HomeLatest NewsSHOCKING : 'ಮುಂಬೈ'ನಲ್ಲಿ ಪಾದಚಾರಿಗಳ ಮೇಲೆ 'BEST' ಬಸ್ ಹರಿದು ನಾಲ್ವರು ಸಾವು : ಭಯಾನಕ...

SHOCKING : ‘ಮುಂಬೈ’ನಲ್ಲಿ ಪಾದಚಾರಿಗಳ ಮೇಲೆ ‘BEST’ ಬಸ್ ಹರಿದು ನಾಲ್ವರು ಸಾವು : ಭಯಾನಕ ವೀಡಿಯೋ ವೈರಲ್ |WATCH VIDEO

ಮುಂಬೈ :   ಮುಂಬೈ ನಲ್ಲಿ ಪಾದಚಾರಿಗಳ ಮೇಲೆ ‘ಬೆಸ್ಟ್’ ಬಸ್ ಹರಿದು ಘೋರ ದುರಂತ ಸಂಭವಿಸಿದ್ದು.  ನಾಲ್ವರು ಸಾವ‍ನ್ನಪ್ಪಿದ್ದಾರೆ. ರಸ್ತೆಯಲ್ಲಿ ನಿಂತಿದ್ದ ಪಾದಚಾರಿಗಳ ಬಳಿ ಬಸ್ ನುಗ್ಗಿದೆ. ಪರಿಣಾಮ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಬೆಸ್ಟ್ ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಬಿಎಂಸಿ ಹೇಳಿಕೆಯ ಪ್ರಕಾರ ಸೋಮವಾರ ರಾತ್ರಿ10:05 ರ ಸುಮಾರಿಗೆ ಈಘಟನೆ ನಡೆದಿದೆ.

ಮುಂಬೈ ಅಗ್ನಿಶಾಮಕ ದಳ, ಬೆಸ್ಟ್ ಸಿಬ್ಬಂದಿ ಜೊತೆಗೆ ಆಂಬ್ಯುಲೆನ್ಸ್ಗಳನ್ನು ನಿಯೋಜಿಸಲಾಗಿತ್ತು. ಮುಂಬೈ ಪೊಲೀಸರ ಪ್ರಕಾರ, ಬೆಸ್ಟ್ ಬಸ್ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಯುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಘಟನೆ ಭಾಂಡಪ್ ಉಪನಗರದ ಜನನಿಬಿಡ ಸ್ಟೇಷನ್ ರಸ್ತೆಯಲ್ಲಿ ನಡೆದಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ನಂತರ ಆ ಪ್ರದೇಶದಲ್ಲಿ ಅವ್ಯವಸ್ಥೆ ಮತ್ತು ಭೀತಿ ಹರಡಿತು ಮತ್ತು ಸೈಟ್ನಿಂದ ಹಲವಾರು ವೀಡಿಯೊಗಳನ್ನು ಈಗ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಬೃಹನ್ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ (BEST) ಮುಂಬೈನ ನಾಗರಿಕ ಸಾರಿಗೆ ಸೇವೆಯಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular