HomeLatest Newsರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಚೆನ್ನಾಗಿ ಓದಿದ್ರೆ  ಸರ್ಕಾರವೇ ಕೊಡುತ್ತೆ 50,000 ದವರೆಗೆ ಪ್ರೋತ್ಸಾಹಧನ.!

ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಚೆನ್ನಾಗಿ ಓದಿದ್ರೆ  ಸರ್ಕಾರವೇ ಕೊಡುತ್ತೆ 50,000 ದವರೆಗೆ ಪ್ರೋತ್ಸಾಹಧನ.!

ಬೆಂಗಳೂರು :  ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಪ್ರಥಮ ಪ್ರಯತ್ನದಲ್ಲೇ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ಶೈಕ್ಷಣಿಕ ಸಾಧನೆ ತೋರಿದಲ್ಲಿ, ಅವರನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರದ ವತಿಯಿಂದ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ.

ಈ ಯೋಜನೆಯಡಿ ವಿವಿಧ ಹಂತಗಳ ಶಿಕ್ಷಣವನ್ನು ಪ್ರಥಮ ಪ್ರಯತ್ನದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಅರ್ಹ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನಿಗದಿತ ಪ್ರಮಾಣದಲ್ಲಿ ಆರ್ಥಿಕ ಸಹಾಯವನ್ನು ಒದಗಿಸಲಾಗುತ್ತದೆ.ಇದರ ಮುಖ್ಯ ಉದ್ದೇಶ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಉನ್ನತ ಶಿಕ್ಷಣದತ್ತ ಉತ್ತೇಜನ ನೀಡುವುದು ಹಾಗೂ ಅವರ ಶೈಕ್ಷಣಿಕ ಪ್ರಗತಿಗೆ ಬೆಂಬಲ ನೀಡುವುದಾಗಿದೆ.ಈ ಯೋಜನೆ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಿ, ನಿರಂತರ ಶೈಕ್ಷಣಿಕ ಸಾಧನೆಗೆ ಪ್ರೇರಣೆಯಾಗಲಿದೆ.

ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1) ಎಸ್ ಎಸ್ ಎಲ್

ಶೇ. 60 ರಿಂದ  ಶೇ. 75%  : 7500/-

ಶೇ 75% ಕ್ಕಿಂತ ಮೇಲ್ಪಟ್ಟು : 15,000/-

2) ಪಿಯುಸಿ/ಡಿಪ್ಲೋಮೋ :  20,000/-

3) ಪದವಿ 25,000/-

4) ಸ್ನಾತಕೋತ್ತರ ಪದವಿ 30,000/-

5) ವೃತ್ತಿಪರ ಪದವಿ :  35,000/-

(ವೈದ್ಯಕೀಯ/ತಾಂತ್ರಿಕ/ಕೃಷಿ/ಪಶು ವೈದ್ಯಕೀಯ)

6) ವಿಶ್ವವಿದ್ಯಾಲಯ ಮಟ್ಟದಲ್ಲಿ PG Courseಗಳ ವಿವಿಧ ವಿಷಯಗಳಲ್ಲಿ 1 ರಿಂದ 5 ಬ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ 50,000/

ಆಸಕ್ತ ವಿದ್ಯಾರ್ಥಿಗಳು https://swd.karnataka.gov.in/  ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular