ಹಾಸನ: ಹೊಸ ವರ್ಷದ ಮೊದಲ ದಿನವೇ ಭೀಕರ ಅಪಘಾತ ಸಂಭವಿಸಿದೆ. ವಾಹನದಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಚಿಕ್ಕಾರಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಅಪಘಾತ ಸಂಭವಿಸಿದೆ. ಬಾಣಾವರ ಸಮೀಪದ ಚಿಕ್ಕಾರಹಳ್ಳಿ ಗೋಶಾಲೆಯ ಬಳಿ ಬೊಲೆರೋ ಪಿಕಪ್ ವಾಹನದ ಟೈಯರ್ ಬ್ಲಾಸ್ಟ್ ಆಗಿದೆ. ಪಿಕಪ್ ವಾಹನ ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಡಿಕೆ ಕೊಯ್ಲು ಮಾಡಿ ಸಾಗಿಸುತ್ತಿದ್ದ ಬೊಲೆರೋ ವಾಹನ ಪಲ್ಟಿಯಾಗಿದೆ. ಶಬ್ಬೀರ್(55), ತಿಮ್ಮಣ್ಣ(53), ಸಂಜಯ್(45) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮೃತರು ಕಡೂರು ತಾಲೂಕಿನ ತಂಗ್ಲಿ ಗ್ರಾಮದ ನಿವಾಸಿಗಳಾಗಿದ್ದಾರೆ. ಹಾಸನದ ನೌಶಾದ್ ಎಂಬುವರಿಗೆ ಗಂಭೀರ ಗಾಯಗಳಾಗಿವೆ. ಅಪಘಾತದಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಡೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಣಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

