ಉತ್ತರ ಪ್ರದೇಶ : ಉತ್ತರ ಪ್ರದೇಶದ ಜಾನ್‌ಪುರದಲ್ಲಿ ನಡೆದ ಆಘಾತಕಾರಿ ಘಟನೆ ಎಲ್ಲರನ್ನ ಬೆಚ್ಚಿ ಬೀಳಿಸಿದೆ. ವ್ಯಕ್ತಿಯೊಬ್ಬ ತನ್ನ ಹೆತ್ತವರನ್ನು ಹೊಡೆದು ಕೊಂದು ಗರಗಸದಿಂದ ಅವರ ದೇಹಗಳನ್ನು ತುಂಡರಿಸಿ, ಹತ್ತಿರದ ನದಿಗೆ ಎಸೆದು ವಿಲೇವಾರಿ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಉತ್ತರ ಪ್ರದೇಶ ಪೊಲೀಸರು 60 ರ ಹರೆಯದ ಕಾಣೆಯಾದ ದಂಪತಿಗಳ ಹುಡುಕಾಟವನ್ನು ತೀವ್ರಗೊಳಿಸಿದಾಗ ಈ ಘಟನೆ ಬೆಳಕಿಗೆ ಬಂದಿತು. ತಂದೆಯ ಮೊಂಡುತನ ಮತ್ತು ಮಗನ ಕೋಪವು ದುರಂತ ಘಟನೆಗೆ ಕಾರಣವಾಗಿದೆ. ಈ ಸಂಬಂಧ ಆರೋಪಿ ಅಂಬೇಶ್ ಎಂಬ ಎಂಜಿನಿಯರ್‌ನನ್ನು ಬಂಧಿಸಲಾಗಿದೆ. ಆತನ ತಂದೆ-ತಾಯಿ ಶ್ಯಾಮ್ ಬಹದ್ದೂರ್ (62) ಮತ್ತು ತಾಯಿ ಬಬಿತಾ (60) ಅವರನ್ನು ಕೊಲೆ ಮಾಡಿದ್ದಕ್ಕಾಗಿ ಈತನನ್ನು ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, ಅಂಬೇಶ್ ಪತ್ನಿ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರು. ಆದರೆ ತಂದೆ-ತಾಯಿಗೆ ಮಗ ಬೇರೆ ಜಾತಿ ಮದುವೆಯಾಗಿದ್ದು ಇಷ್ಟವಿರಲಿಲ್ಲ. ಮತ್ತು ಆತನ ಹೆತ್ತವರು ಮಗನ ಜೊತೆ ಆಗಾಗ್ಗೆ ಜಗಳವಾಡುತ್ತಿದ್ದರು, ಆದರೆ ಅವರು ಆಕೆಯನ್ನು ಕುಟುಂಬಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದರು. ಅಂಬೇಶ್ ಮತ್ತು ಆತನ ಪತ್ನಿ ಬೇರ್ಪಡಲು ನಿರ್ಧರಿಸಿದ ನಂತರ, ಜೀವನಾಂಶಕ್ಕಾಗಿ ಆತ ತನ್ನ ತಂದೆಯನ್ನು ಸಂಪರ್ಕಿಸಿದನು, ಆದರೆ ಅವರು ಅದನ್ನು ನಿರಾಕರಿಸಿದರು. ಈ ನಿರಾಕರಣೆ ಅವರ ಅಂತಿಮ ಜಗಳಕ್ಕೆ ಕಾರಣವಾಯಿತು, ಅಂತಿಮವಾಗಿ ಇಬ್ಬರೂ ಪೋಷಕರ ಸಾವಿಗೆ ಕಾರಣವಾಯಿತು ಎಂದು ವರದಿಗಳು ತಿಳಿಸಿದೆ.

