HomeLatest NewsBe Alert : ಬೆಂಗಳೂರಿಗರೇ ಎಚ್ಚರ : 'ಇಯರ್ ಎಂಡ್' ಅಂತ ಕುಡಿದು ವಾಹನ ಚಲಾಯಿಸಿದ್ರೆ...

Be Alert : ಬೆಂಗಳೂರಿಗರೇ ಎಚ್ಚರ : ‘ಇಯರ್ ಎಂಡ್’ ಅಂತ ಕುಡಿದು ವಾಹನ ಚಲಾಯಿಸಿದ್ರೆ ಬೀಳುತ್ತೆ ಕೇಸ್.!

ಬೆಂಗಳೂರು : ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಈಗಾಗಲೇ ಸಕಲ ಸಿದ್ದತೆ ಆರಂಭವಾಗಿದೆ. ನೀವು ಪಾರ್ಟಿ ಮಾಡಲು, ಸೆಲೆಬ್ರೇಷನ್ ಮಾಡಲು ರೆಡಿ ಆಗ್ತಿದ್ದಂತೆ ಸಂಚಾರಿ ಪೊಲೀಸರು ಕೂಡ ಅಲರ್ಟ್ ಆಗಿದ್ದಾರೆ. ಒಂದು ವೇಳೆ ನೀವು ಕುಡಿದು ಗಾಡಿ ಚಲಾಯಿಸಿದ್ರೆ ಅಷ್ಟೇ ಕತೆ..ಪೊಲೀಸರು ನಿಮ್ಮ ಗಾಡಿಯನ್ನು ಸೀಜ್ ಮಾಡಿ ಕೇಸ್ ಹಾಕಲಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ.

ಡಿ.31ರ ರಾತ್ರಿ ಡ್ರಿಂಕ್ ಅಂಡ್ ಡ್ರೈವ್ ಪ್ರಕರಣಗಳನ್ನು ಪರಿಶೀಲಿಸಲು ಪೊಲೀಸರು ಬೆಂಗಳೂರಿನಲ್ಲಿ ಚೆಕ್ ಪೋಸ್ಟ್ ಗಳನ್ನು ಗುರುತಿಸಿದ್ದಾರೆ.ಬೆಂಗಳೂರು ನಗರದಾದ್ಯಂತ ಪೊಲೀಸರು ವಾಹನಗಳನ್ನು ತಪಾಸಣೆ ಮಾಡುತ್ತಿದ್ದು, ಕುಡಿದು ವಾಹನ ಚಲಾಯಿಸಿ ಪೊಲೀಸರಿಗೆ ಸಿಕ್ಕಿಬಿದ್ದರೆ ಗಾಡಿಯನ್ನು ಸೀಜ್ ಮಾಡಲಾಗುತ್ತದೆ, ನಂತರ ನೀವು ಕೋರ್ಟ್ ನಲ್ಲಿ ದಂಡ ಪಾವತಿ ಮಾಡಿ ವಾಹನ ಬಿಡಿಸಿಕೊಳ್ಳಬೇಕಾಗುತ್ತದೆ. ನಗರದಾದ್ಯಂತ ಟ್ರಾಫಿಕ್ ಪೊಲೀಸರು ಡ್ರಂಕ್ ಅಂಡ್ ಡ್ರೈವ್ ಟೆಸ್ಟ್ ಆರಂಭಿಸಿದ್ದಾರೆ.

ನೂತನ ವರ್ಷಾಚರಣೆ ವೇಳೆಯಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ವಿಶೇಷ ಕಾರ್ಯಚರಣೆಯನ್ನು ಹಮ್ಮಿಕೊಳ್ಳುತ್ತಿದ್ದು, ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular