HomeLatest NewsBREAKING : ರಾಜ್ಯದ 84 ತಾಲ್ಲೂಕುಗಳಿಗೆ ‘ವೈದ್ಯಾಧಿಕಾರಿ’ಗಳ ನೇಮಿಸಿ ಸರ್ಕಾರ ಆದೇಶ, ಇಲ್ಲಿದೆ ಸಂಪೂರ್ಣ ಮಾಹಿತಿ.!

BREAKING : ರಾಜ್ಯದ 84 ತಾಲ್ಲೂಕುಗಳಿಗೆ ‘ವೈದ್ಯಾಧಿಕಾರಿ’ಗಳ ನೇಮಿಸಿ ಸರ್ಕಾರ ಆದೇಶ, ಇಲ್ಲಿದೆ ಸಂಪೂರ್ಣ ಮಾಹಿತಿ.!

ಬೆಂಗಳೂರು : ರಾಜ್ಯದ 84 ತಾಲ್ಲೂಕುಗಳಿಗೆ ‘ವೈದ್ಯಾಧಿಕಾರಿ’ಗಳ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

2025ನೇ ಸಾಲಿನ ವಿಶೇಷ ಆಡಳಿತಾತ್ಮಕ ಹುದ್ದೆಗಳಿಗೆ ಉಲ್ಲೇಖಿತ ಸರ್ಕಾರದ ಆದೇಶ ಹಾಗೂ ಸುತ್ತೋಲೆಗಳಂತೆ ಕರ್ನಾಟಕ ರಾಜ್ಯ ನಾಗರೀಕ ಸೇವಾ (ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಅದ್ಯಾದೇಶ ಮತ್ತು ನಿಯಮ-2025 ರನ್ವಯ ದಿನಾಂಕ: 19.11.2025 Online ಮೂಲಕ ಸಮಾಲೋಚನೆ ನಡೆಸಲಾಗಿರುತ್ತದೆ. ಈ ಕೆಳಕಂಡ ಅಧಿಕಾರಿಗಳು ಸಮಾಲೋಚನೆಯ ಮೂಲಕ ಸ್ಥಳ ಆಯ್ಕೆ ಮಾಡಿಕೊಂಡಂತೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಷರತ್ತುಗಳು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  1. ಸದರಿ ಅಧಿಕಾರಿಗಳು 2025ನೇ ಸಾಲಿನ ವರ್ಗಾವಣೆಯಲ್ಲಿ ಪರಿಗಣಿಸಿದ ಪ್ರಕರಣವನ್ನು (category) ಕಡ್ಡಾಯವಾಗಿ ಸೇವಾ ಪುಸ್ತಕಗಳಲ್ಲಿ ನಮೂದಿಸಲು ತಿಳಿಸಲಾಗಿದೆ.
  2. ಸಂಬಂಧಪಟ್ಟ ಮೇಲಾಧಿಕಾರಿ/ ನಿಯಂತ್ರಣಾಧಿಕಾರಿಗಳು ವರ್ಗಾವಣೆಗೊಂಡಿರುವ ಅಧಿಕಾರಿಗಳನ್ನು ಪಲ್ಸ್ ಪೋಲಿಯೋ ಕಾರ್ಯಕ್ರಮದ ನಂತರ, ದಿನಾಂಕ:26.12.2025 ಅನ್ವಯವಾಗುವಂತೆ ಕರ್ತವ್ಯದಿಂದ ಬಿಡುಗಡೆಗೊಳಿಸುವ ಬಗ್ಗೆ ಸೂಕ್ತ ಕ್ರಮವಹಿಸಲು ಸೂಚಿಸಲಾಗಿದೆ.
  3. ಈ ಮೇಲಿನ ಅಧಿಕಾರಿಗಳನ್ನು ಸ್ಥಳ ನಿಯುಕ್ತಿಗೊಳಿಸಿರುವ ಸ್ಥಳಕ್ಕೆ ದಿನಾಂಕ:26.12.2025 ಕ್ಕೆ ಅನ್ವಯವಾಗುವಂತೆ, 07 ದಿನಗಳ ಒಳಗಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಸೂಚಿಸಿದೆ ಹಾಗೂ ಎಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಅಯಾ ಅಯಾ ಜಿಲ್ಲೆಗಳಲ್ಲಿ ವರ್ಗಾವಣೆಗೊಂಡಿರುವ ಅಧಿಕಾರಿಯು ಕರ್ತವ್ಯದಿಂದ ಬಿಡುಗಡೆಗೊಂಡ ಹಾಗೂ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವ ಬಗ್ಗೆ ವರದಿಯನ್ನು ಆಯುಕ್ತಾಲಯಲಯಕ್ಕೆ ಸಲ್ಲಿಸಲು ಸೂಚಿಸಲಾಗಿದೆ.
  4. ಅಧಿಕಾರಿಗಳು ಕರ್ತವ್ಯದಿಂದ ಬಿಡುಗಡೆಗೊಂಡು ಸಮಾಲೋಚನೆಯ ಮೂಲಕ ವರ್ಗಾವಣೆಗೊಂಡು ನಿಯುಕ್ತಿಗೊಳಿಸಿರುವ ಸ್ಥಳಕ್ಕೆ ವರದಿ ಮಾಡಿಕೊಳ್ಳದೇ ಇದ್ದಲ್ಲಿ ನಿಯಮಾನುಸಾರ ಶಿಸ್ತುಕ್ರಮವಹಿಸಲಾಗುತ್ತದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular