ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಾರಿಗೆಗಳಾದ ವೋಲ್ವೋ/ಇ.ವಿ.ಪವರ್ ಪ್ಲಸ್ ಮತ್ತು ನಾನ್ ಎಸಿ ಸ್ಪೀಪರ್ ಬಸ್ ಗಳ ಟಿಕೆಟ್ ದರಗಳಲ್ಲಿ 2026 ಜನವರಿ 5 ರಿಂದ ಬಾರಿ ರಿಯಾಯಿತಿ ದರವನ್ನು ನೀಡಲಾಗಿದೆ.
ದಾವಣಗೆರೆಯಿಂದ ಬೆಂಗಳೂರು ವೋಲ್ವೋ ಬಸ್ ನಲ್ಲಿ ಪ್ರಸ್ತುತ ದರ ಹಗಲು 689 ರೂ. ರಾತ್ರಿ 748 ರೂ.ನಿಗದಿಪಡಿಸಿದ್ದು, ಪ್ರಸ್ತುತ ರಿಯಾಯಿತಿ ಹಗಲು ಮತ್ತು ರಾತ್ರಿ ದರ 650 ರೂ.ನಿಗದಿಪಡಿಸಿದೆ, ಇ.ವಿ.ಪವರ್ ಪ್ಲಸ್ ಎ/ಸಿ ಪ್ರಸ್ತುತ ದರ ಹಗಲು ವೇಳೆಯಲ್ಲಿ 663 ರೂ., ರಾತ್ರಿ 720 ರೂ. ಇದ್ದು, ಪ್ರಸ್ತುತ ರಿಯಾಯಿತಿ ದರ 600 ರೂ. ನಿಗದಿಪಡಿಸಿದೆ.
ವೋಲ್ವೋ 2.0 ಪ್ರಸ್ತುತ ದರ 721 ರೂ. ಇದ್ದು ರಿಯಾಯಿತಿ ದರ 680 ರೂ. ನಿಗದಿಪಡಿಸಿದೆ. ದಾವಣಗೆರೆ-ಕಲಬುರಗಿ ನಾನ್ ಎ/ಸಿ ಸ್ಲೀಪರ್ ಪ್ರಸ್ತುತ ದರ 1091 ರೂ. ಇದ್ದು ರಿಯಾಯಿತಿ ದರ 1005 ರೂ. ನಿಗದಿಪಡಿಸಿದೆ. ದಾವಣಗೆರೆ -ಹೈದರಾಬಾದ್ ನಾನ್ ಎ/ಸಿ ಸ್ಲೀಪರ್ ಪ್ರಸ್ತುತ ದರ 1405 ರೂ. ಇದ್ದು ರಿಯಾಯಿತಿ ದರ 1265 ರೂ. ನಿಗದಿಪಡಿಸಿದೆ. ನಾಲ್ಕು ಅಥವಾ ಹೆಚ್ಚಿನ ಪ್ರಯಾಣಿಕರು ಮುಂಗಡ ಗ್ರೂಪ್ ಬುಕ್ಕಿಂಗ್ ಮಾಡಿದಲ್ಲಿ ಶೇ. 5 ರಷ್ಟು ರಿಯಾಯಿತಿ ಹಾಗೂ Onward & Return ಪ್ರಯಾಣದ ಬುಕ್ಕಿಂಗ್ ಒಟ್ಟಿಗೆ ಮಾಡಿದಲ್ಲಿ Return ಪ್ರಯಾಣ ದರಕ್ಕೆ ಶೇ. 10 ರಷ್ಟು ರಿಯಾಯಿತಿ ನೀಡಲಾಗಿದೆ. ಪ್ರಯಾಣಿಕರು ರಿಯಾಯಿತಿ ದರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ದಾವಣಗೆರೆ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

