HomeLatest Newsಪಿಜಿ ಎಂದು ಬಾರ್ ಓಪನ್: ಮಾಲೀಕನನ್ನು ಪೊರಕೆ ಹಿಡಿದು ಓಡಿಸಿದ ಮಹಿಳೆಯರು!

ಪಿಜಿ ಎಂದು ಬಾರ್ ಓಪನ್: ಮಾಲೀಕನನ್ನು ಪೊರಕೆ ಹಿಡಿದು ಓಡಿಸಿದ ಮಹಿಳೆಯರು!

ಪಿಜಿ ಎಂದು ಹೇಳಿ ಬೋರ್ಡ್ ಹಾಕಿಕೊಂಡು ಒಳಗೆ ಬಾರ್ ಓಪನ್ ಮಾಡಲಾಗಿತ್ತು. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಬಾರ್ ಓಪನ್ ಮಾಡಲು ಬಂದ ಮಾಲೀಕನನ್ನು ಮಹಿಳೆಯರು ಪೊರಕೆ ಹಿಡಿದು ಓಡಿಸಿದ ಘಟನೆ ಬೆಂಗಳೂರು ಹೊರವಲಯದಲ್ಲಿ ನಡೆದಿದೆ. ಇನ್ನೊಮ್ಮೆ ಈ ಕಡೆ ತಲೆ ಹಾಕಿದರೆ ಸರಿಯಾಗಿ ಬಾರಿಸುತ್ತೇವೆ ಎಂದು ಮಹಿಳೆಯರು ಎಚ್ಚರಿಕೆ ಕೊಟ್ಟಿದ್ದಾರೆ.

ಪೀಣ್ಯ ದಾಸರಹಳ್ಳಿ ವ್ಯಾಪ್ತಿಯ ದೊಡ್ಡಬಿದರಕಲ್ಲು ವಾರ್ಡ್‌ನಲ್ಲಿ ಈ ಘಟನೆ ನಡೆದಿದೆ. ವಿಶ್ವನಾಥ್ ಎಂಬ ಕಟ್ಟಡದ ಮಾಲೀಕ ಪಿಜಿ ಎಂದು ಬೋರ್ಡ್ ಹಾಕಿಕೊಂಡು ಒಳಗೆ ಬಾರ್ ಓಪನ್ ಮಾಡಿದ್ದ. ಇದನ್ನು ಪತ್ತೆ ಹಚ್ಚಿದ್ದ ಸ್ಥಳೀಯರು ಬಾರ್ ಮಾಲೀಕನಿಗಾಗಿ ಕಾದು ಕುಳಿತಿದ್ದರು.

ದೊಡ್ಡಬಿದರಕಲ್ಲು ವಾರ್ಡ್‌ನ ತಿಪ್ಪೇನಹಳ್ಳಿ ಮುಖ್ಯರಸ್ತೆಯ ಕಾಟಮರಾಯನಗುಡಿ ಸಮೀಪದ ಬೃಂದಾವನ ನಗರ ಫೇಸ್-2 ಜನವಸತಿ ಪ್ರದೇಶದಲ್ಲಿ ಬಾರ್ ಮಾಡಲಾಗಿತ್ತು. ಗುರುವಾರ ಬಾರ್ ಓಪನ್ ಮಾಡಲು ಬಂದ ಮಾಲೀಕನಿಗೆ ಮಹಿಳೆಯರು ಚಳಿ ಬಿಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೊರಕೆ ಹಿಡಿದು ಕೂತಿದ್ದ ಮಹಿಳೆಯರು: ಜನವಸತಿ ಪ್ರದೇಶದಲ್ಲಿ ಬಾರ್ ಆರಂಭಿಸಿರುವ ಕುರಿತು ಹಲವು ಬಾರಿ ಪ್ರತಿಭಟನೆ ಮಾಡಲಾಗಿತ್ತು. ಆದರೆ ಬಾರ್ ಮುಚ್ಚಿರಲಿಲ್ಲ. ಆದ್ದರಿಂದ ಮಹಿಳೆಯರು ಮಾಲೀಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಗುರುವಾರ ಶಾಮಿಯಾನ ಹಾಕಿಕೊಂಡು, ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಫೋಟೋ ಹಿಡಿದುಕೊಂಡು ಮಹಿಳೆಯರು ಪೊರಕೆ ಹಿಡಿದು ಕಾದು ಕುಳಿತಿದ್ದರು. ಬಾರ್ ಮಾಲೀಕ ಬರುತ್ತಿದ್ದಂತೆಯೇ ಮಹಿಳೆಯರು ಆತನನ್ನು ತರಾಟೆಗೆ ತೆಗೆದುಕೊಂಡರು. ಸ್ಥಳದಲ್ಲಿ ಪರಿಸ್ಥಿತಿ ಬಿಗಡಾಯಿಸಿತು. ಪೊಲೀಸರು ಬಂದರು.

ಸ್ಥಳೀಯ ಮಹಿಳೆ ಮಂಜುಳಾ ಮಾತನಾಡಿ, “ಪಿಜಿ ಮಾಡುತ್ತೇವೆ ಎಂದು ಸುಳ್ಳು ಹೇಳಿ ಬಾರ್ ಓಪನ್ ಮಾಡಿದ್ದಾರೆ. ಈಗ ಪೊರಕೆ ತೋರಿಸಿ ಓಡಿಸಿದ್ದೇವೆ. ಬಾರ್ ಶಾಶ್ವತವಾಗಿ ಮುಚ್ಚುವ ತನಕ ಪ್ರತಿಭಟನೆ ಮಾಡುತ್ತೇವೆ” ಎಂದು ಹೇಳಿದ್ದಾರೆ.

ಬಾರ್ ಓಪನ್ ಆಗ ಬಳಿಕ ಸ್ಥಳೀಯ ಹೆಣ್ಣು ಮಕ್ಕಳು ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿದೆ. ಈ ಕುರಿತು ಕಟ್ಟಡದ ಮಾಲೀಕರಿಗೆ ಹೇಳಿದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಲಂಚ ಪಡೆದುಕೊಂಡು ಜನವಸತಿ ಪ್ರದೇಶದಲ್ಲಿ ಬಾರ್ ಓಪನ್ ಮಾಡಲು ಅಧಿಕಾರಿಗಳು ಒಪ್ಪಿಗೆ ಕೊಟ್ಟಿದ್ದಾರೆ ಎಂದು ಮಹಿಳೆಯರು ದೂರಿದರು.

ತಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿದ್ದಾರೆ, ನಿಮ್ಮ ಮನೆ ಪಕ್ಕ ಬಾರ್ ಇದ್ದರೆ ಪರಿಸ್ಥಿತಿ ಹೇಗಿರುತ್ತದೆ? ಎಂದು ತಿಳಿಯುತ್ತದೆ ಎಂದು ಅಧಿಕಾರಿಗಳು, ಬಾರ್ ಮಾಲೀಕರು ವಿರುದ್ಧ ಮಹಿಳೆಯರು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯರ ತೀವ್ರ ವಿರೋಧ, ಪೊರಕೆ ಕಂಡು ಬಾರ್ ಮಾಲೀಕ ಸ್ಥಳದಿಂದ ಓಡಿ ಹೋಗಿದ್ದಾನೆ. ಆದರೆ ಈ ಸ್ಥಳದಲ್ಲಿ ಮತ್ತೆ ಬಾರ್ ಓಪನ್ ಮಾಡಲು ಬಿಡುವುದಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular