ಮೈಸೂರು: ಮೈಸೂರಿನ ಅರಮನೆ ಬಳಿ ಹೀಲಿಂ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಘಟನೆಗೆ ಸಂಬಂಧಿಸಿದಂತೆ ಮೈಸೂರು ನಗರ ಪೊಲೀಸರು ತನಿಖೆ ಚುರುಕುಗೊಳಿಸಿದಾರೆ.
ದುರಂತದಲ್ಲಿ ಓರ್ವ ಸಾವನ್ನಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದಾರೆ. ಉತ್ತರ ಪ್ರದೇಶ ಮೂಲದ ಸಲೀಂ ಮೃತ ವ್ಯಕ್ತಿ. ಒಂದು ವಾರದಿಂದ ಮೈಸೂರಿಗೆ ಬಂದು ಬಲೂನು ಮಾರುತ್ತಿದ್ದ. ಸೈಕಲ್ ನಲ್ಲಿ ಹೀಲಿಂ ಸಿಲಿಂಡರ್ ಇಟ್ಟುಕೊಂಡು ಬಲೂನು ಮಾರುತ್ತಿದ್ದ. ವೇಗವಾಗಿ ಸಿಲಿಂಡರ್ ಆನ್ ಆಂಡ್ ಆಫ್ ಮಾಡಿದ ಕಾರಣಕ್ಕೆ ಒತ್ತಡ ಉಂಟಾಗಿ ಸಿಲಿಂಡರ್ ಸ್ಫೋಟಗೊಂಡಿದೆ.
ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣ ಸಂಬಂಧ ಮೈಸೂರು ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

