ಕೋಲಾರ: ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಕೋಲಾರ ತಾಲೂಕಿನ ವೇಮಗಲ್ ಹೋಬಳಿಯ ಕುರುಗಲ್ ಗೇಟ್ ಸಮೀಪ ಘಟನೆ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಯುವಕನನ್ನು ಕೊಲೆ ಮಾಡಲಾಗಿದೆ. ಒಡಿಶಾ ಮೂಲದ ಸಂದೀಪ್ ಸಿಂಗ್ ಕೊಲೆಯಾದ ಯುವಕ ಎಂದು ಹೇಳಲಾಗಿದೆ. ಬೆಂಗಳೂರು ಮೂಲದ ಮನೋಜ್ ಹಾಗೂ ಬಳ್ಳಾರಿ ಮೂಲದ ರಾಜಾರೆಡ್ಡಿ ಎಂಬುವರು ಕೃತ್ಯ ಎಸಗಿದ್ದಾರೆ.
ಒಟ್ಟಿಗೆ ಕುಳಿತು ಮದ್ಯ ಸೇವಿಸುತ್ತಿದ್ದಾಗ ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿದ್ದು, ಸಂದೀಪ್ ಸಿಂಗ್ ನನ್ನು ಮನೋಜ್ ಮತ್ತು ರಾಜಾ ರೆಡ್ಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಕೊಲೆ ಆರೋಪಿಗಳನ್ನು ವೇಮಗಲ್ ಠಾಣೆ ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.

