ಕೋಲ್ಕತ್ತಾ: ಡಿಸೆಂಬರ್ 13 ರಂದು ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಗದ್ದಲದ ಕಾರಣ ಬಂಧಿಸಲ್ಪಟ್ಟ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಗೋಟ್ ಇಂಡಿಯಾ ಪ್ರವಾಸದ ಸಂಘಟಕ ಶತಾದ್ರು ದತ್ತ ಅವರಿಗೆ ಜಾಮೀನು ನಿರಾಕರಿಸಲಾಗಿದೆ.
ಜಾಮೀನು ನಿರಾಕರಿಸಿದ ನಂತರ, ಅವರನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಶನಿವಾರ ಫುಟ್ಬಾಲ್ ದಿಗ್ಗಜ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಕಾರ್ಯಕ್ರಮವನ್ನು ಮೊಟಕುಗೊಳಿಸಿ ಹಠಾತ್ ನಿರ್ಗಮಿಸಿದ್ದರಿಂದ ನಿರಾಸೆಯಾದ ಅವರ ಅಭಿಮಾನಿಗಳು ದಾಂದಲೆ ನಡೆಸಿದ್ದರು. ತಡೆ ಗೂಡೆಗಳನ್ನು ದಾಟಿ ಕ್ರೀಡಾಂಗಣಕ್ಕೆ ನುಗ್ಗಿ ಪಿಚ್ ಗೆ ಹಾನಿ ಮಾಡಿದ್ದಲ್ಲದೆ ಬ್ಯಾನರ್, ಟೆಂಟ್ ಗಳನ್ನು ಧ್ವಂಸಗೊಳಿಸಿದರು. ಘಟನೆಯ ನಂತರ ಕಾರ್ಯಕ್ರಮದ ಮುಖ್ಯ ಆಯೋಜಕ ಶತಾದ್ರು ದತ್ತ ಅವರನ್ನು ಬಂಧಿಸಲಾಗಿತ್ತು.

