HomeLatest NewsBIG NEWS: ದೇಶದಲ್ಲೀಗ ಒಂದು ಲಕ್ಷಕ್ಕೂ ಅಧಿಕ ಪೆಟ್ರೋಲ್ ಬಂಕ್: ಅತಿದೊಡ್ಡ ಇಂಧನ ಜಾಲದಲ್ಲಿ ವಿಶ್ವದಲ್ಲೇ...

BIG NEWS: ದೇಶದಲ್ಲೀಗ ಒಂದು ಲಕ್ಷಕ್ಕೂ ಅಧಿಕ ಪೆಟ್ರೋಲ್ ಬಂಕ್: ಅತಿದೊಡ್ಡ ಇಂಧನ ಜಾಲದಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನ

ನವದೆಹಲಿ: ದೇಶದಲ್ಲಿ ಪೆಟ್ರೋಲ್ ಬಂಕ್ ಗಳ ಸಂಖ್ಯೆ ಒಂದು ಲಕ್ಷ ದಾಟಿದೆ. ವಿಶ್ವದಲ್ಲೇ ಮೂರನೇ ಸ್ಥಾನ ಹೊಂದಿದೆ.

ದೇಶದಲ್ಲಿ ಸದ್ಯ 1,00,266 ಪೆಟ್ರೋಲ್ ಬಂಕ್ ಗಳಿವೆ. ಈ ಮೂಲಕ ಭಾರತ ವಿಶ್ವದಲ್ಲಿಯೇ ಮೂರನೇ ದೊಡ್ಡ ಇಂಧನ ಜಾಲ ಹೊಂದಿದ ದೇಶವಾಗಿದೆ.

ಅಮೆರಿಕ(1,96,643), ಚೀನಾ(1,15,228) ಮೊದಲ ಎರಡು ಸ್ಥಾನಗಳಲ್ಲಿವೆ. 2015 ರ ನಂತರ ವಾಹನ ಖರೀದಿ ಪ್ರಮಾಣ ನಿರಂತರ ಹೆಚ್ಚಳವಾಗುತ್ತಿದ್ದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ದೇಶ ವ್ಯಾಪಿ ಗ್ರಾಮೀಣ ಮತ್ತು ಹೆದ್ದಾರಿಗಳ ಬಳಿ ಪೆಟ್ರೋಲ್ ಬಂಕ್ ಗಳ ಸ್ಥಾಪನೆಗೆ ಮುಂದಾಗಿದ್ದು, ಸಂಖ್ಯೆಗಳ ಹೆಚ್ಚಳಕ್ಕೆ ಕಾರಣವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2015ರಲ್ಲಿ ದೇಶದಲ್ಲಿ 50,451 ಪೆಟ್ರೋಲ್ ಬಂಕ್ ಗಳು ಇದ್ದವು. ಪ್ರಸ್ತುತ ಶೇಕಡ 90ರಷ್ಟು ಪೆಟ್ರೋಲ್ ಬಂಕ್ ಗಳು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ನಿಯಂತ್ರಣದಲ್ಲಿ ಇವೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ 41,664 ಪೆಟ್ರೋಲ್ ಬಂಕ್ ಗಗಳನ್ನು ಹೊಂದಿದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ 24,605, ಹೆಚ್.ಪಿ.ಸಿ.ಎಲ್. 24,418 ಬಂಕ್ ಗಳನ್ನು ಹೊಂದಿದೆ. ಖಾಸಗಿ ವಲಯದ ಬಂಕ್ ಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ನಯಾರಾ ಎನರ್ಜಿ 6921, ರಿಲಯನ್ಸ್ ಇಂಡಸ್ಟ್ರೀಸ್ 2114, ಬಿಪಿ ಶೆಲ್ 346 ಬಂಕುಗಳನ್ನು ಹೊಂದಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular