HomeLatest Newsಚಿನ್ನ–ಬೆಳ್ಳಿ ದರದಲ್ಲಿ ದಾಖಲೆ; ಬುಧವಾರ ಬೆಳ್ಳಿ ಬೆಲೆ ₹10,000 ಏರಿಕೆ

ಚಿನ್ನ–ಬೆಳ್ಳಿ ದರದಲ್ಲಿ ದಾಖಲೆ; ಬುಧವಾರ ಬೆಳ್ಳಿ ಬೆಲೆ ₹10,000 ಏರಿಕೆ

ಬೆಂಗಳೂರು: ದೇಶೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಈಗ ಗಗನಕ್ಕೇರಿದೆ, ಬಂಗಾರ ಕೊಳ್ಳೋಣ ಎಂದು ಕನಸು ಕಾಣುತ್ತಿದ್ದ ಮಧ್ಯಮ ವರ್ಗದ ಜನರಿಗೆ ಬೆಲೆ ಏರಿಕೆ ದೊಡ್ಡ ಶಾಕ್ ನೀಡಿದೆ. ಚಿನ್ನ ಮಾತ್ರವಲ್ಲ, ಬೆಳ್ಳಿ ಬೆಲೆಯೂ ರಾಕೆಟ್ ವೇಗದಲ್ಲಿ ಏರುತ್ತಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದೆ.

ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳು, ರಾಜಕೀಯ ಅಸ್ಥಿರತೆ ಮತ್ತು ಪೂರೈಕೆಯಲ್ಲಿನ ಕೊರತೆ ಈ ಬೆಲೆ ಏರಿಕೆಗೆ ಮುಖ್ಯ ಕಾರಣ. ಅದರಲ್ಲೂ ವೆನೆಜುವೆಲಾ ಮೇಲಿನ ಯುಎಸ್ ದಾಳಿಯು ಬುಲಿಯನ್ ಮಾರುಕಟ್ಟೆಯಲ್ಲಿ ಕಂಪನ ಸೃಷ್ಟಿಸಿದೆ. ಹೂಡಿಕೆದಾರರು ಸೇಫ್ ಆಗಿರಲು ಚಿನ್ನದ ಮೇಲೆ ಹಣ ಹೂಡುತ್ತಿರುವುದರಿಂದ ದರ ಏರಿಕೆಗೆ ಮತ್ತಷ್ಟು ವೇಗ ಸಿಕ್ಕಿದೆ

ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆಯು ಬುಧವಾರದಂದು ಅಕ್ಷರಶಃ ಭರ್ಜರಿ ಜಿಗಿತವನ್ನು ಕಂಡಿದ್ದು, ಒಂದೇ ದಿನದಲ್ಲಿ ಪ್ರತಿ ಗ್ರಾಮ್ ಬೆಳ್ಳಿ ದರದಲ್ಲಿ 10 ರೂಪಾಯಿ ಏರಿಕೆಯಾಗಿದ್ದರೆ, ಕಳೆದ ಕೇವಲ ಮೂರು ದಿನಗಳ ಅವಧಿಯಲ್ಲಿ ಒಟ್ಟು 22 ರೂಪಾಯಿಯಷ್ಟು ಏರಿಕೆ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇತ್ತ ಚಿನ್ನದ ಬೆಲೆಯೂ ಗಗನಕ್ಕೇರಿದ್ದು, ಸದ್ಯ ಭಾರತದಲ್ಲಿ 10 ಗ್ರಾಮ್ ತೂಕದ 22 ಕ್ಯಾರಟ್ ಆಭರಣ ಚಿನ್ನದ ಬೆಲೆ 1,27,850 ರೂಪಾಯಿ ತಲುಪಿದೆ. ಇನ್ನು ಶುದ್ಧವಾದ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,39,480 ರೂಪಾಯಿ ಆಗಿದೆ.

ಇಂದಿನ ಲೇಟೆಸ್ಟ್ ದರಪಟ್ಟಿ (ಬೆಂಗಳೂರು ಹಾಗೂ ದೇಶದ ಪ್ರಮುಖ ನಗರಗಳಲ್ಲಿ):

22 ಕ್ಯಾರಟ್ ಚಿನ್ನ (10 ಗ್ರಾಂ): ₹1,27,850

24 ಕ್ಯಾರಟ್ ಅಪರಂಜಿ ಚಿನ್ನ (10 ಗ್ರಾಂ): ₹1,39,480

ಬೆಳ್ಳಿ (100 ಗ್ರಾಂ): ₹26,300 (ಬೆಂಗಳೂರಿನಲ್ಲಿ)

ಚಿನ್ನದ ದರ ಪಟ್ಟಿ (ಪ್ರತಿ 1 ಗ್ರಾಮ್‌ಗೆ):

24 ಕ್ಯಾರಟ್ (ಅಪರಂಜಿ ಚಿನ್ನ): ₹13,948

22 ಕ್ಯಾರಟ್ (ಆಭರಣ ಚಿನ್ನ): ₹12,785

18 ಕ್ಯಾರಟ್ (ಸಣ್ಣ ಆಭರಣಗಳಿಗೆ): ₹10,461

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ

ನಗರಗಳ ಹೆಸರು ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರು ₹1,39,480

ನಾಗ್ಪುರ ₹1,39,480

ಮುಂಬೈ ₹1,39,480

ಚೆನ್ನೈ ₹1,39,480

ಕೋಲ್ಕತ್ತಾ ₹1,39,480

ಪಾಟ್ನಾ ₹1,39,530

ಸೂರತ್‌ ₹1,39,530

ಚಂಡೀಗಢ ₹1,39,630

ಲಕ್ನೋ ₹1,39,630

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular