HomeLatest Newsಪ್ರಯಾಣಿಕರೇ ಗಮನಿಸಿ: ತುರ್ತು ಕಾಮಗಾರಿ ಹಿನ್ನೆಲೆ ಕೆಲ ರೈಲು ಸಂಚಾರ ರದ್ದು

ಪ್ರಯಾಣಿಕರೇ ಗಮನಿಸಿ: ತುರ್ತು ಕಾಮಗಾರಿ ಹಿನ್ನೆಲೆ ಕೆಲ ರೈಲು ಸಂಚಾರ ರದ್ದು

ಬೆಂಗಳೂರು: ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಕೆಂಗೇರಿ ಮತ್ತು ಹೆಜ್ಜಾಲ ರೈಲ್ವೆ ನಿಲ್ದಾಣಗಳ ನಡುವೆ ಲೆವೆಲ್ ಕ್ರಾಸಿಂಗ್ ಸಂಖ್ಯೆ 16 ರಲ್ಲಿ ತಾತ್ಕಾಲಿಕ ಗರ್ಡರ್ ಅಳವಡಿಕೆ ಮತ್ತು ತೆರವು ಕಾಮಗಾರಿಗಾಗಿ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಇರುವುದರಿಂದ ಕೆಲವು ರೈಲುಗಳ ಸೇವೆ ರದ್ದು ಮಾಡಲಾಗಿದೆ. ಮತ್ತೆ ಕೆಲವು ರೈಲುಗಳನ್ನು ಭಾಗಶಃ ರದ್ದು ಮಾಡಲಾಗಿದೆ.

ಡಿಸೆಂಬರ್ 25 ಮತ್ತು ಜನವರಿ 8ರಂದು ಅರಸೀಕೆರೆ – ಮೈಸೂರು ದೈನಂದಿನ ಪ್ಯಾಸೆಂಜರ್(56265), ಮೈಸೂರು- ಎಸ್ಎಂವಿಟಿ ಬೆಂಗಳೂರು ಪ್ಯಾಸೆಂಜರ್ ಸ್ಪೆಷಲ್(06269), ಹಾಗೂ ಎಸ್ಎಂವಿಟಿ ಬೆಂಗಳೂರು- ಮೈಸೂರು ಪ್ಯಾಸೆಂಜರ್ ಸ್ಪೆಷಲ್(06270) ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ.

ಡಿಸೆಂಬರ್ 26 ಮತ್ತು ಜನವರಿ 9ರಂದು ಮೈಸೂರು- ಅರಸೀಕೆರೆ ಪ್ಯಾಸೆಂಜರ್(56266), ಕೆಎಸ್ಆರ್ ಬೆಂಗಳೂರು –ಚನ್ನಪಟ್ಟಣ(66535) ರೈಲು ಸಂಚಾರ ರದ್ದಾಗಲಿದೆ. ಡಿಸೆಂಬರ್ 25 ಮತ್ತು ಜನವರಿ 8ರಂದು ಹೊರಡುವ ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗುವುದು ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular