ಬೆಂಗಳೂರು : ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸಿದ 501 ಚಾಲಕರ ವಿರುದ್ಧ ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿದೆ.
ಹೊಸ ವರ್ಷದ ಮುನ್ನಾ ದಿನ ಬುಧವಾರ ಡ್ರಿಂಕ್ & ಡ್ರೈವ್ ಮಾಡಿದ 501 ಚಾಲಕರ ವಿರುದ್ಧ ಕೇಸ್ ದಾಖಲಾಗಿದೆ. ಪಾನಮತ್ತ ಚಾಲಕರ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು 166 ಕಡೆ ವಾಹನಗಳನ್ನ ತಪಾಸಣೆ ನಡೆಸಿದ್ದಾರೆ . ಮದ್ಯ ಸೇವಿಸಿ ಗಾಡಿ ಚಲಾಯಿಸಿದ 501 ಚಾಲಕರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ
1 ಜನವರಿ 2026 ತಪಾಸಣೆ ನಡೆಸಿದ ವಾಹನಗಳು: 28,529 ದಾಖಲಾದ ಪ್ರಕರಣಗಳು: 501ಪ್ರತಿ ಕುಡಿತ ಮತ್ತು ಚಾಲನೆ ತಪಾಸಣೆಯ ಹಿಂದೆ ಒಂದು ಸರಳ ಉದ್ದೇಶವಿದೆ—ಅದು ನೀವು ಸುರಕ್ಷಿತವಾಗಿ ಮನೆಗೆ ತಲುಪಬೇಕೆಂಬುದು. ಬೆಂಗಳೂರಿನ ರಸ್ತೆಗಳನ್ನು ಸುರಕ್ಷಿತವಾಗಿರಿಸಲು ಈ ವಿಶೇಷ ಕಾರ್ಯಾಚರಣೆ ಮುಂದುವರಿಯಲಿದೆ. ನೆನಪಿಡಿ, ನೀವು ಮದ್ಯಪಾನ ಮಾಡಿದರೆ, ವಾಹನ ಚಾಲನೆ ಮಾಡಬೇಡಿ ಎಂದು ಸಂಚಾರಿ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.

