HomeSportsಅಮುಲ್ V/S ನಂದಿನಿ: ಆರ್‌ಸಿಬಿಗೆ ಕೆಎಂಎಫ್‌ ಪ್ರಾಯೋಜಕತ್ವ?

ಅಮುಲ್ V/S ನಂದಿನಿ: ಆರ್‌ಸಿಬಿಗೆ ಕೆಎಂಎಫ್‌ ಪ್ರಾಯೋಜಕತ್ವ?

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ಐಪಿಎಲ್ ತಂಡ. ಕಪ್ ಗೆಲ್ಲುವ ಮೂಲಕ ಕನ್ನಡಿಗರ ಹೃದಯವನ್ನು ಆರ್‌ಸಿಬಿ ಗೆದ್ದಿದೆ. ಈ ಆರ್‌ಬಿಸಿ ತಂಡಕ್ಕೆ ‘ನಂದಿನಿ’ ಬಲ ಸಿಗಲಿದೆ. ಹೌದು ಆರ್‌ಸಿಬಿ ತಂಡದ ಪ್ರಾಯೋಜಕತ್ವ ವಹಿಸಿಕೊಳ್ಳಲು ಕೆಎಂಎಫ್ ಚಿಂತನೆ ನಡೆಸಿದೆ.

ಕಳೆದ ಆವೃತ್ತಿ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಮೂಲದ ಅಮುಲ್ ಆರ್‌ಸಿಬಿ ಪ್ರಾಯೋಜಕತ್ವ ಮಾಡಿತ್ತು. ಆದ್ದರಿಂದ 2026ರ ಐಪಿಎಲ್ ಪಂದ್ಯಾವಳಿಯಲ್ಲಿ ಕನ್ನಡಿಗೆ ಹೆಮ್ಮೆಯ ನಂದಿನಿ ಬ್ರಾಂಡ್ ಅನ್ನು ಪ್ರಾಯೋಜಕತ್ವಕ್ಕೆ ಬಳಕೆ ಮಾಡಲು ಪ್ರಯತ್ನ ನಡೆಸಲಾಗುತ್ತಿದೆ.

ಕೆಎಂಎಫ್‌ ವಿರಾಟ್ ಕೊಹ್ಲಿ, ಮತ್ತೊಬ್ಬ ಆಟಗಾರರ ಮೂಲಕ ಆರ್‌ಸಿಬಿ ಪಂದ್ಯದ ವೇಳೆ ‘ನಂದಿನಿ’ ಬ್ರಾಂಡ್ ಪ್ರಾಯೋಜಕತ್ವ ನಡೆಸಲಿದೆ. ಇದಕ್ಕಾಗಿ ಈಗಾಗಲೇ ಮಾತುಕತೆಗಳು ನಡೆಯುತ್ತಿವೆ. ಏಜೆನ್ಸಿವೊಂದರ ಸಹಕಾರದಿಂದ ಮಾತುಕತೆ ನಡೆಸಲಾಗುತ್ತಿದ್ದು, ಸಹಿ ಹಾಕುವುದು ಸೇರಿದಂತೆ ಒಪ್ಪಂದದ ಪ್ರಕ್ರಿಯೆ ಕುರಿತು ಚರ್ಚೆಗಳು ನಡೆಯುತ್ತಿವೆ. ಆರ್‌ಸಿಬಿ ಕಳೆದ ಸೀಸನ್‌ನಲ್ಲಿ ಅಮುಲ್‌ಗೆ ಪ್ರಾಯೋಜಕತ್ವ ನೀಡಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕನ್ನಡಿಗೆ ನೆಚ್ಚಿನ ತಂಡವಾಗಿರುವ ಆರ್‌ಸಿಬಿಗೆ ಪ್ರಾಯೋಜಕತ್ವ ನೀಡುವ ಮೂಲಕ ಇನ್ನಷ್ಟು ಗ್ರಾಹಕರನ್ನು ಆಕರ್ಷಣೆ ಮಾಡಲು ಕೆಎಂಎಫ್‌ ತೀರ್ಮಾನಿಸಿದೆ. ಆದರೆ ಪ್ರಾಯೋಕತ್ವಕ್ಕೆ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ?. ಸಹಕಾರಿ ಸಂಸ್ಥೆ ಕೆಎಂಎಫ್ ಅಷ್ಟು ಹಣ ಹೂಡಿಕೆ ಮಾಡಲಿದೆಯೇ? ಎಂಬುದು ಪ್ರಶ್ನೆಯಾಗಿದೆ.

ಕೆಎಂಎಫ್ ಈಗಾಗಲೇ ಈ ಪ್ರಾಯೋಜಕತ್ವದ ಹಕ್ಕುಗಳನ್ನು ಪಡೆಯಲು ಟೆಂಡರ್ ಕರೆದಿದೆ. ಆರ್‌ಸಿಬಿ ತಂಡವು ಕರ್ನಾಟಕವನ್ನು ಪ್ರತಿನಿಧಿಸುವುದರಿಂದ ಮತ್ತು ವಿರಾಟ್ ಕೊಹ್ಲಿ ಅವರಂತಹ ಜನಪ್ರಿಯ ಆಟಗಾರರು ಇರುವುದರಿಂದ, ರಾಷ್ಟ್ರಮಟ್ಟದಲ್ಲಿ ‘ನಂದಿನಿ’ ಬ್ರ್ಯಾಂಡ್ ಅನ್ನು ಮತ್ತಷ್ಟು ವಿಸ್ತರಿಸಲು ಕೆಎಂಎಫ್ ಈ ಕುರಿತು ಚಿಂತನೆ ನಡೆಸಿದೆ.

ಈ ಕುರಿತು ಮನಿ ಕಂಟ್ರೋಲ್ ವರದಿ ಮಾಡಿದ್ದು, “ನಾವು ಐಪಿಎಲ್ 2026 ಗಾಗಿ ಆರ್‌ಸಿಬಿ ಜೊತೆಗೆ ಅಧಿಕೃತ ಪಾಲುದಾರಿಕೆಯನ್ನು ಹೊಂದಲು ಎದುರು ನೋಡುತ್ತಿದ್ದೇವೆ. ಐಪಿಎಲ್, ಬಿಸಿಸಿಐ ಮತ್ತು ಫ್ರಾಂಚೈಸಿ ನಿಯಮಗಳಿಗೆ ಅನುಗುಣವಾಗಿ ಈ ಹಕ್ಕುಗಳನ್ನು ಪಡೆದುಕೊಂಡು ಕಾರ್ಯಗತಗೊಳಿಸಬಲ್ಲ ಏಜೆನ್ಸಿಗಳನ್ನು ನೇಮಿಸಿಕೊಳ್ಳಲು ಟೆಂಡರ್ ಕರೆಯಲಾಗಿದೆ,” ಎಂದು ಕೆಎಂಎಫ್ ಹಿರಿಯ ಅಧಿಕಾರಿಯೊಬ್ಬರು ಮನಿಕಂಟ್ರೋಲ್‌ಗೆ ತಿಳಿಸಿದ್ದಾರೆ.

ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ಮಾತನಾಡಿ, “ಐಪಿಎಲ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ತಂಡವಾದ ಆರ್‌ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಅತ್ಯಧಿಕ ಫಾಲೋವರ್ಸ್ ಹೊಂದಿದೆ ಮತ್ತು ವಿರಾಟ್ ಕೊಹ್ಲಿ ಅತ್ಯಂತ ಜನಪ್ರಿಯ ಆಟಗಾರರು. ನಾವು ಪ್ರಚಾರಕ್ಕಾಗಿ ಕೊಹ್ಲಿ ಮತ್ತು ಇತರ ಇಬ್ಬರು ಆಟಗಾರರನ್ನು ಬಳಸಿಕೊಳ್ಳಲು ಉದ್ದೇಶಿಸಿದ್ದೇವೆ. ಇದು ದೆಹಲಿ, ಮುಂಬೈ ಮತ್ತು ಉತ್ತರ ಪ್ರದೇಶದಂತಹ ಮಾರುಕಟ್ಟೆಗಳಲ್ಲಿ ನಂದಿನಿ ಬ್ರ್ಯಾಂಡ್ ವಿಸ್ತರಣೆಗೂ ಬೆಂಬಲ ನೀಡಲಿದೆ” ಎಂದು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

ಗುಜರಾತ್ ಮೂಲದ ಅಮುಲ್ ಈ ಬಾರಿಯ ಐಪಿಎಲ್‌ನಲ್ಲಿ ಯಾವ ತಂಡಕ್ಕೆ ಪ್ರಯೋಜಕ್ವ ನೀಡುತ್ತದೆ ಎಂಬುದನ್ನು ಇನ್ನೂ ಘೋಷಣೆ ಮಾಡಿಲ್ಲ. ಆರ್‌ಸಿಬಿ ಕಳೆದ ಬಾರಿ ಕಪ್ ಗೆದ್ದಿರುವ ಕಾರಣ ಮಾರುಕಟ್ಟೆ ಮೌಲ್ಯವೂ ಹೆಚ್ಚಾಗಿದೆ. ಈ ಬಾರಿಯ ಉದ್ಘಾಟನಾ ಪಂದ್ಯವನ್ನು ಆಡುವ ಕಾರಣ ಪ್ರಾಯೋಜಕತ್ವ ಪಡೆಯಲು ಪೈಪೋಟಿ ಇರುತ್ತದೆ.

ನಮ್ಮ ಮೆಟ್ರೋ ನಿಲ್ದಾಣದಲ್ಲಿ ಅಮುಲ್ ಕಿಸೋಸ್ಕ್‌ಗಳನ್ನು ಸ್ಥಾಪನೆ ಮಾಡಲು ಅನುಮತಿ ನೀಡಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಈಗಾಗಲೇ ಟೀಕೆಯನ್ನು ಎದುರಿಸಿದೆ. ಕೆಎಂಎಫ್‌ನ ನಂದಿನಿ ಔಟ್‌ಲೆಟ್‌ಗಳು ಈಗಾಗಲೇ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಸ್ಥಾಪನೆಯಾಗುತ್ತಿವೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular