ಬೆಂಗಳೂರು : 2025-26 ನೇ ಸಾಲಿನಲ್ಲಿ ಇಲಾಖಾ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ನವಂಬರ್-2025 ರ ಮಾಹೆಯ ಗೌರವಧನ ಪಾವತಿಗಾಗಿ ಈಗಾಗಲೇ ಅನುದಾನ ಬಿಡುಗಡೆ ಮಾಡಲಾಗಿದೆ. ನವೆಂಬರ್-2025ರ ಮಾಹೆಯ ಗೌರವಧನ ಪಾವತಿಸಲು ಕೊರತೆ 2 -20250 01-12-2025 ໖໐໖ 08-12-20250 ಅವಧಿಗೆ ಗೌರವಧನ ಪಾವತಿಸಲು ಅಗತ್ಯ ಇರುವ ಅನುದಾನ ಬಿಡುಗಡೆ ಮಾಡುವಂತೆ ಪ್ರಾಂಶುಪಾಲರುಗಳಿಂದ ಅನುದಾನ ಬೇಡಿಕೆ ಸ್ವೀಕೃತವಾಗುತ್ತಿದ್ದು, ಅದರಂತೆ ಅನುದಾನ ಬಿಡುಗಡೆ ಮಾಡಲು ಈ ಆದೇಶ ಹೊರಡಿಸಲಾಗಿದೆ.
ಇಲಾಖಾ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ಗೌರವಧನ ಪಾವತಿಸಲುಲೆ ಶೀ 2202-03-103-2-01 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಉಪ ಲೆಕ್ಕ ಶೀರ್ಷಿಕೆ ‘324’ ಅತಿಥಿ ಉಪನ್ಯಾಸಕರ ಗೌರವಧನ ರಡಿಯಲ್ಲಿ ನವೆಂಬರ್-2025ರ ಮಾಹೆಯ ಗೌರವಧನ ಪಾವತಿಸಲು ಕೊರತೆ ಆಗಿರುವ ಅನುದಾನ ಹಾಗೂ ಡಿಸೆಂಬರ್ -2025ರ ಮಾಹೆಯಲ್ಲಿ ದಿನಾಂಕ 01-12-2025 ರಿಂದ 08-12-2025ರ ಅವಧಿಗೆ ಗೌರವಧನ ಪಾವತಿಸಲು ಒಟ್ಟು ರೂ.4,23,03,281-00 (ನಾಲ್ಕು ಕೋಟಿ ಇಪ್ಪತ್ತಮೂರು ಲಕ್ಷದ ಮೂರುಸಾವಿರದ ಎರಡು ನೂರ ಎಂಬತ್ತೊಂದು ರೂಪಾಯಿ ಮಾತ್ರ) ಗಳನ್ನು ಆದೇಶಕ್ಕೆ ಲಗತ್ತಿಸಿರುವ ಅನುಬಂಧದಲ್ಲಿರುವ ವಿವರಗಳಂತೆ ಸಂಬಂಧಪಟ್ಟ ಪ್ರಾಂಶುಪಾಲರುಗಳಿಗೆ ಬಿಡುಗಡೆ ಮಾಡಿ ನಿಯಮಾನುಸಾರ ಬಳಕೆ ಮಾಡಲು ಅನುಮತಿ ನೀಡಲಾಗಿದೆ.
ಷರತ್ತುಗಳು:
- ಉಲ್ಲೇಖಿತ ಸರ್ಕಾರದ ಆದೇಶದಲ್ಲಿನ ಎಲ್ಲಾ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುವುದು.
- ಅತಿಥಿ ಉಪನ್ಯಾಸಕರುಗಳು ನಿಯಮಾನುಸಾರ ಕಾರ್ಯಭಾರ ನಿರ್ವಹಿಸಿದ್ದಲ್ಲಿ ಮಾತ್ರ ಗೌರವಧನ ಪಾವತಿಸುವುದು. ತಪ್ಪಾದ ಪಾವತಿಗೆ ಸಂಬಂಧಪಟ್ಟ ಬಟವಾಡೆ ಅಧಿಕಾರಿಗಳ ಜವಾಬ್ದಾರರಾಗುವರು.
- ಅತಿಥಿ ಉಪನ್ಯಾಸಕರುಗಳ ದಿನಚರಿ ವಹಿಯನ್ನು ಸಂಬಂಧಪಟ್ಟ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಂಶುಪಾಲರು ದೃಢೀಕರಿಸುವುದು. ನಿದದಿತ ಕಾರ್ಯಭಾರ ಪೂರ್ಣಗೊಳಿಸಿದ್ದಲ್ಲಿ ಮಾತ್ರ ಗೌರವಧನ ಪಾವತಿಸುವುದು.
- ನೇಮಕಾತಿ/ ವರ್ಗಾವಣೆ ಹೊಂದಿ ಪೂರ್ಣಕಾಲಿಕ ಬೋಧಕರು ಕಾಲೇಜಿನಲ್ಲಿ ವರದಿ ಮಾಡಿಕೊಂಡಲ್ಲಿ ಸದರಿ ವಿಷಯದ ಅತಿಥಿ ಉಪನ್ಯಾಸಕರನ್ನು ಕೂಡಲೇ ಬಿಡುಗಡೆ ಮಾಡತಕ್ಕದ್ದು
- ಪ್ರಸ್ತುತ ಬಿಡುಗಡೆ ಮಾಡಿರುವ ಅನುದಾನವನ್ನು ದಿನಾಂಕ: 24.12.2025 ರ ಒಳಗಾಗಿ ಬಳಕೆ ಮಾಡಿಕೊಂಡು ಬಳಕೆ ಪ್ರಮಾಣ ಪತ್ರ ಸಲ್ಲಿಸುವುದು.





















