ಮಂಗಳೂರು : ಮಂಗಳೂರಿನ ಆರ್ ಟಿ ಒ ಕಚೇರಿ, ಗದಗ ಜಿಲ್ಲಾಡಳಿತ ಭವನ ಸ್ಪೋಟಿಸುವುದಾಗಿ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಆತಂಕ ಸೃಷ್ಟಿಯಾಗಿದೆ.
ಮಂಗಳೂರಿನ ಆರ್ ಟಿ ಒ ಕಚೇರಿ ಸ್ಪೋಟಿಸುವುದಾಗಿ ಹಾಗೂ ಗದಗ ಜಿಲ್ಲಾಡಳಿತ ಭವನದಲ್ಲಿ ಬಾಂಬ್ ಸ್ಪೋಟಿಸುವುದಾಗಿ ಇಮೇಲ್ ಬಂದಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
5 ಬಾಂಬ್ ಗಳಿಂದ ಜಿಲ್ಲಾಡಳಿತ ಭವನ ಸ್ಪೋಟಿಸುವಿದಾಗಿ ಸಂದೇಶ ಬಂದಿದ್ದು, ಸಿಬ್ಬಂದಿಗಳು ಕಂಗಾಲಾಗಿದ್ದಾರೆ. ಅರ್ನಾ ಅಶ್ವಿನ್ ಶೇಖರ್ ಎಂಬ ಇ-ಮೇಲ್ ಐಡಿಯಿಂದ ಡಿಸಿ ಕಚೇರಿ ಇಮೇಲ್-ಗೆ ಬೆದರಿಕೆ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅದೇ ರೀತಿ ಮಂಗಳೂರಿನ ‘RTO’ ಕಚೇರಿ ಸ್ಪೋಟಿಸುವುದಾಗಿ ಕೂಡ ಬೆದರಿಕೆ (Email) ಮೇಲ್ ಬಂದಿದ್ದು, ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಮಂಗಳೂರಿನ ನೆಹರು ಮೈದಾನದಲ್ಲಿರುವ ಆರ್ ಟಿ ಒ ಕಚೇರಿಗೆ ಮೇಲ್ ಬಂದಿದೆ.

