ಬೆಂಗಳೂರು: ಬೆಂಗಳೂರಿನಲ್ಲಿ ಕಾಲೇಜು ಹಿಂಭಾಗ ನವಜಾತ ಶಿಶು ಪತ್ತೆಯಾಗಿದೆ. ಮಾಗಡಿ ರಸ್ತೆಯ ಎಂಎಸ್ಸಿ ಕಾಲೇಜು ಹಿಂಭಾಗ ನವಜಾತ ಶಿಶು ಕಂಡುಬಂದಿದೆ.
ನಿನ್ನೆ ಜನಿಸಿರುವ ಶಿಶುವನ್ನು ದುಷ್ಕರ್ಮಿಗಳು ಎಸೆದು ಹೋಗಿದ್ದಾರೆ. ಮಾಹಿತಿ ತಿಳಿದ ಮಾಗಡಿ ರಸ್ತೆ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ನವಜಾತ ಶಿಶು ರಕ್ಷಣೆ ಮಾಡಿದ್ದಾರೆ. ವಾಣಿ ವಿಲಾಸ ಆಸ್ಪತ್ರೆಗೆ ಶಿಶುವನ್ನು ದಾಖಲಿಸಲಾಗಿದೆ. ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

