ಬೆಂಗಳೂರು : ನಟ ದರ್ಶನ್ & ಗ್ಯಾಂಗ್ ಗೆ ಮತ್ತೊಂದು ಶಾಕ್ ಎದುರಾಗಿದ್ದು, ಆರೋಪಿಗಳಿಂದ ವಶಪಡಿಸಿಕೊಂಡಿದ್ದ 82 ಲಕ್ಷ ಹಣವನ್ನ ಐಟಿ ಇಲಾಖೆ ವಶಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಹೌದು,. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಂದ ವಶಪಡಿಸಿಕೊಂಡ 82 ಲಕ್ಷ ಹಣವನ್ನ ಐಟಿ ವಶಕ್ಕೆ ನೀಡಿದೆ. ಅರ್ಜಿ ಪುರಸ್ಕರಿಸಿದ ಬೆಂಗಳೂರಿನ 57 ನೇ ಸಿಸಿ ಹೆಚ್ ಕೋರ್ಟ್ 82 ಲಕ್ಷ ಹಣವನ್ನ ಐಟಿ ಇಲಾಖೆ ವಶಕ್ಕೆ ನೀಡಿದೆ.
ಆದಾಯ ತೆರಿಗೆ ಇಲಾಖೆ ಮುಂದೆ ನಟ ದರ್ಶನ್ ತಕರಾರು ಅರ್ಜಿ ಸಲ್ಲಿಸಬಹುದು. ಐಟಿ ಹಣ ಬಿಡುಗಡೆ ಮಾಡಿದ್ರೆ ದರ್ಶನ್ ಹಣ ಪಡೆಯಬಹುದು ಎಂದು ಕೋರ್ಟ್ ಹೇಳಿದೆ.
ನಟ ದರ್ಶನ್ ಗ್ಯಾಂಗ್ ನಿಂದ ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ.ದೋಷಾರೋಪಗಳನ್ನು ದರ್ಶನ್ ಮತ್ತು ಸಹಚರರು ನಿರಾಕರಿಸಿರುವ ಹಿನ್ನೆಲೆಯಲ್ಲಿ ವಿಚಾರಣೆಗೆ ಒಳಪಡಿಸಬೇಕಾದ ಸಾಕ್ಷಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ. ಪ್ರಾಸಿಕ್ಯೂಷನ್ ನಿಂದ ಸಾಕ್ಷಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿದ್ದು, ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಪಡಿಸಿದ ನಂತರ ಸಾಕ್ಷಿಗಳಿಗೆ ಸಮನ್ಸ್ ನೀಡಲಾಗುವುದು.ಸಾಕ್ಷಿಗಳಿಗೆ ಸಮನ್ಸ್ ಜಾರಿಗೊಳಿಸಿ ನ್ಯಾಯಾಲಯ ವಿಚಾರಣೆ ಆರಂಭಿಸಲಿದೆ. ದರ್ಶನ್ ಕೋರಿಕೆಯಂತೆ ಜೈಲಿನ ಅಧಿಕಾರಿಗಳು ಕಂಬಳಿ ಒದಗಿಸಿದ್ದಾರೆ.
