HomeLatest NewsBREAKING: ದಕ್ಷಿಣ ಆಫ್ರಿಕಾದಲ್ಲಿ ದುರಂತ: ನಿರ್ಮಾಣ ಹಂತದ ದೇಗುಲ ಕುಸಿದು ಓರ್ವ ಭಾರತೀಯ ಸೇರಿ ನಾಲ್ವರು...

BREAKING: ದಕ್ಷಿಣ ಆಫ್ರಿಕಾದಲ್ಲಿ ದುರಂತ: ನಿರ್ಮಾಣ ಹಂತದ ದೇಗುಲ ಕುಸಿದು ಓರ್ವ ಭಾರತೀಯ ಸೇರಿ ನಾಲ್ವರು ದುರ್ಮರಣ

ಕೇಪ್ ಟೌನ್: ದಕ್ಷಿಣ ಆಫ್ರಿಕಾದಲ್ಲಿ ನಿರ್ಮಾಣ ಹಂತದ ದೇಗುಲ ಕುಸಿದು ಬಿದ್ದು ದುರಂತ ಸಂಭವಿಸಿದ್ದು, ಓರ್ವ ಭಾರತೀಯ ಸೇರಿ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.

ದಕ್ಷಿಣ ಆಫ್ರಿಕಾದ ಇಥೆಕ್ವಿನಿಯ ರೆಡ್ ಕ್ಲಿಫ್ ಪಟ್ಟಣದಲ್ಲಿ ಅಹೋಬಿಲಂ ದೇವಾಲಯ ನಿರ್ಮಾಣಹಂತದ ಕಾಮಗಾರಿ ವೇಳೆ ಕುಸಿದು ಬಿದ್ದಿದೆ. ದೇಗುಲದ ವ್ಯವಸ್ಥಾಪಕ ವಿ.ಕಿ.ಜೈರಾಜ್ ಪಾಂಡೆ (52) ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.

ನಾಲ್ಕು ಅಂತಸ್ತಿನ ನಿರ್ಮಾಣ ಹಂತದ ಅಹೋಬಿಲಂ ದೇವಾಲಯ ಕುಸಿದು ಬಿದ್ದಿದ್ದು, ಅವೇಶಷಗಳಡಿ ಸಿಲುಕಿ ನಾಲ್ವರು ಮೃತಪಟ್ಟಿದ್ದಾರೆ. ಎರಡು ದಿನಗಳ ಹಿಂದೆಯೇ ಈ ದುರಂತ ಸಂಭವಿಸಿದೆ. ಅವಶೇಷಗಳ ಅಡಿ ಇನ್ನು ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಶೋಧ ಕಾರ್ಯ ಸ್ಥಗಿತಗೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular