ರಜೆ’ ನಗಧೀಕರಣ ಸೌಲಭ್ಯ : ಶಿಕ್ಷಣ ಇಲಾಖೆ ಮಹತ್ವದ ಆದೇಶ

ಬೆಂಗಳೂರು : ರಾಜ್ಯದ ನಿವೃತ್ತ ಶಾಲಾ  ಶಿಕ್ಷಕರಿಗೆ ಗಳಿಕೆ ರಜೆ ನಗಧೀಕರಣ ಸೌಲಭ್ಯ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಶಾಲಾ ಶಿಕ್ಷಣ ಇಲಾಖೆಯ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತರಾದ ನೌಕರರುಗಳಿಗೆ ನಿವೃತ್ತಿ ನಂತರದ ಗಳಿಕೆ ರಜೆ ನಗದೀಕರಣ ಸೌಲಭ್ಯಕ್ಕೆ ಸಂಬಂಧಿಸಿದಂತೆ 2019-20 ರಿಂದ 2020-21 ನೇ ಸಾಲಿನಲ್ಲಿ ನಿವೃತ್ತರಾದವರಿಗೆ ರೂ.9599.48 ಲಕ್ಷಗಳನ್ನು 2022-23 ನೇ ಸಾಲಿನಲ್ಲಿ, 2021-22 ಮತ್ತು 2022-23ನೇ ಸಾಲಿನಲ್ಲಿ ನಿವೃತ್ತರಾದವರಿಗೆ ರೂ.8265.20 ಲಕ್ಷಗಳನ್ನು 2023-24 ನೇ ಸಾಲಿನಲ್ಲಿ ಹಾಗೂ 2023-24 ಮತ್ತು 2024-25 ನೇ ಸಾಲಿನಲ್ಲಿ ನಿವೃತ್ತರಾದ ಪ್ರಕರಣಗಳಿಗೆ ರೂ.100.86 ಕೋಟಿಗಳನ್ನು 2024-25 ನೇ ಸಾಲಿನಲ್ಲಿ ಸಂಬಂಧಿಸಿದ ಶಿಕ್ಷಕರು/ನೌಕರರುಗಳಿಗೆ ನಿವೃತ್ತಿ ನಂತರದ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ಈಗಾಗಲೇ ಬಿಡುಗಡೆ ಮಾಡಲಾಗಿರುತ್ತದೆ.

2024-25 ಮತ್ತು 2025-26 ನೇ ಸಾಲಿನವರೆಗೆ ಶಾಲಾ ಶಿಕ್ಷಣ ಇಲಾಖೆಯ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತರಾದ ಶಿಕ್ಷಕರು/ಸಿಬ್ಬಂದಿಗಳಿಗೆ 2025-26 ನೇ ಸಾಲಿನಲ್ಲಿ ಅಗತ್ಯವಾದ ಅನುದಾನವನ್ನು ಆರ್ಥಿಕ ಇಲಾಖೆಯಿಂದ ಬಿಡುಗಡೆ ಆಗುವ ನಿರೀಕ್ಷೆಯಲ್ಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿನ್ನಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2024-25 ನೇ ಸಾಲಿನಲ್ಲಿ ನಿವೃತ್ತರಾಗಿ ಗಳಿಕೆ ರಜೆ ನಗದೀಕರಣವಾಗದೆ ಇರುವ ಹಾಗೂ 2025-26ನೇ ಸಾಲಿನಲ್ಲಿ ನಿವೃತ್ತರಾದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು/ಸಿಬ್ಬಂದಿಗಳ ಮಾಹಿತಿಗಳನ್ನು ಲಗತ್ತಿಸಲಾದ ಅನುಬಂಧ-1, & ಅನುಬಂಧ-2 ಗಳಲ್ಲಿರುವಂತೆ ಸಂಬಂಧಿಸಿದ ತಾಲ್ಲೂಕು ಕಛೇರಿಗಳಿಂದ ಪಡೆದು ಕ್ರೋಢಿಕರಿಸಿ ಕ್ರೋಢೀಕೃತ ಮಾಹಿತಿಯನ್ನು ಈ ಕೆಳಗಿನ ವೇಳಾಪಟ್ಟಿಯಂತೆ ಈ ಕಛೇರಿಗೆ ಹಾಜರಾಗಲು ಸಿಬ್ಬಂದಿಯನ್ನು ನಿಯೋಜಿಸುವುದು. ಜಿಲ್ಲಾವಾರು ನಿಗದಿಪಡಿಸಿದ ವೇಳಾಪಟ್ಟಿಯಂತೆ ಆಯಾ ದಿನಾಂಕಗಳಂದು ಸಂಬಂಧಿಸಿದ ಜಿಲ್ಲೆಯ ಮಾಹಿತಿಯನ್ನು ಈ ಕೆಳಕಂಡ ದಾಖಲೆಗಳೊಂದಿಗೆ ಕಡ್ಡಾಯವಾಗಿ ಖುದು ಹಾಜರಾಗಿ ಸಲ್ಲಿಸಲು ತಿಳಿಸಿದೆ. ತಪ್ಪಿದಲ್ಲಿ ಅನುದಾನವನ್ನು ಬಿಡುಗಡೆಗೊಳಿಸಲಾಗುವುದಿಲ್ಲ ಎಂಬ ಅಂಶವನ್ನು ತಿಳಿಸಿದೆ.

ಷರತ್ತುಗಳು:

1. ಶಿಕ್ಷಕರು/ಸಿಬ್ಬಂದಿಗಳ ಸೇವಾಪುಸ್ತಕದಲ್ಲಿ ದೃಢೀಕರಿಸಿರುವಂತೆ ನಿವೃತ್ತಿ ದಿನಾಂಕಕ್ಕೆ ಲಭ್ಯವಿರುವ ಆಖೈರು ಶುಲ್ಕ ಗಳಿಕೆ ರಜೆಯ ತಃಖೆಯನ್ನು ಪರಿಶೀಲಿಸಿ ನಮೂದಿಸಿರುವ ಗಳಿಕೆ ರಜೆ ವಿವರಗಳು ಕ್ರಮವಾಗಿರುವ ಬಗ್ಗೆ ಖಾತರಿಪಡಿಸಿಕೊಂಡು ಅದರಂತೆ ಗಳಿಕೆ ರಜೆ ಲೆಕ್ಕ ತಃಖೆಯಲ್ಲಿ ನಮೂದಿಸಿ ಪ್ರತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಜಿಲ್ಲಾ ಉಪನಿರ್ದೇಶಕರುಗಳು ದೃಢೀಕರಿಸಿ ಸಲ್ಲಿಸತಕ್ಕದ್ದು.

2. ಶಿಕ್ಷಕರು/ಸಿಬ್ಬಂದಿಗಳ ದೃಢೀಕರಿಸಿದ ಎಲ್.ಪಿ.ಸಿ/ಕೊನೆಯ ವೇತನ ಚೀಟಿಯ ಪ್ರತಿ.

3. ಮೇಲೆ ವಿವರಿಸಿದಂತೆ ಅನುಬಂಧ-182 ರಲ್ಲಿ ಸಲ್ಲಿಸಲಾಗುವ ಮಾಹಿತಿಗಳಂತೆ ಅನುದಾನ ಲಭ್ಯತೆಗೆ ಒಳಪಟ್ಟು ಅನುದಾನ ಬಿಡುಗಡೆ ಮಾಡಲಾಗುವುದು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular