HomeLatest Newsಶತಕ ವೀರನಿಗೆ ಶೂನ್ಯದ ಏಟು: ಉತ್ತರಾಖಂಡ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಡಕ್‌ ಔಟ್, ಅಭಿಮಾನಿಗಳು ಫುಲ್...

ಶತಕ ವೀರನಿಗೆ ಶೂನ್ಯದ ಏಟು: ಉತ್ತರಾಖಂಡ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಡಕ್‌ ಔಟ್, ಅಭಿಮಾನಿಗಳು ಫುಲ್ ಅಪ್‌ಸೆಟ್!

ಭಾರತ ತಂಡದ ಅನುಭವಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಕ್ರಿಕೆಟ್‌ನ ಬಿಡುವಿನ ನಡುವೆ ದೇಶೀಯ ಕ್ರಿಕೆಟ್‌ಗೆ ಮರಳಿದ್ದು, ಮಿಶ್ರ ಪ್ರತಿಕ್ರಿಯೆ ಎದುರಿಸುತ್ತಿದ್ದಾರೆ. ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಶುಕ್ರವಾರ ಉತ್ತರಾಖಂಡ್ ವಿರುದ್ಧ ನಡೆದ ವಿಜಯ್ ಹಜಾರೆ ಟ್ರೋಫಿಯ ಎರಡನೇ ಸುತ್ತಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಮೊದಲ ಎಸೆತದಲ್ಲೇ ಔಟಾಗಿ ನಿರಾಸೆ ಮೂಡಿಸಿದ್ದಾರೆ.

ಶತಕದ ಸಂಭ್ರಮದ ಬೆನ್ನಲ್ಲೇ ಆಘಾತ

ಕಳೆದ ಪಂದ್ಯದಲ್ಲಿ ಸಿಕ್ಕಿಂ ವಿರುದ್ಧ ಕೇವಲ 94 ಎಸೆತಗಳಲ್ಲಿ 155 ರನ್ ಚಚ್ಚಿ ಅಬ್ಬರಿಸಿದ್ದ ರೋಹಿತ್, ಡೇವಿಡ್ ವಾರ್ನರ್ ಅವರ ದಾಖಲೆಯನ್ನು ಸರಿದೂಗಿಸಿದ್ದರು. ಆದರೆ ಉತ್ತರಾಖಂಡ್ ವಿರುದ್ಧದ ಪಂದ್ಯದಲ್ಲಿ ಅದೇ ಲಯ ಮುಂದುವರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಮೊದಲ ಓವರ್‌ನಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಅವರು ಪುಲ್ ಶಾಟ್ ಆಡುವ ಭರದಲ್ಲಿ ಫೀಲ್ಡರ್‌ಗೆ ಕ್ಯಾಚ್ ನೀಡಿ ಶೂನ್ಯಕ್ಕೆ (Golden Duck) ವಿಕೆಟ್ ಒಪ್ಪಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಟೇಡಿಯಂನಿಂದ ಹೊರನಡೆದ ಅಭಿಮಾನಿಗಳು

ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ನೋಡಲೆಂದೇ ಜೈಪುರದ ಕ್ರೀಡಾಂಗಣಕ್ಕೆ ಅಭಿಮಾನಿಗಳು ಮುಂಜಾನೆಯೇ ಲಗ್ಗೆ ಇಟ್ಟಿದ್ದರು. ಉತ್ತರಾಖಂಡ್ ಟಾಸ್ ಗೆದ್ದು ಬೌಲಿಂಗ್ ಆರಿಸಿಕೊಂಡಾಗ ಅಭಿಮಾನಿಗಳಲ್ಲಿ ಸಂತಸ ಮನೆಮಾಡಿತ್ತು. ಆದರೆ ರೋಹಿತ್ ಔಟಾದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಟೇಡಿಯಂನಲ್ಲಿ ನೀರವ ಮೌನ ಆವರಿಸಿತು. ನೆಚ್ಚಿನ ಆಟಗಾರ ಕೇವಲ ಒಂದು ಎಸೆತ ಎದುರಿಸಿ ಮರಳಿದ್ದನ್ನು ಸಹಿಸದ ಅನೇಕ ಅಭಿಮಾನಿಗಳು ಕ್ರೀಡಾಂಗಣದಿಂದ ಹೊರನಡೆದ ದೃಶ್ಯಗಳು ಕಂಡುಬಂದವು.

ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್

ರೋಹಿತ್ ಅವರ ಈ ಹಠಾತ್ ವೈಫಲ್ಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲಿಗರಿಗೆ ಆಹಾರವಾಗಿದೆ. “ಯುವ ವಿದ್ಯಾರ್ಥಿಗಳಿಗೆ ಅವಕಾಶ ನೀಡಲು ರೋಹಿತ್ ಬೇಗ ಔಟಾದರು” ಎಂದು ಕೆಲವರು ವ್ಯಂಗ್ಯವಾಡಿದ್ದರೆ, “ಶತಕ ಬಾರಿಸಿದ ಮೇಲೆ ರೆಸ್ಟ್ ತೆಗೆದುಕೊಳ್ಳುವುದು ರೋಹಿತ್ ಹವ್ಯಾಸ” ಎಂದು ಇನ್ನು ಕೆಲವರು ಕಾಲೆಳೆದಿದ್ದಾರೆ. ಮುಂಬರುವ ನ್ಯೂಜಿಲೆಂಡ್ ಸರಣಿಗೂ ಮುನ್ನ ಇದು ರೋಹಿತ್ ಅವರ ಕೊನೆಯ ದೇಶೀಯ ಪಂದ್ಯವಾಗಿದ್ದು, ಹೀನಾಯ ಪ್ರದರ್ಶನದೊಂದಿಗೆ ಅವರು ಮೈದಾನ ತೊರೆದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular