BIG NEWS : ರಾಜ್ಯದ ಜನತೆ ಗಮನಕ್ಕೆ : ‘ಡಿಜಿಟಲ್ ಇ– ಸ್ಟ್ಯಾಂಪ್’ ಪಡೆಯುವುದು ಹೇಗೆ..? ಇಲ್ಲಿದೆ ಮಾಹಿತಿ

ಬೆಂಗಳೂರು : ನೋಂದಣಿ ಮತ್ತು ನೋಂದಣಿಯೇತರ ಛಾಪಾ ಕಾಗದ ವಹಿವಾಟುಗಳಿಗೆ ಬಳಸುವ ‘ಇ– ಸ್ಟ್ಯಾಂಪ್‌’ ಬದಲಿಗೆ ‘ಡಿಜಿಟಲ್‌ ಇ– ಸ್ಟ್ಯಾಂಪ್‌’ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಸ್ಟ್ಯಾಂಪ್ ವಂಚನೆ ಮತ್ತು ಭದ್ರತಾ ಲೋಪವನ್ನು ಸಂಪೂರ್ಣ ತೊಡೆದು ಹಾಕಲು ಈ ಹೊಸ ವ್ಯವಸ್ಥೆ ಪರಿಚಯಿಸಲಾಗಿದ್ದು, ಮುಂದಿನ ದಿನಗಳಲ್ಲಿ ‘ಡಿಜಿಟಲ್ ಇ-ಸ್ಟ್ಯಾಂಪ್‌’ ಕಡ್ಡಾಯಗೊಳಿಸಲಾಗುವುದು ಎಂದು ಕಂದಾಯ ಸಚಿವರಾದ ಕೃಷ್ಣಭೈರೇಗೌಡ  ತಿಳಿಸಿದ್ದಾರೆ.

ನಾಗರಿಕರು ಮಧ್ಯವರ್ತಿಗಳ ನೆರವಿಲ್ಲದೆ, ಮನೆಯಲ್ಲಿಯೇ ಕುಳಿತು ‘ಡಿಜಿಟಲ್‌ ಇ– ಸ್ಟ್ಯಾಂಪ್‌’ ತಯಾರಿಸಿಕೊಳ್ಳಬಹುದು. ಇಂಟರ್‌ನೆಟ್‌ ಇದ್ದರೆ 24×7 ಜಗತ್ತಿನಲ್ಲಿ ಎಲ್ಲಿಯೇ ಕುಳಿತು ಈ ಸೇವೆಯನ್ನು ಪಡೆಯಬಹುದು. ಎಲ್ಲ ಸೇವೆಗಳು ಸಂಪೂರ್ಣ ಡಿಜಿಟಲ್ ಆಗಿರಲಿದೆ. ಸುರಕ್ಷಿತ ಮತ್ತು ವೇಗವಾಗಿ ಆನ್‌ಲೈನ್‌ ಪಾವತಿ ಮಾಡಲು ಕೂಡಾ ಅವಕಾಶವಿದೆ ಎಂದು ಮಾಹಿತಿ ನೀಡಿದ್ದಾರೆ.

ಡಿಜಿಟಲ್ ಸ್ಟಾಂಪ್ ಪಡೆಯುವುದು ಹೇಗೆ?
* https://kaveri.karnataka.gov.in/landing-page ಭೇಟಿ ನೀಡಿ.

*ಒಂದೇ ಬಾರಿ ನೋಂದಣಿ ಖಾತೆ ಸೃಷ್ಟಿಸಿ.
*ಲಾಗಿನ್ ಆದ ಬಳಿಕ ಬೇಕಾದ ದಸ್ತಾವೇಜಿನ ಪ್ರಕಾರವನ್ನು (ಉದಾ: ಬಾಡಿಗೆ ಒಪ್ಪಂದ, ಅಫಿಡವಿಟ್, ಮಾರಾಟ ಒಪ್ಪಂದ) ಆಯ್ಕೆ ಮಾಡಿ ವಿವರಗಳನ್ನು ಭರ್ತಿ ಮಾಡಿ.
*ಅರ್ಜಿದಾರರು ಹಾಗೂ ಸಹಿ ಮಾಡುವ ಎಲ್ಲರೂ Aadhaar ಆಧಾ ಪರಿಶೀಲನೆ ಮೂಲಕ ಗುರುತು ದೃಢೀಕರಿಸಿ.
ಆಸ್ತಿ ಸಂಬಂಧಿತ ದಸ್ತಾವೇಜುಗಳಿದ್ದರೆ, ಸಿಸ್ಟಂ ಸರ್ಕಾರಿ ಡೇಟಾ ಬೇಸ್‌ಗಳಿಂದ ಆಸ್ತಿ ಮಾಹಿತಿಯನ್ನು ಸ್ವಯಂಚಾಲಿತವಾಗಿ ಪರಿಶೀಲಿಸಿ
*ನಿಮ್ಮ ಸ್ವಂತ ವಿಷಯವನ್ನು ಸೇರಿಸಿ ದಸ್ತಾವೇಜನ್ನು ಸಂಪೂರ್ಣವಾ ಡಿಜಿಟಲ್ ರೂಪದಲ್ಲಿ ಪಡೆಯಬಹುದು.
ಸ್ಟ್ಯಾಂಪ್ ಶುಲ್ಕ ಲೆಕ್ಕ ಹಾಕಿದ ನಂತರ, ಖಜಾನೆ ಪಾವತಿ ಗೇಟ್‌ವೇ ಮೂಲಕ ಪಾವತಿಸಿ.
*ಪಾವತಿ ದೃಢಪಟ್ಟ ನಂತರ ಸಿಸ್ಟಂ ಡಿಜಿಟಲ್ ಇ-ಸ್ಟ್ಯಾಂಪ್ ಸೃಷ್ಟಿಯ
*ಎಲ್ಲರ ಸಹಿ ಪಡೆಯಲು ಅವರ ಮೊಬೈಲ್‌ಗೆ ಲಿಂಕ್ ಬರುತ್ತದೆ. ಅಂ Aadhaar e-Sign ಅಥವಾ DSC ಮೂಲಕ ಸಹಿ ಮಾಡಬಹುದು.
*ಎಲ್ಲರೂ ಸಹಿ ಮಾಡಿದ ನಂತರ ನಿಮ್ಮ ಅಂತಿಮ ಸ್ಟ್ಯಾಂಪ್ ಮಾಡ ಹಾಗೂ ಸಹಿ ಮಾಡಲ್ಪಟ್ಟ ದಸ್ತಾವೇಜು ಕಾನೂನಿನಂತೆ ಮಾನ್ಯವಾಗುತ್ತದೆ.
*ಇದನ್ನು ಡೌನ್ಹೋಡ್ ಮಾಡಬಹುದು ಹಾಗೂ ನೋಂದಣಿಗೆ ಬಳಸಬಹುದು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read