HomeLatest Newsಮುಂಬೈನಿಂದ ದುಬೈಗೆ ಸಮುದ್ರದಾಳದಲ್ಲಿ ಬುಲೆಟ್ ಟ್ರೈನ್: ವಿಮಾನಕ್ಕಿಂತ ವೇಗ, ಕಿಟಕಿ ಹೊರಗೆ ಕಾಣಲಿವೆ ತಿಮಿಂಗಿಲಗಳು!

ಮುಂಬೈನಿಂದ ದುಬೈಗೆ ಸಮುದ್ರದಾಳದಲ್ಲಿ ಬುಲೆಟ್ ಟ್ರೈನ್: ವಿಮಾನಕ್ಕಿಂತ ವೇಗ, ಕಿಟಕಿ ಹೊರಗೆ ಕಾಣಲಿವೆ ತಿಮಿಂಗಿಲಗಳು!

ಮುಂಬೈ: ಬೆಳಗ್ಗಿನ ಉಪಹಾರ ಮುಂಬೈನಲ್ಲಿ ಮುಗಿಸಿ, ಮಧ್ಯಾಹ್ನದ ಊಟಕ್ಕೆ ದುಬೈ ತಲುಪಬೇಕು ಎನ್ನುವುದು ಇದುವರೆಗೆ ಕೇವಲ ಕಲ್ಪನೆಯಾಗಿತ್ತು. ಆದರೆ ತಂತ್ರಜ್ಞಾನದ ಪವಾಡವೊಂದು ಈ ಕಲ್ಪನೆಯನ್ನು ನನಸಾಗಿಸಲು ಮುಂದಾಗಿದೆ. ಅರಬ್ಬಿ ಸಮುದ್ರದ ಆಳದಲ್ಲಿ ಮುಂಬೈ ಮತ್ತು ದುಬೈ ನಗರಗಳನ್ನು ಸಂಪರ್ಕಿಸುವ ಬೃಹತ್ ‘ಅಂಡರ್ ವಾಟರ್’ ರೈಲು ಯೋಜನೆಯೊಂದು ಸದ್ದಿಲ್ಲದೆ ಸಿದ್ಧವಾಗುತ್ತಿದೆ.

ಏರೋಪ್ಲೇನ್ ಫೇಲ್, ಈ ಟ್ರೈನ್ ಸೂಪರ್ ಫಾಸ್ಟ್ ಇದು ಸಾಮಾನ್ಯ ರೈಲಲ್ಲ, ಇದನ್ನು ‘ಡೀಪ್ ಬ್ಲೂ ಎಕ್ಸ್‌ಪ್ರೆಸ್’ ಎಂದು ಕರೆಯಲಾಗುತ್ತಿದೆ. ಈ ರೈಲು ಗಂಟೆಗೆ 600 ರಿಂದ 1000 ಕಿಲೋಮೀಟರ್ ವೇಗದಲ್ಲಿ ಚಲಿಸಲಿದ್ದು, ಇದು ಬಹುತೇಕ ವಿಮಾನಗಳ ವೇಗಕ್ಕಿಂತಲೂ ಹೆಚ್ಚು. ಪ್ರಸ್ತುತ ಮುಂಬೈನಿಂದ ದುಬೈಗೆ ವಿಮಾನದಲ್ಲಿ ಪ್ರಯಾಣಿಸಲು ಕನಿಷ್ಠ 3 ರಿಂದ 3.5 ಗಂಟೆ ಬೇಕು. ಆದರೆ ಈ ಸಮುದ್ರದಾಳದ ರೈಲು ಕೇವಲ 2 ಗಂಟೆಗಳಲ್ಲಿ ನಿಮ್ಮನ್ನು ದುಬೈ ತಲುಪಿಸಲಿದೆ.

ವಿಶ್ವದ ಅತಿದೊಡ್ಡ ಅಕ್ವೇರಿಯಂನಲ್ಲಿ ಪ್ರಯಾಣ ಈ ಯೋಜನೆಯ ಅತ್ಯಂತ ಆಕರ್ಷಕ ಭಾಗವೆಂದರೆ ಇದರ ವಿನ್ಯಾಸ. ಸಮುದ್ರ ಮಟ್ಟದಿಂದ ಸುಮಾರು 200 ಮೀಟರ್ ಆಳದಲ್ಲಿ ನಿರ್ಮಾಣವಾಗಲಿರುವ ಈ ಸುರಂಗ ಮಾರ್ಗಕ್ಕೆ ಪಾರದರ್ಶಕ ಗಾಜಿನ ಕಿಟಕಿಗಳನ್ನು ಅಳವಡಿಸಲಾಗುತ್ತದೆ. ನೀವು ರೈಲಿನಲ್ಲಿ ಕುಳಿತು ವೇಗವಾಗಿ ಚಲಿಸುವಾಗ ನಿಮ್ಮ ಪಕ್ಕದಲ್ಲೇ ಬೃಹತ್ ಶಾರ್ಕ್ ಮೀನುಗಳು, ತಿಮಿಂಗಿಲಗಳು ಮತ್ತು ಸಮುದ್ರದ ಅದ್ಭುತ ಜೀವರಾಶಿಗಳನ್ನು ಕಣ್ಣಾರೆ ವೀಕ್ಷಿಸಬಹುದು. ಇದು ಪ್ರಯಾಣಿಕರಿಗೆ ವಿಶ್ವದ ಅತಿ ಉದ್ದದ ಅಕ್ವೇರಿಯಂನಲ್ಲಿ ಸಂಚರಿಸಿದ ಅನುಭವ ನೀಡಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬರಿ ಪ್ರಯಾಣವಲ್ಲ, ವ್ಯಾಪಾರಕ್ಕೂ ಲಾಭ ಸುಮಾರು 50 ಬಿಲಿಯನ್ ಡಾಲರ್ ವೆಚ್ಚದ ಈ ಮಹತ್ವಾಕಾಂಕ್ಷಿ ಯೋಜನೆಯು ಕೇವಲ ಪ್ರಯಾಣಿಕರಿಗಾಗಿ ಮಾತ್ರವಲ್ಲ. ಈ ಸುರಂಗ ಮಾರ್ಗವು ಎರಡು ಪ್ರಮುಖ ಸಮಸ್ಯೆಗಳನ್ನು ನೀಗಿಸಲಿದೆ. ದುಬೈನಿಂದ ಭಾರತಕ್ಕೆ ಕಚ್ಚಾ ತೈಲವನ್ನು ಸಾಗಿಸಲು ಮತ್ತು ಪ್ರತಿಯಾಗಿ ಭಾರತದಿಂದ ದುಬೈಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ಈ ಸುರಂಗದಲ್ಲಿ ಪ್ರತ್ಯೇಕ ಪೈಪ್‌ಲೈನ್‌ಗಳನ್ನು ಅಳವಡಿಸಲಾಗುತ್ತದೆ.

50 ಸಾವಿರ ಉದ್ಯೋಗ ಸೃಷ್ಟಿ ಈ ಬೃಹತ್ ಮೂಲಸೌಕರ್ಯ ಯೋಜನೆಯಿಂದ ಸುಮಾರು 50,000 ಹೊಸ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಅಲ್ಲದೆ, ಭಾರತ ಮತ್ತು ಯುಎಇ ನಡುವಿನ ಪ್ರಯಾಣ ವೆಚ್ಚವು ಶೇಕಡಾ 60 ರಷ್ಟು ಕಡಿಮೆಯಾಗಲಿದೆ. 2030ರ ವೇಳೆಗೆ ಈ ಕನಸಿನ ಯೋಜನೆ ಪೂರ್ಣಗೊಳ್ಳುವ ಸಾಧ್ಯತೆಯಿದ್ದು, ಈಗಾಗಲೇ ಎರಡೂ ದೇಶಗಳ ನಡುವೆ ಈ ಕುರಿತು ಮಾತುಕತೆಗಳು ಆರಂಭವಾಗಿವೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular