HomeLatest NewsBIG NEWS : ರಾಜ್ಯದ ಎಲ್ಲಾ ಶಾಲೆ- ಕಾಲೇಜುಗಳಲ್ಲಿ 'ರಸ್ತೆ ಸುರಕ್ಷತಾ ಮಾಸಾಚರಣೆ' ಕಡ್ಡಾಯ :...

BIG NEWS : ರಾಜ್ಯದ ಎಲ್ಲಾ ಶಾಲೆ- ಕಾಲೇಜುಗಳಲ್ಲಿ ‘ರಸ್ತೆ ಸುರಕ್ಷತಾ ಮಾಸಾಚರಣೆ’ ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ

ಬೆಂಗಳೂರು :  ರಾಜ್ಯದ ಎಲ್ಲಾ ಶಾಲೆ- ಕಾಲೇಜುಗಳಲ್ಲಿ ‘ರಸ್ತೆ ಸುರಕ್ಷತಾ ಮಾಸಾಚರಣೆ’ ನಡೆಸುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಈ ಮಾಸಾಚರಣೆಯನ್ನು ಫಲಪ್ರದವಾಗಿ “ಆಚರಿಸುವಂತೆ, ಜಾಗೃತಿಯ ಚಟುವಟಿಕೆಗಳನ್ನು ಯೋಜಿತವಾಗಿ ಕೈಗೊಳ್ಳುವಂತೆ ಮತ್ತು ವಿದ್ಯಾರ್ಥಿ-ಶಿಕ್ಷಕರು ಸಕ್ರಿಯವಾಗಿ ಭಾಗವಹಿಸುವಂತೆ ಈ ಸುತ್ತೋಲೆ ಮೂಲಕ ಇಲಾಖೆಯು ನಿರ್ದೇಶನಗಳನ್ನು ಜಾರಿಗೊಳಿಸಿದೆ.

ವಿಷಯಕ್ಕೆ ಸಂಬಂಧಿಸಿದಂತೆ, ರಾಜ್ಯದಲ್ಲಿ ರಸ್ತೆ ಸುರಕ್ಷತೆಯು ಜನಜೀವನದ ಅನಿವಾರ್ಯ ಅಂಶವಾಗಿದ್ದು, ಅದರ ಕುರಿತು ಸಮಗ್ರ ಜಾಗೃತಿ ಮೂಡಿಸುವುದು ಸರಕಾರದ ಪ್ರಮುಖ ಆದ್ಯತೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ರಸ್ತೆ ಅಪಘಾತಗಳ ಪ್ರಮಾಣದಲ್ಲಿ ಕಂಡುಬರುವ ಏರಿಕೆ, ಸಾರ್ವಜನಿಕರಲ್ಲಿ ವಿಶೇಷವಾಗಿ ಮಕ್ಕಳಲ್ಲಿ ಸುರಕ್ಷಿತ ಸಂಚಾರದ ಅಭ್ಯಾಸಗಳನ್ನು ಬೆಳೆಸುವ ಅಗತ್ಯವನ್ನು ಒತ್ತಿ ಹೇಳುತ್ತದೆ. ವಿದ್ಯಾರ್ಥಿಗಳು ನಾಳೆಯ ಜವಾಬ್ದಾರಿಯುತ ನಾಗರಿಕರಾಗಿರುವುದರಿಂದ, ಅವರಿಗೆ ಬಾಲದಲ್ಲೇ ರಸ್ತೆ ಸುರಕ್ಷತಾ ನಿಯಮಗಳು, ಜವಾಬ್ದಾರಿಯುತ ನಡೆ-ನುಡಿ ಮತ್ತು ಎಚ್ಚರಿಕೆಯಿಂದ ಸಂಚಾರ ಮಾಡುವ ವಿಧಾನಗಳನ್ನು ತಿಳಿಸುವುದು ಅತ್ಯಂತ ಮಹತ್ವದ್ದಾಗಿದೆ.

ಶಿಕ್ಷಣ ಇಲಾಖೆಯು ಶಾಲಾ ಮಕ್ಕಳಲ್ಲಿ ರಸ್ತೆ ಸುರಕ್ಷತಾ ಸಂಸ್ಕೃತಿಯನ್ನು ಬೆಳೆಸಲು, ಪ್ರಾಯೋಗಿಕ ಅಧಯನದ ಮೂಲಕ ನಿಯಮಪಾಲನೆಯ ಮಹತ್ವವನ್ನು ಮನವರಿಕೆ ಮಾಡಲು ಮತ್ತು ಸಮಗ್ರ ಸಮಾಜದಲ್ಲಿ ರಸ್ತೆ ಶಿಸ್ತು ಹೆಚ್ಚಿಸಲು ಈ ಅಭಿಯಾನವನ್ನು ಬಲವಾಗಿ ಬೆಂಬಲಿಸುತ್ತದೆ. ಉಲ್ಲೇಖ[1]ರ ದಿನಾಂಕ:06.12.20250 ಸಭೆಯಲ್ಲಿ ಚರ್ಚಿಸಿ ಸಮಿತಿಯು ಸೂಚಿಸಿದ ಅಂಶಗಳನ್ವಯ ರಾಜ್ಯದ ಎಲ್ಲಾ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಜನವರಿ 1 ರಿಂದ ಜನವರಿ 31, 2026 ರವರೆಗೆ ಒಂದುತಿಂಗಳ ಕಾಲ “ರಸ್ತೆ ಸುರಕ್ಷತಾ ಮಾಸಾಚರಣೆ” ಯನ್ನು ಹಮ್ಮಿಕೊಳಲು ತೀರ್ಮಾನಿಸಲಾಗಿದೆ. ಈ ಮಾಸಾಚರಣೆಯಲ್ಲಿನ ಚಟುವಟಿಕೆಗಳನ್ನು ವಿದ್ಯಾರ್ಥಿಗಳ ದಿನನಿತದ ಬೋಧನಾ ಪ್ರಕ್ರಿಯೆಗೆ ಯಾವುದೇ ತೊಂದರೆಯಾಗದಂತೆ, ಸರಳವಾಗಿ ನಡೆಸಲು ಸೂಚಿಸಲಾಗಿದೆ. ಯಶಸ್ವಿ ಅನುಷ್ಠಾನಕಾಗಿ ಪ್ರತಿದಿನದ ಚಟುವಟಿಕೆ ಮತ್ತು ಅನುಷ್ಠಾನ ಕಾರ್ಯತಂತ್ರಗಳನ್ನು ಸ್ಪಷ್ಟಪಡಿಸಲಾಗಿದೆ. ಸಂಸ್ಥೆಯ ಮುಖ್ಯಸ್ಥರು, ಶಿಕ್ಷಕರು ಮತ್ತು ಸಿಬ್ಬಂದಿವರ್ಗದವರು ಈ ಚಟುವೆಟಿಕೆಗಳನ್ನು ಜವಾಬ್ದಾರಿಯತವಾಗಿ ಮತ್ತು ಕಡ್ಡಾಯವಾಗಿ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸಂದರ್ಭದಲ್ಲಿ, ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಈ ಮಾಸಾಚರಣೆಯನ್ನು ಫಲಪ್ರದವಾಗಿ “ಆಚರಿಸುವಂತೆ, ಜಾಗೃತಿಯ ಚಟುವಟಿಕೆಗಳನ್ನು ಯೋಜಿತವಾಗಿ ಕೈಗೊಳ್ಳುವಂತೆ ಮತ್ತು ವಿದ್ಯಾರ್ಥಿ-ಶಿಕ್ಷಕರು ಸಕ್ರಿಯವಾಗಿ ಭಾಗವಹಿಸುವಂತೆ ಈ ಸುತ್ತೋಲೆ ಮೂಲಕ ಇಲಾಖೆಯು ನಿರ್ದೇಶನಗಳನ್ನು ಜಾರಿಗೊಳಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular