ನವದೆಹಲಿ: ರಿಸರ್ವೇಷನ್ ಚಾರ್ಟ್ ಸಮಯವನ್ನು ಪರಿಷ್ಕರಿಸುವ ಮೂಲಕ ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಮಂಡಳಿ ಸಿಹಿ ಸುದ್ದಿ ನೀಡಿದೆ.
ಪ್ರಯಾಣಿಕರು ಇನ್ನು ಮುಂದೆ ರೈಲು ಹೊರಡುವ 10 ಗಂಟೆ ಮೊದಲು ತಮ್ಮ ರಿಸರ್ವ್ ಆದ ಟಿಕೆಟ್ ಸ್ಥಿತಿಗತಿಯನ್ನು ತಿಳಿಯಬಹುದಾಗಿದೆ. ಹಾಲಿ ಇರುವ ವ್ಯವಸ್ಥೆಯಲ್ಲಿ ರಿಸರ್ವೇಷನ್ ಚಾರ್ಟ್ ಗಳನ್ನು 4 ಗಂಟೆ ಮುಂಚಿತವಾಗಿ ಸಿದ್ಧಪಡಿಸಲಾಗುತ್ತಿತ್ತು. ಇದರಿಂದ ಕೊನೆ ಕ್ಷಣದಲ್ಲಿ ಪ್ರಯಾಣಿಕರಿಗೆ ಅನಾನುಕೂಲತೆ ಮತ್ತು ಗೊಂದಲವಾಗುತ್ತಿತ್ತು.
ವೇಟಿಂಗ್ ಲಿಸ್ಟ್ ನಲ್ಲಿ ಇದ್ದವರು, ಆರ್.ಎ.ಸಿ. ಇದ್ದವರು ಕೊನೆ ಕ್ಷಣದವರೆಗೂ ಗೊಂದಲದಲ್ಲಿ ಇರುವಂತಾಗುತ್ತಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಭಾರತೀಯ ರೈಲ್ವೇ ಮಂಡಳಿ ರೈಲು ಹೊರಡುವ 10 ಗಂಟೆಯ ಮೊದಲೇ ಚಾರ್ಟ್ ಸಿದ್ಧಪಡಿಸಲಿದ್ದು, ರಿಸರ್ವೇಷನ್ ಟಿಕೆಟ್ ಸ್ಟೇಟಸ್ ತಿಳಿಯಬಹುದಾಗಿದೆ ಎನ್ನಲಾಗಿದೆ.

