HomeLatest NewsBREAKING: 3ನೇ ತರಗತಿ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ: ಬಾಲಕನ ಸ್ಥಿತಿ ಗಂಭೀರ

BREAKING: 3ನೇ ತರಗತಿ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ: ಬಾಲಕನ ಸ್ಥಿತಿ ಗಂಭೀರ

ರಾಯಚೂರು: ಶಾಲೆಗೆ ಬಂದ ವಿದ್ಯಾರ್ಥಿಗಳನ್ನು ಸಹನೆಯಿಂದ ತಿದ್ದಿ, ಬುದ್ಧಿಹೇಳಿ ಮಾರ್ಗದರ್ಶನ ನೀಡಬೇಕಾದ ಶಿಕ್ಷಕರೇ ವಿದ್ಯಾರ್ಥಿಗಳ ಮೇಲೆ ಕ್ರೌರ್ಯ ಮೆರೆದರೆ ಮಕ್ಕಳ ಪಾಡೇನು? ಇಂಥದ್ದೇ ಘಟನೆ ರಾಯಚೂರಿನಲ್ಲಿ ನಡೆದಿದೆ. ವಿದ್ಯಾರ್ಥಿ ಓದಿಲ್ಲ ಎಂಬ ಕಾರಣಕ್ಕೆ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗೆ ಮನಬಂದಂತೆ ಹೊಡೆದಿದ್ದು, ವಿದ್ಯಾರ್ಥಿ ಸ್ಥಿತಿ ಗಂಭೀರವಾಗಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಲಗ ಗ್ರಾಮದಲ್ಲಿ ನಡೆದಿದೆ.

ಗಲಗ ಗ್ರಾಮದ ಸರ್ಕಾರಿ ಉರ್ದು ಶಾಲೆಯ ಶಿಕ್ಷಕಿ ಹರ್ಷಿಯಾ ತಸ್ಕಿನ್ ಬಾಲಕನಿಗೆ ಬಾಸುಂಡೆ ಬರುವಂತೆ ಥಳಿಸಿದ್ದಾಳೆ. ಓದಿಲ್ಲ ಎಂಬ ಕಾರಣ ನೀಡಿ ೩ನೇ ತರಗತಿಯ ವಿದ್ಯಾರ್ಥಿಯನ್ನು ಮನಸೋ ಇಚ್ಛೇ ಹೊಡೆದಿದ್ದು, ಗಂಭೀವಾಗಿ ಹಲ್ಲೆಗೊಳಗಾದ ಬಾಲಕನ ಸ್ಥಿತಿ ಗಂಭೀರವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಾಲಕನ ಮೈತುಂಬಾ ಬಾಸುಂಡೆ ಬಂದಿದೆ. ಗಾಯಾಳು ಬಾಲಕನನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಶಿಕ್ಷಕಿ ಹರ್ಷಿಯಾ ತಸ್ನಿಯಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರು ಆಗ್ರಹಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular