HomeLatest Newsಕ್ರಿಸ್ ಮಸ್, ಹೊಸ ವರ್ಷಾಚರಣೆಗೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಯಶವಂತಪುರ-ಕಾರವಾರ ನಡುವೆ ಸ್ಪೆಷಲ್ ರೈಲು: ಇಲ್ಲಿದೆ...

ಕ್ರಿಸ್ ಮಸ್, ಹೊಸ ವರ್ಷಾಚರಣೆಗೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಯಶವಂತಪುರ-ಕಾರವಾರ ನಡುವೆ ಸ್ಪೆಷಲ್ ರೈಲು: ಇಲ್ಲಿದೆ ಮಾಹಿತಿ

ಬೆಂಗಳೂರು: ಕ್ರಿಸ್ ಮಸ್ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ಇಲಾಖೆ ವಿಶೇಶ ರೈಲು ಸಂಚಾರ ಕಲ್ಪಿಸಿದೆ. ಬೆಂಗಳೂರಿನ ಯಶವಂತಪುರ ಹಾಗೂ ಕಾರವಾರ ನಡುವೆ ಈ ವಿಶೇಷ ಎಕ್ಸ್​ಪ್ರೆಸ್ ರೈಲು ಸಂಚರಿಸಲಿದೆ.

ಯಶವಂತಪುರ-ಕಾರವಾರ ವಿಶೇಷ ರೈಲು ವೇಳಾಪಟ್ಟಿ, ನಿಲುಗಡೆ ವಿವರ ಇಲ್ಲಿದೆ.

ಯಶವಂತಪುರ – ಕಾರವಾರ – ಯಶವಂತಪುರ ಮಾರ್ಗದಲ್ಲಿ ವಿಶೇಷ ಎಕ್ಸ್ ಪ್ರೆಸ್ ರೈಲು ಡಿಸೆಂಬರ್ 24 ರಿಂದ 28 ರವರೆಗೆ ನಾಲ್ಕು ದಿನಗಳಲ್ಲಿ ಎರಡೂ ಕಡೆಗೆ ಸಂಚರಿಸಲಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೈಲು ಸಂಖ್ಯೆ 06267 ಯಶವಂತಪುರದಿಂದ ಕಾರವಾರಕ್ಕೆ 24.12.2025 ಮತ್ತು 27.12.2025 ರಂದು ಸಂಚರಿಸಲಿದೆ. ಯಶವಂತಪುರದಿಂದ ಮಧ್ಯಾಹ್ನ 12 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 6.10ಕ್ಕೆ ತಲುಪಲಿದೆ.

ರೈಲು ಸಂಖ್ಯೆ 06268 ಕಾರವಾರದಿಂದ ಯಶವಂತಪುರಕ್ಕೆ 25.12.2025 ಮತ್ತು 28.12.2025 ರಂದು ಸಂಚಾರ ಮಾಡಲಿದೆ. ಕಾರವಾರದಿಂದ ಮಧ್ಯಾಹ್ನ 12 ಗಂಟೆಗೆ ಹೊರಟು ಯಶವಂತಪುರಕ್ಕೆ ಮರುದಿನ ಬೆಳಗ್ಗೆ 4.3ಕ್ಕೆ ತಲುಪಲಿದೆ.

ವಿಶೇಷ ಎಕ್ಸ್​​ಪ್ರೆಸ್ ರೈಲಿನ ನಿಲುಗಡೆ:

ಯಶವಂತಪುರ – ಕಾರವಾರ ವಿಶೇಷ ಎಕ್ಸ್​​ಪ್ರೆಸ್ ರೈಲು ಚಿಕ್ಕಬಣಾವರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಮಣ್ಯ ರೋಡ್, ಕಬಕಪುತ್ತೂರು, ಬಂಟವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಬರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್ ಮತ್ತು ಅಂಕೋಲ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಪ್ರಯಾಣಿಕರು ತಮ್ಮ ಟಿಕೆಟ್‌ಗಳನ್ನು IRCTC ವೆಬ್‌ಸೈಟ್, ರೈಲು ನಿಲ್ದಾಣ ಕೌಂಟರ್‌ಗಳು ಅಥವಾ NTES ಆಪ್ ಮೂಲಕ ಪರಿಶೀಲಿಸಿ ಬುಕ್ ಮಾಡಬಹುದು.

For Latest News Updates, Join Our Whatsapp Community🚩
RELATED ARTICLES

Most Popular