HomeLatest NewsGOOD NEWS : ರಾಜ್ಯದ 'ಅತಿಥಿ' ಉಪನ್ಯಾಸಕರಿಗೆ ಗುಡ್ ನ್ಯೂಸ್ : ಗೌರವಧನ ಪಾವತಿಸಲು ಸರ್ಕಾರದಿಂದ...

GOOD NEWS : ರಾಜ್ಯದ ‘ಅತಿಥಿ’ ಉಪನ್ಯಾಸಕರಿಗೆ ಗುಡ್ ನ್ಯೂಸ್ : ಗೌರವಧನ ಪಾವತಿಸಲು ಸರ್ಕಾರದಿಂದ ಅನುದಾನ ಬಿಡುಗಡೆ

ಬೆಂಗಳೂರು : 2025-26 ನೇ ಸಾಲಿನಲ್ಲಿ ಇಲಾಖಾ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ನವಂಬರ್-2025 ರ ಮಾಹೆಯ ಗೌರವಧನ ಪಾವತಿಗಾಗಿ ಈಗಾಗಲೇ ಅನುದಾನ ಬಿಡುಗಡೆ ಮಾಡಲಾಗಿದೆ. ನವೆಂಬರ್-2025ರ ಮಾಹೆಯ ಗೌರವಧನ ಪಾವತಿಸಲು ಕೊರತೆ 2 -20250 01-12-2025 ໖໐໖ 08-12-20250 ಅವಧಿಗೆ ಗೌರವಧನ ಪಾವತಿಸಲು ಅಗತ್ಯ ಇರುವ ಅನುದಾನ ಬಿಡುಗಡೆ ಮಾಡುವಂತೆ ಪ್ರಾಂಶುಪಾಲರುಗಳಿಂದ ಅನುದಾನ ಬೇಡಿಕೆ ಸ್ವೀಕೃತವಾಗುತ್ತಿದ್ದು, ಅದರಂತೆ ಅನುದಾನ ಬಿಡುಗಡೆ ಮಾಡಲು ಈ ಆದೇಶ ಹೊರಡಿಸಲಾಗಿದೆ.

ಇಲಾಖಾ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ಗೌರವಧನ ಪಾವತಿಸಲುಲೆ ಶೀ 2202-03-103-2-01 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಉಪ ಲೆಕ್ಕ ಶೀರ್ಷಿಕೆ ‘324’ ಅತಿಥಿ ಉಪನ್ಯಾಸಕರ ಗೌರವಧನ ರಡಿಯಲ್ಲಿ ನವೆಂಬರ್-2025ರ ಮಾಹೆಯ ಗೌರವಧನ ಪಾವತಿಸಲು ಕೊರತೆ ಆಗಿರುವ ಅನುದಾನ ಹಾಗೂ ಡಿಸೆಂಬರ್ -2025ರ ಮಾಹೆಯಲ್ಲಿ ದಿನಾಂಕ 01-12-2025 ರಿಂದ 08-12-2025ರ ಅವಧಿಗೆ ಗೌರವಧನ ಪಾವತಿಸಲು ಒಟ್ಟು ರೂ.4,23,03,281-00 (ನಾಲ್ಕು ಕೋಟಿ ಇಪ್ಪತ್ತಮೂರು ಲಕ್ಷದ ಮೂರುಸಾವಿರದ ಎರಡು ನೂರ ಎಂಬತ್ತೊಂದು ರೂಪಾಯಿ ಮಾತ್ರ) ಗಳನ್ನು ಆದೇಶಕ್ಕೆ ಲಗತ್ತಿಸಿರುವ ಅನುಬಂಧದಲ್ಲಿರುವ ವಿವರಗಳಂತೆ ಸಂಬಂಧಪಟ್ಟ ಪ್ರಾಂಶುಪಾಲರುಗಳಿಗೆ ಬಿಡುಗಡೆ ಮಾಡಿ ನಿಯಮಾನುಸಾರ ಬಳಕೆ ಮಾಡಲು ಅನುಮತಿ ನೀಡಲಾಗಿದೆ.
ಷರತ್ತುಗಳು:

  1. ಉಲ್ಲೇಖಿತ ಸರ್ಕಾರದ ಆದೇಶದಲ್ಲಿನ ಎಲ್ಲಾ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುವುದು.
  2. ಅತಿಥಿ ಉಪನ್ಯಾಸಕರುಗಳು ನಿಯಮಾನುಸಾರ ಕಾರ್ಯಭಾರ ನಿರ್ವಹಿಸಿದ್ದಲ್ಲಿ ಮಾತ್ರ ಗೌರವಧನ ಪಾವತಿಸುವುದು. ತಪ್ಪಾದ ಪಾವತಿಗೆ ಸಂಬಂಧಪಟ್ಟ ಬಟವಾಡೆ ಅಧಿಕಾರಿಗಳ ಜವಾಬ್ದಾರರಾಗುವರು.
  3. ಅತಿಥಿ ಉಪನ್ಯಾಸಕರುಗಳ ದಿನಚರಿ ವಹಿಯನ್ನು ಸಂಬಂಧಪಟ್ಟ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಂಶುಪಾಲರು ದೃಢೀಕರಿಸುವುದು. ನಿದದಿತ ಕಾರ್ಯಭಾರ ಪೂರ್ಣಗೊಳಿಸಿದ್ದಲ್ಲಿ ಮಾತ್ರ ಗೌರವಧನ ಪಾವತಿಸುವುದು.
  4. ನೇಮಕಾತಿ/ ವರ್ಗಾವಣೆ ಹೊಂದಿ ಪೂರ್ಣಕಾಲಿಕ ಬೋಧಕರು ಕಾಲೇಜಿನಲ್ಲಿ ವರದಿ ಮಾಡಿಕೊಂಡಲ್ಲಿ ಸದರಿ ವಿಷಯದ ಅತಿಥಿ ಉಪನ್ಯಾಸಕರನ್ನು ಕೂಡಲೇ ಬಿಡುಗಡೆ ಮಾಡತಕ್ಕದ್ದು
  5. ಪ್ರಸ್ತುತ ಬಿಡುಗಡೆ ಮಾಡಿರುವ ಅನುದಾನವನ್ನು ದಿನಾಂಕ: 24.12.2025 ರ ಒಳಗಾಗಿ ಬಳಕೆ ಮಾಡಿಕೊಂಡು ಬಳಕೆ ಪ್ರಮಾಣ ಪತ್ರ ಸಲ್ಲಿಸುವುದು.
For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular